ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ಹದಗೆಟ್ಟಿದ್ದು, ಆತಂಕದ ಪರಿಸ್ಥಿತಿ ಇನ್ನೂ ಮುಂದುವರಿದಿದೆ. ಮತ್ತೊಂದೆಡೆ ಪ್ರತಿ ಐದು ಕುಟುಂಬಗಳ ಪೈಕಿ ನಾಲ್ಕು ಕುಟುಂಬಗಳವರು ಅನಾರೋಗ್ಯದಿಂದ ಬಳಲುವಂತಾಗಿದೆ.
ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ವಾಯುಮಾಲಿನ್ಯ ವಿಪರೀತಗೊಂಡಿದ್ದು, ಒಟ್ಟಾರೆ ಏರ್​ ಕ್ವಾಲಿಟಿ ಇಂಡೆಕ್ಸ್ ಬೆಳಗ್ಗೆ 9.30ರ ಸುಮಾರಿಗೆ 408ಕ್ಕೆ ತಲುಪಿದೆ. ನೆರೆಯ ರಾಜ್ಯಗಳಲ್ಲಿ ರೈತರು ಕೂಳೆ ಸುಟ್ಟ ಪರಿಣಾಮವಾಇ ಇಲ್ಲಿ ವಾಯುಮಾಲಿನ್ಯಗೊಂಡಿದೆ ಎಂದೂ ಆರೋಪಿಸಲಾಗುತ್ತಿದೆ.
ಈ ಮಧ್ಯೆ ವಾಯುಮಾಲಿನ್ಯದ ಕುರಿತಂತೆ ಸಮೀಕ್ಷೆಯೊಂದು ಹೊರಬಿದ್ದಿದ್ದು, ರಾಜಧಾನಿಯ ಪ್ರತಿ ಐದು ಕುಟುಂಬಗಳಲ್ಲಿ ನಾಲ್ಕು ಕುಟುಂಬ ಅನಾರೋಗ್ಯದಿಂದ ಬಳಲುತ್ತಿದೆ. ಅದರಲ್ಲೂ ಸಮೀಕ್ಷೆಗೆ ಒಳಪಡಿಸಿದ್ದವರ ಪೈಕಿ ಶೇ. 18 ಮಂದಿ ಈಗಾಗಲೇ ವಾಯುಮಾಲಿನ್ಯ ಸಂಬಂಧಿತ ಸಮಸ್ಯೆಗಳಿಗಾಗಿ ವೈದ್ಯರನ್ನು ಸಂಪರ್ಕಿಸಿದ್ದಾರೆ ಇಲ್ಲವೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.
ದೆಹಲಿ, ನೋಯ್ಡಾ, ಘಾಜಿಯಾಬಾದ್, ಗುರುಗ್ರಾಮ, ಫರಿದಾಬಾದ್ ಮುಂತಾದೆಡೆ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಅದರಲ್ಲೂ ಸಮೀಕ್ಷೆಗೆ ಒಳಪಟ್ಟವರ ಪೈಕಿ ಶೇ. 80 ಕುಟುಂಬ ಮಾಲಿನ್ಯ ಸಂಬಂಧಿತ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದೆ ಎಂಬುದೂ ಕಂಡುಬಂದಿದೆ.
ಉದ್ಯಮಿ ಸೈರಸ್​ ಮಿಸ್ತ್ರಿ ಸಾವು; ಲೇಡಿ ಡಾಕ್ಟರ್​ ವಿರುದ್ಧ ಕೇಸ್..

ಸಹೋದರನ ಮಗನ ಸಾವಿನ ಕುರಿತು ರೇಣುಕಾಚಾರ್ಯ ಗಂಭೀರ ಆರೋಪ

ಹೆಚ್ಚಾಗದ ವೇತನ, ‘108’ ಸಮಸ್ಯೆ: ಮನನೊಂದು ವಿಷ ಕುಡಿದ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 2 =
Remember me
