ನವದೆಹಲಿ:ಏಷ್ಯಾದ ಅತಿ ಶ್ರೀಮಂತರಲ್ಲಿ 2ನೇ ಸ್ಥಾನದಲ್ಲಿರುವ ಉದ್ಯಮಿ ಗೌತಮ್ ಅದಾನಿ ಇನ್ನು 8 ವರ್ಷಗಳ ಬಳಿಕ ತಮಗೆ 70 ವರ್ಷವಾಗುತ್ತಿದ್ದಂತೆಯೇ ಕಂಪನಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ತೀರ್ವನಿಸಿದ್ದು, ಈಗಲೇ ಉತ್ತರಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಿದ್ದಾರೆ.
ಪುತ್ರರಾದ 37 ವರ್ಷದ ಕರಣ್, 26 ವರ್ಷದ ಜೀತ್, ಸೋದರ ಸಂಬಂಧಿಗಳಾದ 45 ವರ್ಷದ ಪ್ರಣವ್ ಮತ್ತು 30 ವರ್ಷದ ಸಾಗರ್ ಅವರೇ ಗೌತಮ್ ಅದಾನಿ ಅವರ ಉತ್ತರಾಧಿಕಾರಿಗಳಾಗಿದ್ದಾರೆ. ‘ಈ ವಿಷಯವನ್ನು ಕುಟುಂಬದ ಟ್ರಸ್ಟ್​ನಲ್ಲಿ ದಾಖಲಿಸಲಾಗಿದೆ. ಅದಾನಿ ಸಂಸ್ಥೆಗಳ ಸಮೂಹವನ್ನು ಈ ಟ್ರಸ್ಟ್ ಮುನ್ನಡೆಸುತ್ತಿದೆ’ ಎಂದು ಗೌತಮ್ ಅದಾನಿ ‘ಬ್ಲೂಮ್​ಗ್’ ಮಾಧ್ಯಮ ಸಂಸ್ಥೆಗೆ ತಿಳಿಸಿದ್ದಾರೆ.
ಅದಾನಿ ನಿವೃತ್ತಿ ಬಳಿಕ ಜೀತ್, ಕರಣ್, ಪ್ರಣವ್ ಹಾಗೂ ಸಾಗರ್ ಈ ಟ್ರಸ್ಟ್​ನಲ್ಲಿ ಸಮಾನ ಪಾಲು ಪಡೆಯಲಿದ್ದಾರೆ. ಈಗ ಅದಾನಿ ಹಿರಿಯ ಮಗ ಕರಣ್ ‘ಅದಾನಿ ಪೋರ್ಟ್ಸ್’ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕಿರಿಯ ಮಗ ಜೀತ್ ‘ಅದಾನಿ ಏರ್​ಪೋರ್ಟ್ಸ್’ನಲ್ಲಿ ನಿರ್ದೇಶಕ. ಸೋದರ ಸಂಬಂಧಿಗಳಾದ ಪ್ರಣವ್ ‘ಅದಾನಿ ಎಂಟರ್​ಪ್ರೖೆಸಸ್’ನಲ್ಲಿ ನಿರ್ದೇಶಕ, ಸಾಗರ್ ‘ಅದಾನಿ ಗ್ರೀನ್ ಎನರ್ಜಿ’ಯಲ್ಲಿ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ಗೌತಮ್ ನಿವೃತ್ತಿ ಬಳಿಕ ಕರಣ್ ಅಥವಾ ಪ್ರಣವ್ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಯಾವುದೇ ಗೊಂದಲಗಳಿಲ್ಲದಂತೆ ಕಂಪನಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಗೌತಮ್ ಅದಾನಿ ಅವರ ಉದ್ದೇಶವಾಗಿದೆ.
ನಾವು ಬೇರೆ ಬೇರೆ ಉದ್ಯಮಗಳನ್ನು ನೋಡಿಕೊಳ್ಳುತ್ತಿದ್ದರೂ, ಒಂದು ತಂಡವಾಗಿ ಇದ್ದೇವೆ. ಕೇಂದ್ರ ಕಚೇರಿಯಲ್ಲಿರುವ ಕುಟುಂಬದ ಸದಸ್ಯರು ಪ್ರತಿ ದಿನ ಒಟ್ಟಾಗಿ ಊಟ ಮಾಡುತ್ತೇವೆ. ಆಯಾ ದಿನದ ಆಗುಹೋಗುಗಳನ್ನು ರ್ಚಚಿಸುತ್ತೇವೆ.
| ಪ್ರಣವ್ ಅದಾನಿ, ಗೌತಮ್ ಅದಾನಿಯ ಸೋದರಸಂಬಂಧಿ
ಗಂಭೀರ್​ ಈಗಲೂ ಮುಗ್ಧ ಮಗುವಿನಂತೆ… ಟೀಕೆಗಳ ಮಧ್ಯೆ ಗೌತಿ ಪರ ಬ್ಯಾಟ್ ಬೀಸಿದ ಸಂಜಯ್ ಭಾರದ್ವಾಜ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
