ಲಖನೌ:ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ಇಂದು ನಡೆಯುತ್ತಿದೆ. ಫಿಲಿಬಿಟ್, ಲಖಿಂಪುರಖೇರಿ, ಸೀತಾಪುರ, ಹದೋಯಿ, ಉನ್ನಾವೊ, ಲಖನೌ, ರಾಯ್ಬರೇಲಿ, ಬಂದಾ, ಫತೇಪುರ ಸೇರಿ ಒಂಬತ್ತು ಜಿಲ್ಲೆಗಳ 59 ಕ್ಷೇತ್ರಗಳ 624 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ 59 ಕ್ಷೇತ್ರಗಳ ಪೈಕಿ 51 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು. ನಾಲ್ಕು ಸಮಾಜವಾದಿ ಪಾರ್ಟಿ, ಮೂರು ಬಹುಜನ ಸಮಾಜ ಪಾರ್ಟಿ ಮತ್ತು ಒಂದು ಕ್ಷೇತ್ರ ಬಿಜೆಪಿ ಮಿತ್ರ ಪಕ್ಷ ಅಪ್ನಾ ದಳದ ಪಾಲಾಗಿತ್ತು.
ಲಖಿಂಪುರಖೇರಿ ಕಳೆದ ಅಕ್ಟೋಬರ್ 3ರ ಹಿಂಸಾಚಾರದ ಕಾರಣಕ್ಕೆ ದೇಶದ ಗಮನಸೆಳೆದ ಕ್ಷೇತ್ರವಾಗಿದ್ದು, ಬಿಜೆಪಿಯಿಂದ ಯೋಗೇಶ್ ವರ್ವ ಮತ್ತು ಎಸ್​ಪಿಯಿಂದ ಉತ್ಕರ್ಷ್ ವರ್ವ ಮಧುರ್ ಕಣದಲ್ಲಿದ್ದಾರೆ. ಲಖನೌ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ರಾಜ್ಯದ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಕಣದಲ್ಲಿದ್ದು, ಎಸ್​ಪಿ ಅಭ್ಯರ್ಥಿ ಎರಡು ಸಲದ ಕಾರ್ಪೆರೇಟರ್ ಸುರೇಂದ್ರ ಸಿಂಗ್ ಅವರನ್ನು ಎದುರಿಸುತ್ತಿದ್ದಾರೆ. ಲಖನೌ ಪೂರ್ವ ಕ್ಷೇತ್ರದಲ್ಲಿ ಸಚಿವ ಅಶುತೋಶ್ ಟಂಡನ್ ಕಣದಲ್ಲಿದ್ದು, ಎಸ್​ಪಿಯ ರಾಷ್ಟ್ರೀಯ ವಕ್ತಾರ ಅನುರಾಗ್ ಭದುರಿಯಾ ಪ್ರತಿಸ್ಪರ್ಧಿಯಾಗಿದ್ದಾರೆ. ಸರೋಜಿನಿ ನಗರ್ ಕ್ಷೇತ್ರದಲ್ಲಿ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿದ್ದು, ಸಮಾಜವಾದಿ ಪಾರ್ಟಿಯ ಅಭಿಷೇಕ್ ಮಿಶ್ರಾ ಅವರನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ರಾಯ್ ಬರೇಲಿಯಲ್ಲಿ ಬಿಜೆಪಿಯ ಅದಿತಿ ಸಿಂಗ್ ಕಣದಲ್ಲಿದ್ದು, ಕಾಂಗ್ರೆಸ್​ನ ಮನಿಷ್ ಚೌಹಾಣ್​ರನ್ನು ಎದುರಿಸುತ್ತಿದ್ದಾರೆ.
ನಿರ್ಬಂಧ ಸಡಿಲಿಸಿದ ಆಯೋಗ:ಕೋವಿಡ್ ಕಾರಣಕ್ಕೆ ಚುನಾವಣಾ ಪ್ರಚಾರಕ್ಕೆ ವಿಧಿಸಲಾಗಿದ್ದ ನಿಯಮಗಳನ್ನು ಚುನಾವಣಾ ಆಯೋಗ ಹಂತ ಹಂತವಾಗಿ ಸಡಿಲಗೊಳಿಸುತ್ತಾ ಬಂದಿದೆ. ಮಂಗಳವಾರ, ಪರಿಷ್ಕೃತ ನಿಯಮ ಪ್ರಕಟಿಸಿರುವ ಆಯೋಗ, ಜಿಲ್ಲಾಡಳಿತದ ಪೂರ್ವ ಅನುಮತಿಯೊಂದಿಗೆ ರೋಡ್ ಷೋ ನಡೆಸುವುದಕ್ಕೆ ಅವಕಾಶ ನೀಡಿದೆ.
ಪ್ಯಾಕರ್ಸ್ ಆಂಡ್ ಮೂವರ್ಸ್!:ಪಿಎಂ ಮೋದಿ ಅವರನ್ನು ಆದಿತ್ಯನಾಥ ತಮ್ಮ ಪರ ಪ್ರಚಾರಕ್ಕೆ ಕರೆಯಿಸಿಕೊಂಡಿದ್ದಾರೆ. ‘ಪಿಎಂ’ ಎಂದರೆ ಪ್ಯಾಕರ್ಸ್ ಆಂಡ್ ಮೂವರ್ಸ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದಿತ್ಯನಾಥ ಅವರನ್ನು ಗೋರಖಪುರಕ್ಕೆ ಪ್ಯಾಕ್ ಮಾಡಿ ಕಳುಹಿಸಲಿದ್ದಾರೆ ಎಂದು ಮಾಜಿ ಸಿಎಂ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಮಣಿಪುರದ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಚಲಾಯಿಸಿ:ಮಣಿಪುರದ ಮುಂದಿನ 25 ವರ್ಷಗಳ ಅವಧಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕು. ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದ್ದರೆ ಆಗ ಡಬಲ್ ಎಂಜಿನ್ ಮಾದರಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಬಲಿಷ್ಠ ಬುನಾದಿ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂಫಾಲ ಈಸ್ಟ್ ಜಿಲ್ಲೆಯಲ್ಲಿ ಪ್ರಚಾರ ಸಭೆಯಲ್ಲಿ ಹೇಳಿದರು. ದಶಕಗಳ ಕಾಲ ಕಾಂಗ್ರೆಸ್ ಆಳ್ವಿಕೆ ನೋಡಿದ ಕಾರಣ ರಾಜ್ಯ ಅಸಮಾನತೆಯನ್ನು ಅನುಭವಿಸಿದೆ ಎಂದು ಮೋದಿ ಹೇಳಿದರು.
ಬಿಗಿ ನಿಲುವಿನ ನಾಯಕತ್ವ ಬೇಕು:ಜಗತ್ತು ವಿಷಮ ಪರಿಸ್ಥಿತಿಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ನಮ್ಮ ದೇಶಕ್ಕೆ ಬಲಿಷ್ಠ ಮತ್ತು ಬಿಗಿ ನಿಲುವಿನ ನಾಯಕತ್ವದ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರ ಪ್ರದೇಶದ ಬಹರೈಚ್​ನಲ್ಲಿ ಪ್ರಚಾರ ಸಭೆಯಲ್ಲಿ ಪ್ರತಿಪಾದಿಸಿದರು.
ಹಣಕ್ಕಾಗಿ ಬೇಕರಿ ಮಾಲೀಕನ ಅಪಹರಣ; ಕೈ-ಕಾಲಿಗೆ ಚಾಕು ಚುಚ್ಚಿ ಹಲ್ಲೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
