ಲಖನೌ:ಪ್ರಧಾನ ಮಂತ್ರಿ ಆವಾಸ್​ ಯೋಜನೆ (ಪಿಎಂಎವೈ)ಯ ಹಣ ಸ್ವೀಕರಿಸಿದ ಬಳಿಕ ನಾಲ್ವರು ವಿವಾಹಿತ ಮಹಿಳೆಯರು ತಮ್ಮ ಗಂಡಂದಿರಿಗೆ ಕೈಕೊಟ್ಟು ಲವರ್ಸ್​ ಜೊತೆ ಎಸ್ಕೇಪ್​ ಆಗಿರುವ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ಪಿಎಂಎವೈ ಕೇಂದ್ರೀಯ ಯೋಜನೆಯಾಗಿದ್ದು, ಬಡವರಲ್ಲಿ ನಗರ ವಸತಿ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಸರ್ಕಾರವು ಫಲಾನುಭವಿಗಳ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ. ಇದರಿಂದ ಅವರು ಮನೆ ಹೊಂದಬಹುದು.
ಈ ಯೋಜನೆಯಡಿ ಕೇಂದ್ರ ಸರ್ಕಾರವು ಕುಟುಂಬದ ಮುಖ್ಯಸ್ಥೆಯಾದ ಮಹಿಳೆಯನ್ನು ಮನೆಯ ಮಾಲೀಕ ಅಥವಾ ಸಹ-ಮಾಲೀಕರಾಗಿರುವುದನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಹಣವು ಅವರ ಖಾತೆಗಳಿಗೆ ಜಮಾ ಆಗುತ್ತದೆ. ಈ ಯೋಜನೆಯಡಿ ಫಲಾನುಭವಿಗಳಾದ ನಾಲ್ವರು ಮಹಿಳೆಯರು ಮೊದಲ ಕಂತಿನ 50 ಸಾವಿರ ರೂ. ಹಣವನ್ನು ಸ್ವೀಕರಿಸಿದರು. ಇದಾದ ಬಳಿಕ ನಾಲ್ವರು ಕೂಡ ತಮ್ಮ ಗಂಡಂದಿರಿಗೆ ಕೈಕೊಟ್ಟ ತಮ್ಮ ತಮ್ಮ ಲವರ್ಸ್​ ಜೊತೆ ಪರಾರಿಯಾಗಿದ್ದಾರೆ.
ಹಣ ಸ್ವೀಕರಿಸಿದರೂ ಮನೆ ನಿರ್ಮಾಣ ಕಾರ್ಯ ಆರಂಭವಾಗದಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಮನೆಯ ಕೆಲಸವನ್ನು ಆರಂಭಿಸುವಂತೆ ಅಧಿಕಾರಿಗಳು ನೋಟಿಸ್​ ಕಳುಹಿಸಿದರು. ಆದರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಮಹಿಳೆಯರ ಗಂಡಂದಿರೇ ಸ್ಥಳೀಯ ಕಚೇರಿಗೆ ತೆರಳಿ ತಮ್ಮ ಪತ್ನಿಯರು ಹಣದ ಜೊತೆ ಲವರ್ಸ್​ ಜೊತೆ ಓಡಿ ಹೋಗಿದ್ದಾರೆ ಎಂದು ತಿಳಿಸಿದರು.
ಎರಡನೇ ಕಂತಿನ ಹಣವನ್ನು ಅವರ ಖಾತೆಗಳಿಗೆ ಕ್ರೆಡಿಟ್​ ಮಾಡಬೇಡಿ ಅಂತಾ ಇದೇ ಸಂದರ್ಭದಲ್ಲಿ ಸಂತ್ರಸ್ತ ಗಂಡಂದಿರು ಕೇಳಿಕೊಂಡರು. ಈ ಕತೆಯನ್ನು ಕೇಳಿ ಅಧಿಕಾರಿಗಳೇ ಒಂದು ಕ್ಷಣ ಅವಕ್ಕಾದರು. ಅಲ್ಲದೆ, ಮಹಿಳೆಯರಿಂದ ಹಣ ಹೇಗೆ ವಸೂಲಿ ಮಾಡುವುದು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಗಂಡಂದಿರು ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ತಮ್ಮ ಪತ್ನಿಯರ ವಿರುದ್ಧ ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್​)
ಬೀದರ್​: ಮದುವೆ ಆಗಲ್ಲ ಎಂದಿದ್ದಕ್ಕೆ ಕೆರೆ ಬಳಿ ಕರೆದೊಯ್ದು ಯುವತಿಯ ಉಸಿರು ನಿಲ್ಲಿಸಿದ ಪಾಗಲ್​ ಪ್ರೇಮಿ

ಅಸಹಜ ಲೈಂಗಿಕ ಕ್ರಿಯೆ, ವರದಕ್ಷಿಣೆ ಕಿರುಕುಳ ಆರೋಪ: ರಾಖಿ ಪತಿ ಆದಿಲ್​ಗೆ ನ್ಯಾಯಾಂಗ ಬಂಧನ

ಸಂಸತ್ತಿನಲ್ಲಿ ಪಠಾಣ್​ ಸಿನಿಮಾ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ! ಶಾರುಖ್​ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eight =
Remember me
