ನವದೆಹಲಿ:ದೇಶದ ಜಿಡಿಪಿ ಬೆಳವಣಿಗೆ ದರವು ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ 2024) ಶೇ. 6.7 ಮತ್ತು 2023-24ರ ಹಣಕಾಸು ವರ್ಷದಲ್ಲಿ ಅಂದಾಜು ಶೇ. 6.9- 7 ಆಗಲಿದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ ಅಂದಾಜಿಸಿದೆ.
ಇಂಡಿಯಾ ರೇಟಿಂಗ್ಸ್​ನ ಪ್ರಧಾನ ಅರ್ಥಶಾಸ್ತ್ರಜ್ಞ ಸುನೀಲ್​ ಕುಮಾರ್ ಸಿನ್ಹಾ ಈ ಕುರಿತು ವಿವರಗಳನ್ನು ನೀಡಿದ್ದಾರೆ. ನಿರ್ಮಾಣ ಮತ್ತು ವಿದ್ಯುಚ್ಛಕ್ತಿ ನೇತೃತ್ವದ ಸೇವಾ ವಲಯವು ಬೆಳವಣಿಗೆಯ ವೇಗವನ್ನು ಮುಂದುವರಿಸಿದೆ, ಆದರೆ, ಗಣಿಗಾರಿಕೆ ಮತ್ತು ಕೈಗಾರಿಕಾ ಉತ್ಪಾದನೆಯು ಹಿಂದುಳಿದಿದೆ ಎಂದು ಅವರು ಹೇಳಿದರು.
ನಾಲ್ಕನೇ ತ್ರೈಮಾಸಿಕ (ಜನವರಿ-ಮಾರ್ಚ್ 2024) ಮತ್ತು 2023-24 ಹಣಕಾಸು ವರ್ಷದ ತಾತ್ಕಾಲಿಕ ಜಿಡಿಪಿ ಅಂದಾಜುಗಳನ್ನು ಸರ್ಕಾರವು ಮೇ 31ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ. ಭಾರತದ ಆರ್ಥಿಕತೆಯು ಜೂನ್ ತ್ರೈಮಾಸಿಕದಲ್ಲಿ ಶೇಕಡಾ 8.2, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 8.1 ಮತ್ತು 2023-24ರ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 8.4 ಬೆಳವಣಿಗೆಯಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್‌ನಲ್ಲಿ ತನ್ನ ವಿತ್ತೀಯ ನೀತಿ ಪರಾಮರ್ಶೆಯಲ್ಲಿ, 2023-24ರ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7 ಎಂದು ಅಂದಾಜಿಸಿದೆ.

ಭಾರತೀಯ ಷೇರು ಮಾರುಕಟ್ಟೆಯಿಂದ ರೂ. 28,242 ಕೋಟಿ ಹೂಡಿಕೆ ಹಿಂಪಡೆದ ವಿದೇಶಿ ಹೂಡಿಕೆದಾರರು

ಸಿಐಐ ಅಧ್ಯಕ್ಷರಾಗಿ ಐಟಿಸಿಯ ಸಂಜೀವ್ ಪುರಿ ಅಧಿಕಾರ ಸ್ವೀಕಾರ

ರೂ. 400 ಕೋಟಿ ಕಂಪನಿ ರೂಪಿಸಿದ ಮಾವು ಮಾರಾಟಗಾರನ ಮಗ: ಭಾರತದ ಐಸ್ ಕ್ರೀಮ್ ಮ್ಯಾನ್ ಕಾಮತ್ ಈಗ ನೆನಪು ಮಾತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
