ಹಿಮಾಚಲ ಪ್ರದೇಶ:ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ 10 ಲಕ್ಷ ರೂ. ಮೌಲ್ಯದ ಮಾದಕ ವಸ್ತು ಮತ್ತು ಅಕ್ರಮ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ದಂಧೆಗೆ ಲೆಕ್ಕ ಇಲ್ಲದಂತಾಗಿದೆ: ಕೆ.ಎಸ್​. ಈಶ್ವರಪ್ಪ
ಶುಕ್ರವಾರ (ಸೆ.15) ಸುಳಿವಿನ ಮೇರೆಗೆ ಉನಾ ಪೊಲೀಸರು ಮತ್ತು ಕಾಂಗ್ರಾ ಜಿಲ್ಲೆಯ ಆಂಟಿ ನಾರ್ಕೋಟಿಕ್ ಟಾಸ್ಕ್ ಫೋರ್ಸ್ (ANTF) ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ವಾಹನದಿಂದ 28,500ಕ್ಕೂ ಹೆಚ್ಚು ಕ್ಯಾಪ್ಸುಲ್‌ಗಳನ್ನು ವಶಪಡಿಸಿಕೊಂಡಿದೆ.
ಈ ಕ್ಯಾಪ್ಸೂಲ್‌ಗಳ ಮಾರುಕಟ್ಟೆ ಮೌಲ್ಯ ಸುಮಾರು 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಉನಾದ ಪೊಲೀಸ್ ವರಿಷ್ಠಾಧಿಕಾರಿಯಾದ ಅರ್ಜಿತ್ ಸೇನ್ ಠಾಕೂರ್ ಮಾಹಿತಿ ನೀಡಿದ್ದು, ಗಾಗ್ರೆಟ್‌ನ ಮನ್ ಸಿಂಗ್ (48) ಮತ್ತು ಕಾಂಗ್ರಾ ಜಿಲ್ಲೆಯ ಮಹಾಸು ರಾಮ್ (47) ಬಂಧಿತರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:Sharanabasappa Darshanapur Reacts On KN Rajanna Statement: ಕೆ.ಎನ್. ರಾಜಣ್ಣ ಕೇಳ್ತಿರೋದ್ರಲ್ಲಿ ಯಾವುದೇ ತಪ್ಪಿಲ್ಲ ಎಂದ ಶರಣಬಸಪ್ಪ ದರ್ಶನಾಪುರ
ಈ ಬಗ್ಗೆ ಹೆಚ್ಚುವರಿ ಮಾಹಿತಿ ನೀಡಿದ ಅಧಿಕಾರಿಗಳು, ವಿಚಾರಣೆಯ ಸಮಯದಲ್ಲಿ ಇಬ್ಬರೂ ಆರೋಪಿಗಳು ಭೂಪೇಂದ್ರ ದತ್ತ (44) ಮತ್ತು ವೀರೇಂದ್ರ ಎಂಬ ಮತ್ತಿಬ್ಬರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದರು.
ಶನಿವಾರ (ಸೆ.16) ರಾತ್ರಿ ವೀರೇಂದ್ರ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿದ ಪೊಲೀಸರು, ವಿವಿಧ ಮದ್ಯದ ಬ್ರಾಂಡ್‌ಗಳ 210 ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:VIDEO | ಕಡಲ ತೀರವನ್ನು ಶುಚಿಗೊಳಿಸಿದ ಬಾಲಿವುಡ್​ ನಟಿಯರು!
ಆರೋಪಿ ವೀರೇಂದ್ರನ ವಿರುದ್ಧ ಐಪಿಸಿ ಮತ್ತು ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಒಂಬತ್ತು ಪ್ರಕರಣಗಳಿವೆ. ಈ ಹಿಂದೆ ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಆತನ ವಿರುದ್ಧ ಹಲವು ಕೇಸ್​ಗಳ ದಾಖಲಾಗಿದ್ದವು ಎಂದು ಅಧಿಕಾರಿ ಠಾಕೂರ್ ಹೇಳಿದರು,(ಏಜೆನ್ಸೀಸ್).
ಬಹುನಿರೀಕ್ಷಿತ ‘ಯುಐ’ ಟೀಸರ್​ಗೆ ಕ್ಷಣಗಣನೆ ಆರಂಭ; ಕಾರ್ಯಕ್ರಮದ ಸಮಯ ಹೀಗಿದೆ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eleven =
Remember me
