ನವದೆಹಲಿ:ಕರೊನಾ ಲಸಿಕೆ ಪಡೆದ ನಾಲ್ಕೇ ತಿಂಗಳಲ್ಲಿ ರೋಗ ತಡೆಯುವ ಪ್ರತಿಕಾಯದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಭಾರತದಲ್ಲಿ ನಡೆಸಿದ ಅಧ್ಯಯನವೊಂದು ಕಂಡುಕೊಂಡಿದೆ. ಪ್ರತಿಕಾಯ ಇಳಿಕೆಯಿಂದ ಜನರು ರೋಗ ನಿರೋಧಿಸುವ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆನ್ನುವುದು ಇದರ ಅರ್ಥವಲ್ಲ ಎಂದು ಅಧ್ಯಯನ ತಿಳಿಸಿದೆ. ಎರಡೂ ಡೋಸ್​ ವ್ಯಾಕ್ಸಿನ್​ ಪಡೆದ 614 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಅಧ್ಯಯನದಿಂದ ಇದು ಗೊತ್ತಾಗಿದೆ. ಭುವನೇಶ್ವರದಲ್ಲಿರುವ ಪ್ರಾದೇಶಿಕ ವೈದ್ಯಕಿಯ ಸಂಶೋಧನಾ ಕೇಂದ್ರ ಈ ಅಧ್ಯಯನ ನಡೆಸಿತ್ತು. ಹೆಚ್ಚುವರಿ ಬೂಸ್ಟರ್​ ಡೋಸ್​ ಕೊಡುವ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಈ ಅಧ್ಯಯನ ನೆರವಾಗುವ ಸಂಭವವಿದೆ.
ಮೂ ಪ್ರಭೇದ ದೇಶದಲ್ಲಿ ಇಲ್ಲ:ಕರೊನಾ ವೈರಸ್​ನ ಮೂ ಅಥವಾ ಸಿ.1.2 ಪ್ರಭೇದಗಳು ಇದುವರೆಗೆ ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ದೇಶದ ಜಿನೋಮ್​ ಸೀಕ್ವೆನ್ಸಿಂಗ್​ ಜಾಲವಾದ ಇನ್ಸಾಕಾಗ್​ ತಿಳಿಸಿದೆ. ಡೆಲ್ಟಾ ಹಾಗೂ ಅದರ ಉಪ ಪ್ರಭೇದಗಳೇ ಭಾರತದಲ್ಲಿ ಹೆಚ್ಚು ಕಳವಳಕಾರಿ ರೂಪಾಂತರಿಗಳಾಗಿ ಮುಂದುವರಿದಿವೆ ಎಂದು ಅದು ತಿಳಿಸಿದೆ.
6 ಅಡಿ ಅಂತರ ಸಾಲದು: ಮನೆ, ಕಚೇರಿ ಮುಂತಾದ ಒಳಾಂಗಣಗಳಲ್ಲಿ ಕರೊನಾ ವೈರಸ್​ ತಡೆಯಲು ಆರು ಅಡಿಗಳ ಅಂತರ ಕಾಪಾಡುವ ನಿಯಮದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಮೆರಿಕದಲ್ಲಿ ನಡೆದ ಹೊಸ ಅಧ್ಯಯನವೊಂದು ಅಭಿಪ್ರಾಯಪಟ್ಟಿದೆ. ವೆಂಟಿಲೇಷನ್​ ಮೂಲಕ ಸಾಗುವ ಗಾಳಿಯ ಪ್ರಮಾಣ, ವಿವಿಧ ವೆಂಟಿಲೇಷನ್​ ಮಾದರಿಗಳಲ್ಲಿ ಒಳಗೊಂಡಿರುವ ಒಳಾಂಗಣ ಗಾಳಿಯ ಹರಡುವಿಕೆ ಮತ್ತು ಉಸಿರಾಟ ಹಾಗೂ ಮಾತನಾಡುವಾಗ ವೈರಸ್​ ಕಣಗಳು ಹೊರಹೊಮ್ಮುವ ವಿಚಾರಗಳನ್ನು ಪರಿಗಣಿಸಿ ಸಂಶೋಧಕರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ.
ಸ್ಪುಟ್ನಿಕ್​ 3ನೇ ಹಂತದ ಪರೀಕ್ಷೆಗೆ ಅಸ್ತುಭಾರತೀಯರ ಮೇಲೆ ರಷ್ಯಾದ ಸ್ಪುಟ್ನಿಕ್​ ಲೈಟ್​ ಲಸಿಕೆಯ 3ನೇ ಹಂತದ ಪರೀೆ ನಡೆಸಲು ಭಾರತೀಯ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) ಬುಧವಾರ ಅನುಮತಿ ನೀಡಿದ್ದಾರೆ. ಸ್ಪುಟ್ನಿಕ್​ ಲೈಟ್​, ಏಕ ಡೋಸ್​ ಕೋವಿಡ್​ ಲಸಿಕೆಯಾಗಿದೆ. ಬಹುತೇಕ ಎರಡು ಡೋಸ್​ ಲಸಿಕೆಗಳಿಗಿಂತ ಏಕ ಡೋಸ್​ ಸ್ಪುಟ್ನಿಕ್​ ಲಸಿಕೆಯ ದಕ್ಷತೆ ಶೇಕಡ 78.6ರಿಂದ ಶೇ. 83.7ರಷ್ಟಿದೆ ಎಂಬ ಇತ್ತೀಚಿನ ಅಧ್ಯಯನ ವರದಿಯ ಹಿನ್ನೆಲೆಯಲ್ಲಿ ಡಿಸಿಜಿಐ ಅನುಮೋದನೆ ಕೊಟ್ಟಿದೆ. ವೈದ್ಯಕಿಯ ಪತ್ರಿಕೆ “ದಿ ಲ್ಯಾನ್ಸೆಟ್​’ನಲ್ಲಿ ವರದಿ ಪ್ರಕಟವಾಗಿತ್ತು. ಕೇಂದ್ರೀಯ ಔಷಧಗಳ ಮಾನಕ ನಿಯಂತ್ರಣ ಸಂಸ್ಥೆ ಜುಲೈನಲ್ಲಿ ಸ್ಪುಟ್ನಿಕ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ನಿರಾಕರಿಸಿತ್ತು. ಭಾರತದಲ್ಲೇ 3ನೇ ಹಂತದ ಪರೀೆ ನಡೆಯುವುದು ಅಗತ್ಯ ಎಂದು ಅದು ಪ್ರತಿಪಾದಿಸಿತ್ತು.
ದೇಶದಲ್ಲಿ 27,176 ಹೊಸ ಕೇಸ್​ಬುಧವಾರ ಭಾರತದಲ್ಲಿ ಕೋವಿಡ್​ ವ್ಯಾಧಿಯ 27,176 ಹೊಸ ಕೇಸ್​ಗಳು ದೃಢಪಟ್ಟಿವೆ. 284 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 3,51,087ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರಧಾನಿ ಜನ್ಮದಿನಕ್ಕೆ ಲಸಿಕೆ ದಾಖಲೆಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮ ದಿನವಾದ ಸೆಪ್ಟೆಂಬರ್​ 17ರ ಶುಕ್ರವಾರ ಲಸಿಕೆ ಅಭಿಯಾನದಲ್ಲಿ ಹೊಸ ದಾಖಲೆ ಸೃಷ್ಟಿಸುವ ಯೋಜನೆ ರೂಪಿಸಲಾಗಿದೆ. ಜೂನ್​ 21ರಂದು 88.09 ಲಕ್ಷ ಡೋಸ್​ ಹಾಗೂ ಆಗಸ್ಟ್​ 27ರಂದು 1.03 ಕೋಟಿ ಡೋಸ್​ ಚುಚ್ಚುಮದ್ದು ಹಾಕುವ ಮೂಲಕ ಭಾರತ ದೈನಿಕ ಲಸಿಕೆಯಲ್ಲಿ ದಾಖಲೆ ಬರೆದಿತ್ತು. ಪ್ರಧಾನಿ ಹುಟ್ಟುಹಬ್ಬದಂದು ಈ ದಾಖಲೆಗಳನ್ನು ಅಳಿಸಿ ಹೊಸ ಮೈಲುಗಲ್ಲು ಸ್ಥಾಪಿಸಲು ಚಿಂತನೆ ನಡೆದಿದೆ. ಬಿಜೆಪಿ ನಾಯಕರು ಲಸಿಕೆ ಪಡೆಯಲು ಜನರನ್ನು ಉತ್ತೇಜಿಸಲಿದ್ದಾರೆ. ದೈನಿಕ ವ್ಯಾಕ್ಸಿನ್​ ನೀಡಿಕೆಯನ್ನು ದುಪ್ಪಟ್ಟುಗೊಳಿಸುವಂತೆ ರಾಜ್ಯಗಳು ಹಾಗೂ ಯುಟಿಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಧಾನಿ ಜನ್ಮ ದಿನದಂದು ಲಸಿಕೆ ಅಭಿಯಾನದಲ್ಲಿ ಹೊಸ ದಾಖಲೆ ಸೃಷ್ಟಿಸುವುದು ನಮ್ಮ ಗುರಿಯಾಗಿದೆ ಎಂದು ರಾಷ್ಟ್ರೀಯ ವ್ಯಾಧಿ ನಿಯಂತ್ರಣ ಕೇಂದ್ರದ (ಎನ್​ಸಿಡಿಸಿ) ನಿರ್ದೇಶಕ ಸುಜೀತ್​ ಸಿಂಗ್​ ತಿಳಿಸಿದ್ದಾರೆ.
6 ತಿಂಗಳಲ್ಲಿ ಎಂಡೆಮಿಕ್​ಕರೊನಾ ಸಾಂಕ್ರಾಮಿಕತೆ ಭಾರತದಲ್ಲಿ ಮುಂದಿನ ಆರು ತಿಂಗಳಲ್ಲಿ ಸ್ಥಳಿಯ ವ್ಯಾಧಿಯಾಗುವ (ಎಂಡೆಮಿಕ್​) ಸಾಧ್ಯತೆಯಿದೆ ಎಂದು ನಿರೀಸಲಾಗಿದೆ. “ಸಾಂಕ್ರಾಮಿಕತೆ ನಮ್ಮೆಲ್ಲರ ಬಹುತೇಕ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. ಮುಂದಿನ ಆರು ತಿಂಗಳಲ್ಲಿ ಎಂಡೆಮಿಕ್​ ಸ್ಥಾನದತ್ತ ಹೊರಳಲಿದ್ದೇವೆ’ ಎಂದು ಎನ್​ಸಿಡಿಸಿ ನಿರ್ದೇಶಕ ಸುಜೀತ್​ ಸಿಂಗ್​ ಹೇಳಿದ್ದಾರೆ.
ಭಾರತದಲ್ಲೇ ಹೆಚ್ಚು ತಪ್ಪು ಮಾಹಿತಿ:ಕೋವಿಡ್​-19 ಮಹಾಮಾರಿ ಬಗ್ಗೆ ಭಾರತದ ಸಾಮಾಜಿಕ ಮಾಧ್ಯಮದಲ್ಲೇ ಅತಿ ಹೆಚ್ಚು ಅಪಪ್ರಚಾರ ನಡೆದಿದೆ. ಈ ವಿಚಾರದಲ್ಲಿ ಅಮೆರಿಕ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಇಂಟರ್​ನೆಟ್​ ಸೌಕರ್ಯದ ಹೆಚ್ಚಳ, ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಏರಿಕೆ ಮತ್ತು ಬಳಕೆದಾರರಲ್ಲಿ ಇಂಟರ್​ನೆಟ್​ ಸಾಕ್ಷರತೆ ಕೊರತೆ &ಇವು ಈ ವಿದ್ಯಮಾನಕ್ಕೆ ಕಾರಣ ಎಂದು ಅಧ್ಯಯನವೊಂದು ತಿಳಿಸಿದೆ. 138 ದೇಶಗಳಲ್ಲಿ ಹರಡಿದ್ದ 9,657 ತಪು$್ಪ ಮಾಹಿತಿಗಳನ್ನು ವಿಶ್ಲೇಷಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four + sixteen =
Remember me
