ಜಾರ್ಖಂಡ್‌:ಮದುವೆ ಮನೆ ಎಂದರೆ ಸಡಗರ ಸಂಭ್ರಮವಾಗಿದೆ. ವಿವಾಹಕ್ಕೆ ತಯಾರಿ ನಡೆಸುವಾಗ ಕೆಲವು ಪ್ರಮುಖ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ಮೂಲಕ ಮದುವೆಯನ್ನು ಜೀವನದುದ್ದಕ್ಕೂ ಸ್ಮರಣೀಯವಾಗಿ ಮಾಡಬಹುದು. ಆದರೆ ಇಲ್ಲೊಂದು ಜೋಡಿ ಮಾತ್ರ ವಿಭಿನ್ನವಾಗಿ ಮದುವೆ ಮೆರವಣಿಗೆ ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಸಾಮಾನ್ಯವಾಗಿ ಮದವೆ ಮೆರವಣಿಗೆಗಾಗಿ ಕಾರು ಅಥವಾ ಕುದುರೆಯನ್ನು ಬಳಸಲಾಗುತ್ತದೆ. ಆದರೆ ರಾಂಚಿಯಲ್ಲಿ ವರನೊಬ್ಬ ಜೆಸಿಬಿಯಲ್ಲಿ ಮೆರವಣಿಗೆ ಬಂದಿದ್ದಾನೆ. ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ವರ ರಾಜಾ ಕೃಷ್ಣ ಮಹತೋ ಮದುವೆ ನಂತರ ಕೂಡಾ ಪತ್ನಿಯನ್ನು ಮನೆಗೆ ಕರೆದೊಯ್ಯಲು ಜೆಸಿಬಿ ಸವಾರಿ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.
ಇದನ್ನೂ ಓದಿ:ಭಾರತೀಯರು ಮಾತ್ರ ಬಳಸುವ ಇಂಗ್ಲಿಷ್​ನ 10 ಪದಗಳು ಯಾವವು ಗೊತ್ತಾ?
ಜೆಸಿಬಿಯನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದು, ಹಾಯಾಗಿ ಕುಳಿತುಕೊಳ್ಳಲು ಹಾಸಿಗೆ, ಕುಶನ್‌ಗಳನ್ನು ಹಾಕಲಾಗಿತ್ತು. ಈ ವಿಶಿಷ್ಟ ಮದುವೆಯ ಮೆರವಣಿಗೆಯನ್ನು ವೀಕ್ಷಿಸಲು ಅಪಾರ ಜನಸ್ತೋಮ ನೆರೆದಿತ್ತು. ವರ, ವಧುವಿನ ಜತೆ ಜೆಸಿಬಿ ಮೇಲೆ ಕುಳಿತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​ ಆಗಿದೆ.

ವೃತ್ತಿಯಲ್ಲಿ ಹೂವಿನ ವ್ಯಾಪಾರಿಯಾಗಿರುವ ಕೃಷ್ಣ ಮಹತೋ ತಮ್ಮ ಮದುವೆಗೆ ಏನಾದರೂ ವಿಶೇಷವಾಗಿ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದರು. ವೈವಾಹಿಕ ಜೀವನದಲ್ಲಿ ಸ್ವಚ್ಛತೆ ಮತ್ತು ಅಚ್ಚುಕಟ್ಟುತನದ ಮಹತ್ವದ ಸಂದೇಶ ಸಾರಬೇಕು. ಬುಲ್ಡೋಜರ್ ಅಥವಾ ಜೆಸಿಬಿಯನ್ನು ನೋಡಿದಾಗ ಕೆಲವರಿಗೆ ಸ್ವಚ್ಛತೆಯ ನೆನಪಾಗುತ್ತದೆ ಎಂದು ಯೋಚಿಸಿ ಈ ಹೊಸ ಉಪಾಯವನ್ನು ಮಾಡಿದ್ದಾರೆ ಎನ್ನಲಾಗಿದೆ.
ಕೇಂದ್ರದಿಂದ ನಾವು ಪುಕ್ಸಟ್ಟೆಯಾಗಿ ಅಕ್ಕಿ ಕೊಡುವಂತೆ ಕೇಳಿಲ್ಲ; ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
