ಆಗ್ರಾ:ಚಲಿಸುತ್ತಿದ್ದ ರೈಲಿನ ಬಾತ್​ರೂಮ್​ ಕಮೋಡ್​ನಲ್ಲಿ ಮಗುವಿನ ಕಾಲು ಸಿಲುಕಿಕೊಂಡಿರುವ ಘಟನೆ ಉತ್ತರಪ್ರದೇಶದ ಆಗ್ರಾ ಬಳಿ ನಡೆದಿದೆ.
ಇದನ್ನೂ ಓದಿ:ಗೆಳೆಯನಿಗೋಸ್ಕರ ಹುಡುಗಿಯಾದ ಹುಡುಗ: ಈ ವಿಚಿತ್ರ ಪ್ರೇಮ ಪ್ರಕರಣದಲ್ಲೀಗ ಅನಿರೀಕ್ಷಿತ ಟ್ವಿಸ್ಟ್..
ಘಟನೆಯಲ್ಲಿ ಶೈನಾ(4) ಎಂಬ ಬಾಲಕಿಯ ಕಾಲಿಗೆ ಗಾಯವಾಗಿದೆ. ಬಿಹಾರದ ಸಿತಾಮರ್ಹಿ ನಿವಾಸಿಗಳಾಗಿರುವ ಮೊಹಮ್ಮದ್ ಅಲಿ, ಆತನ ಪತ್ನಿ ಸುಗ್ನಿ ಮತ್ತು 4 ವರ್ಷದ ಮಗಳು ಬರೌನಿ-ಬಾಂದ್ರಾ ಅವಧ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ದಾರಿ ಮಧ್ಯೆ ಬಾಲಕಿಯ ತಾಯಿ ಆಕೆಯನ್ನು ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಅಮ್ಮನ ಮೊಬೈಲ್​​ಗೆ ಕರೆ ಬಂದಿದ್ದು ಆಕೆ ಮಾತನಾಡುವುದರಲ್ಲಿ ನಿರತಳಾಗಿದ್ದಾಳೆ.
ಅಷ್ಟರಲ್ಲಿ ಬಾಲಕಿಯ ಕಾಲು ಕಮೋಡ್​​ನಲ್ಲಿ ಸಿಲುಕಿಕೊಂಡಿದ್ದು, ಹುಡುಗಿ ಅಳಲು ಪ್ರಾರಂಭಿಸಿದಳು. ಕೂಡಲೇ ತಾಯಿ ಮಗುವನ್ನು ನೋಡಿ ಮೊದಮೊದಲು ಆಕೆಯ ಕಾಲು ತೆಗೆಯಲು ಪ್ರಯತ್ನಿಸಿದ್ದಾಳೆ. ಆದರೆ ಮಗುವಿನ ಕಾಲು ಹೊರಲೇ ಇಲ್ಲ. ಕೊನೆಗೆ ಆ ತಾಯಿ ತಂದೆಗೆ ಇದರ ಬಗ್ಗೆ ಕೂಗಿ ಹೇಳಿದ್ದಾಳೆ ಕೂಡಲೇ ಅಲಿ ಸೇರಿದಂತೆ ಇತರ ಪ್ರಯಾಣಿಕರು ಕೂಡ ಅಲ್ಲಿ ಜಮಾಯಿಸಿ ಬಾಲಕಿಯ ಕಾಲನ್ನು ಹೊರತೆಗೆಯಲು ಪ್ರಯತ್ನಿಸಿದ್ದು, ಕಾಲು ಹೊರಬರಲೇ ಇಲ್ಲ.
ಇದನ್ನೂ ಓದಿ:ಚಿತ್ರಮಂದಿರದ ಮುಂದೆ ನಿಂತಿದ್ದ ಯುವಕ ಎಲ್ಲರ ಕಣ್ಮುಂದೆಯೇ ಕಿಡ್ನ್ಯಾಪ್​..
ಮುಂದಿನ ರೈಲು ನಿಲ್ದಾಣವೆಂದರೆ ಫತೇಪುರ್ ಸಿಕ್ರಿ ಸುಮಾರು 24 ಕಿ.ಮೀ. ದೂರವಿದ್ದು, ರೈಲು ಮಾತ್ರ ಸಾಗುತ್ತಲೇ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಅಹಿತಕರ ಘಟನೆಯ ಭಯ ಪೋಷಕರನ್ನು ಕಾಡುತ್ತಿದ್ದ ವೇಳೆ ಅದೇ ಸಮಯದಲ್ಲಿ ಪ್ರಯಾಣಿಕರೊಬ್ಬರು ರೈಲ್ವೆ ಸಹಾಯವಾಣಿಗೆ ಕರೆ ಮಾಡಿ ನಡೆದ ವಿಷಯ ತಿಳಿಸಿ, ಮುಂದಿನ ನಿಲ್ದಾಣದಲ್ಲಿ ಸಹಾಯ ಮಾಡುವುದಾಗಿ ರೈಲು ಸಿಬ್ಬಂದಿ ಹೇಳಿದ್ದಾರೆ.
ಸುಮಾರು ಅರ್ಧ ಗಂಟೆಯ ನಂತರ ರೈಲು ಫತೇಪುರ್ ಸಿಕ್ರಿ ನಿಲ್ದಾಣವನ್ನು ತಲುಪಿದ್ದು, ಇಲ್ಲಿ ಆರ್‌ಪಿಎಫ್ ಮತ್ತು ಜಿಆರ್‌ಪಿ ಸಿಬ್ಬಂದಿ ಕೋಚ್‌ಗೆ ಹಾಜರಾಗಿ ಬಾಲಕಿಯ ಸ್ಥಿತಿಯನ್ನು ಕಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಮೋಡ್ ಅಡಿಯಲ್ಲಿರುವ ಬಯೋ ಟಾಯ್ಲೆಟ್ ಬಾಕ್ಸ್ ತೆರೆಯದೆ ಬೇರೆ ದಾರಿಯೇ ಇರಲಿಲ್ಲ. ಇದಾದ ಬಳಿಕ ಸಿಬ್ಬಂದಿಯು ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದು ಕೊನೆಗೆ ಕಮೋಡ್​ನಲ್ಲಿ ತೀವ್ರವಾಗಿ ಸಿಲುಕೊಂಡಿದ್ದ ಕಾಲನ್ನು ಹೊರತೆಗೆದು ಚಿಕಿತ್ಸೆ ನೀಡಿದ ಬಾಲಕಿಯನ್ನು ಸುರಕ್ಷಿತವಾಗಿ ರೈಲಿನಲ್ಲಿ ಕಳುಹಿಸಲಾಗಿದೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − 9 =
Remember me
