ಹರಿಯಾಣ:ಮ್ಯಾನ್​ಹೋಲ್​ಗೆ ಇಳಿದು ಸ್ವಚ್ಛಗೊಳಿಸುವ ವೇಳೆ ಕೆಲವು ಉಸಿರುಗಟ್ಟಿ ಸಾವಿಗೀಡಾಗಿದ ಪ್ರಕರಣಗಳಿವೆ. ಅದೇ ರೀತಿ ಇಲ್ಲಿ ಆಸ್ಪತ್ರೆಯ ಟ್ಯಾಂಕ್​ ಒಂದನ್ನು ಸ್ವಚ್ಛಗೊಳಿಸಲು ಹೋದ ನಾಲ್ವರು ಸಾವಿಗೀಡಾಗಿದ್ದಾರೆ.
ಹರಿಯಾಣದ ಫರಿದಾಬಾದ್​ನ ಕ್ಯೂಆರ್​ಜಿ ಎಂಬ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನಾಲ್ವರು ಸ್ವಚ್ಛತಾ ಸಿಬ್ಬಂದಿಯನ್ನು ಆಸ್ಪತ್ರೆಯ ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸಲು ಅದರೊಳಕ್ಕೆ ಇಳಿಸಿದಾಗ ಈ ದುರಂತ ಸಂಭವಿಸಿದೆ.
ಸೆಪ್ಟಿಕ್ ಟ್ಯಾಂಕ್ ಒಳಕ್ಕೆ ಇಳಿದ ನಾಲ್ವರು ಅಲ್ಲಿನ ವಿಷಾನಿಲದಿಂದ ಉಸಿರುಗಟ್ಟಿ ಅಲ್ಲೇ ಸಾವಿಗೀಡಾಗಿದ್ದಾರೆ. ಕೊನೆಗೆ ಅಗ್ನಿಶಾಮಕ ವಾಹನವನ್ನು ತರಿಸಿ ಅದರ ಸಿಬ್ಬಂದಿ ಮೂಲಕ ನಾಲ್ವರ ಶವಗಳನ್ನು ಹೊರತೆಗೆಯಲಾಯಿತು. ಮೃತಪಟ್ಟವರ ಹಾಗೂ ಘಟನೆ ಕುರಿತ ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ. ಸಾವಿಗೀಡಾದ ನಾಲ್ವರೂ 25ರಿಂದ 30 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ನೀವು ಈ ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರಿಕೆ..​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + ten =
Remember me
