ಜೈಪುರ:ರಾಜಸ್ಥಾನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಮದನ್​ ಲಾಲ್​ ಸೈನಿ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಘಟನೆ ರಾಜಸ್ಥಾನದ ಸಿಕರ್​ ಜಿಲ್ಲೆಯಲ್ಲಿ ನಡೆದಿದೆ. ಮದನ್​ ಲಾಲ್​ ಸೈನಿ ಅವರು 2019ರಲ್ಲಿ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಹನುಮಾನ್​ ಪ್ರಸಾದ್​ ಸೈನಿ, ಅವರ ಪತ್ನಿ ತಾರಾ ಮತ್ತು ಇಬ್ಬರು ಹೆಣ್ಣುಮಕ್ಕಳಾದ ಅಂಜು ಮತ್ತು ಪೂಜಾ ಎಂದು ಗುರುತಿಸಲಾಗಿದೆ. ನಾಲ್ವರು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿರಿ:ದರ್ಶನ್ ನೋಡಿ ಸುಮ್ನೆ ಹೆಂಗಿರ್ಲಿ!; ಜವಾರಿ ಹಾಡಿಗೆ ಆಶಾ ಭಟ್ ಕುಣಿತ
ಪ್ರಾಥಮಿಕ ವರದಿಯ ಪ್ರಕಾರ ಕಳೆದ ಸೆಪ್ಟೆಂಬರ್​ನಲ್ಲಿ ದಂಪತಿಯ ಕಿರಿಯ ಮಗ (17-18ರ ನಡುವಿನ ವಯಸ್ಸು) ಮೃತಪಟ್ಟಿದ್ದರಿಂದ ಇಡೀ ಕುಟುಂಬ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿತ್ತೆಂದು ಹೇಳಲಾಗಿದೆ.
ಆತ್ಮಹತ್ಯೆ ಸುದ್ದಿ ತಿಳಿದ ಬೆನ್ನಲ್ಲೇ ಉದ್ಯೋಗ್​ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಕರ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಕುನ್ವಾರ್​ ರಾಷ್ಟ್ರದೀಪ್​ ಸಹ ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಸಿಕರ್​ನಲ್ಲಿನ ಶ್ರೀ ಕಲ್ಯಾಣ್​ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಹನುಮಾನ್​ ಪ್ರಸಾದ್​ ಬರೆದಿದ್ದಾರೆ ಎನ್ನಲಾದ ಡೆತ್​ನೋಟ್ ಪತ್ತೆಯಾಗಿದ್ದು, ಅದರ​ ಪ್ರಕಾರ ಮಗನನ್ನು ಕಳೆದುಕೊಂಡು ಹನುಮಾನ್​ ಕುಟುಂಬ ಬದುಕಲು ಕಷ್ಟಪಡುತ್ತಿದ್ದರಂತೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿರಿ:ಪುರಿ ಜಗನ್ನಾಥ ರೂಪವನ್ನೇ ಹೋಲುವ ಪತಂಗ ಪತ್ತೆ! ಗ್ರಾಮಸ್ಥರ ಮಾತು ಕೇಳಿದ್ರೆ ಬೆರಗಾಗ್ತೀರಾ!
ಹನುಮಾನ್​ ಪ್ರಸಾದ್​ ಸೈನಿ ಅವರು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ (2018) ದಿವಂಗತ ಮದನ್​ ಲಾಲ್​ ಸೈನಿ ಅವರ ಸೋದರಸಂಬಂಧಿ. ವಸುಂಧರಾ ರಾಜೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮದನ್​ ಲಾಲ್​ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದರು.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಮದ್ವೆಗೂ ಮುನ್ನ ಬಾಡಿ ಪಾರ್ಟ್ಸ್ ಸರಿಯಾಗಿದೆಯಾ ಎಂದು ಕೇಳಿ ವರನನ್ನು ಬೆತ್ತಲೆ ಮಾಡಿದ ಯುವತಿ!

Web Exclusive | ಕಳ್ಳರಿಗೆ ಸಂತಸ ತಂದ ಪೆಟ್ರೋಲ್ ದರ ಏರಿಕೆ, ಬೈಕ್ ಮಾಲೀಕರು ಹೈರಾಣ

ಮಾಜಿ ಸಿಎಂ ಜಯಲಲಿತಾ-ನಿರ್ಮಲಾ ಸೀತಾರಾಮನ್​ ಗೆಳತಿಯರಾ? ಅಪರೂಪದ ಫೋಟೋ ಹಿಂದಿನ ಸತ್ಯಾಂಶವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
