ರಾಯ್​ಪುರ:ರೈತ ಕುಟುಂಬವೊಂದನ್ನು ಕೊಲೆ ಮಾಡಲಾಗಿದ್ದು, ವಾಟರ್​ ಟ್ಯಾಂಕ್​ನ ಒಳಗೆ ತುಂಬಿಟ್ಟು ಹೋಗಿರುವ ಘಟನೆ ಚತ್ತೀಸಗಢದ ದರ್ಗ್​ ಜಿಲ್ಲೆಯಲ್ಲಿ ನಡೆದಿದೆ. ಕೊಲೆಗೆ ಕಾರಣ ಮತ್ತು ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಲಂಡನ್​ ವೈರಸ್​ನಿಂದಾಗಿ ಮುಂಬೈನಂತೆ ಇಲ್ಲೂ ನೈಟ್​ ಕರ್ಫ್ಯೂ ಇರತ್ತಾ? ಸಿಎಂ ಏನೆಂದ್ರು ಕೇಳಿ…
ದರ್ಗ್​ ಜಿಲ್ಲೆಯ ಅಮಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಖುದ್ಮುಡಾ ಗ್ರಾಮದ ನಿವಾಸಿ ಬಾಲರಾಜ್ ಸೋಂಕರ್ (60), ಅವರ ಪತ್ನಿ ದುಲಾರಿನ್ ಬಾಯಿ (55), ಪುತ್ರ ರೋಹಿತ್ (30) ಮತ್ತು ಸೊಸೆ ಕೀರ್ತಿ ಕೊಲೆಯಾಗಿರುವ ದುರ್ದೈವಿಗಳು. ಈ ನಾಲ್ವರ ದೇಹವು ವಾಟರ್​ ಟ್ಯಾಂಕ್​ ಒಳಗೆ ಪತ್ತೆಯಾಗಿದೆ. ರೋಹಿತ್​ ಅವರ 11 ವರ್ಷದ ಮಗ ಮನೆಯೊಳಗೆ ಮೂರ್ಚೆ ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ಗಂಗೆಯಲ್ಲಿ 12 ಗಂಟೆಗಳ ಕಾಲ ತೇಲುತ್ತಲೇ ಇದ್ದ ಮಹಿಳೆ! 10 ಕಿ.ಮೀ ತೇಲಿ ಬಂದ ಮಹಿಳೆಯನ್ನು ರಕ್ಷಿಸಿದ ಮೀನುಗಾರರು
ಈ ಕುಟುಂಬಕ್ಕೆ ಗ್ರಾಮದ ಹೊರಗೆ ಜಮೀನಿದ್ದು, ಅಲ್ಲಿಯೇ ಗುಡಿಸಲು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಗ್ರಾಮಸ್ಥರೆಲ್ಲರೊಂದಿಗೂ ಕುಟುಂಬ ಸ್ನೇಹದಿಂದಿತ್ತು. ಮೇಲ್ನೋಟಕ್ಕೆ ಯಾವುದೇ ವೈರಿಗಳು ಕಂಡುಬಂದಿಲ್ಲ. ಪ್ರಕರಣದ ತನಿಖೆಗೆಂದು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಹಿಡಿದು, ಕೊಲೆಯ ಹಿಂದಿನ ರಹಸ್ಯ ಭೇದಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
https://www.vijayavani.net/lady-si-romance-with-married-constable-in-nellore/
ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
