ಪಾನ್ಯಂ:ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ವ್ಯಕ್ತಿಯೊಬ್ಬನ ತಪ್ಪಿಗಾಗಿ ಆತನ ಜತೆಗೆ ಆತನ ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿ ನಾಲ್ವರು ಜೀವ ಕಳೆದುಕೊಂಡಂತಾಗಿದೆ.
ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯ ಪಾನ್ಯಂ ಮಂಡಲದ ಕೌಲೂರು ಎಂಬಲ್ಲಿ ಈ ಪ್ರಕರಣ ನಡೆದಿದೆ. ಶೇಖ್ ಅಬ್ದುಲ್​ ಸಲಾಮ್​ (45), ಪತ್ನಿ ನೂರ್ ಜಹಾನ್​ (43), ಪುತ್ರಿ ಸಲ್ಮಾ (14) ಹಾಗೂ ಪುತ್ರ ದಾದಾ ಖಲಂದರ್ ಮೃತಪಟ್ಟಿದ್ದಾರೆ. ರೈಲಿಗೆ ಮೈಯೊಡ್ಡಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಲಾಮ್​ ಮೇಲೆ ಕಳ್ಳತನದ ಆರೋಪವಿದ್ದು, ಚಿನ್ನದ ಮಳಿಗೆಯಲ್ಲಿನ ಕೆಲಸವನ್ನೂ ಕೆಲವು ದಿನಗಳ ಹಿಂದೆ ಕಳೆದುಕೊಂಡಿದ್ದ. ನಂತರ ಜಾಮೀನು ಸಿಕ್ಕಿದ್ದು, ಕಳೆದೊಂದು ತಿಂಗಳಿನಿಂದ ಬಾಡಿಗೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಪತ್ನಿಯನ್ನು ಡ್ರಾಪ್ ಮಾಡುವ ನೆಪದಲ್ಲಿ ಬುಧವಾರ ಕರೆದೊಯ್ದಿದ್ದ ಆತ ಜತೆಗೆ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಪುತ್ರಿ, ನಾಲ್ಕನೇ ಕ್ಲಾಸ್​ನಲ್ಲಿ ಓದುತ್ತಿದ್ದ ಪುತ್ರನನ್ನೂ ಕರೆದೊಯ್ದು, ಸೀದಾ ಕೌಲೂರು ರೈಲ್ವೆ ಸ್ಟೇಷನ್​ಗೆ ಹೋಗಿ ಈ ಕೃತ್ಯವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + thirteen =
Remember me
