ಮುಂಬೈ:ಗಲ್ವಾನ್​ ಕಣಿವೆಯಲ್ಲಿ ಕರ್ತವ್ಯನಿರತರಾಗಿರುವ ಭಾರತೀಯ ಸೇನಾಪಡೆ ಯೋಧರ ಹೆಸರಿನಲ್ಲಿ ವ್ಯಕ್ತಿಯೊಬ್ಬ ಮುಂಬೈನ ವಾಣಿಜ್ಯೋದ್ಯಮಿಗೆ ವಂಚಿಸಿದ್ದಾನೆ. ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೀರಸೇನಾನಿಗಳಿಗೆ 4 ಸಾವಿರ ಸೇಫ್ಟಿ ಗಾಗಲ್ಸ್​ ಅನ್ನು ಪೂರೈಸಬೇಕಿದೆ. ಇದನ್ನು ವ್ಯವಸ್ಥೆ ಮಾಡುವಂತೆ ಹೇಳಿ ಆತ ನಂಬಿಸಿ, ಕತ್ತು ಕೊಯ್ದಿದ್ದಾನೆ ಎನ್ನಲಾಗಿದೆ.
ಮುಂಬೈನಲ್ಲಿ ಕನ್ನಡಕದ ಅಂಗಡಿ ಹೊಂದಿರುವ ವಾಣಿಜ್ಯೋದ್ಯಮಿ ಇ-ಕಾಮರ್ಸ್​ ವೆಬ್​ಸೈಟ್​ ಅನ್ನೂ ಹೊಂದಿದ್ದಾರೆ. ಈ ವೆಬ್​ಸೈಟ್​ ಮೂಲಕ ವಾಣಿಜ್ಯೋದ್ಯಮಿಯನ್ನು ಸಂಪರ್ಕಿಸಿ ಸೈಬರ್​ ಕಳ್ಳ, ತನ್ನನ್ನು ತಾನು ಭಾರತೀಯ ಸೇನಾಪಡೆಯ ಅಧಿಕಾರಿ ಆನಂದ್​ ಸಿಂಗ್​ ಎಂದು ಪರಿಚಯಿಸಿಕೊಂಡಿದ್ದ.
ಗಲ್ವಾನ್​ನಲ್ಲಿ ಚೀನಿಯರ ಉಪಟಳ ಮೇರೆ ಮೀರಿದೆ. ಆದ್ದರಿಂದ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ವಿತರಿಸಲು 4 ಸಾವಿರ ಸೇಫ್ಟಿ ಗಾಗಲ್ಸ್​ ಬೇಕಾಗಿದೆ ಎಂದು ನಂಬಿಸಿದ್ದ. ಒಮ್ಮೆಲೆ ಅಷ್ಟು ದೊಡ್ಡ ಆರ್ಡರ್​ ಸಿಗುತ್ತೆ ಎಂಬ ಖುಷಿಯಲ್ಲಿ ಹಾಗೂ ಭಾರತೀಯ ಸೇನಾಪಡೆಗೆ ನೆರವಾದ ಹೆಮ್ಮೆ ಲಭಿಸುತ್ತದೆ ಎಂಬ ಕಾರಣಕ್ಕೆ 55 ರೂಪಾಯಿಗೆ ಒಂದರಂತೆ ಸೇಫ್ಟಿ ಗಾಗಲ್ಸ್​ ಅನ್ನು ಮಾರಾಟ ಮಾಡಲು ವಾಣಿಜ್ಯೋದ್ಯಮಿ ಒಪ್ಪಿಕೊಂಡಿದ್ದರು.
ಒಪ್ಪಂದದಂತೆ 4 ಸಾವಿರ ಸೇಫ್ಟಿಗಾಗಲ್ಸ್​ನ ದಾಸ್ತಾನನ್ನು ಸಿದ್ಧಪಡಿಸಿಕೊಂಡು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ವಿದೇಶ ಭವನದ ಬಳಿ ದುಷ್ಕರ್ಮಿಗೆ ಹಸ್ತಾಂತರಿಸಿದ್ದರು.
ಇದನ್ನೂ ಓದಿ:ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು ಪ್ರಚಂಡ ರೌಡಿ ದುಬೆ ಎನ್‌ಕೌಂಟರ್‌!
ಮರುದಿನ ಹಣಕ್ಕಾಗಿ ಫೋನ್​ ಮಾಡಿದಾಗ ತಾನು ಕ್ಯುಆರ್​ ಕೋಡ್​ ಅನ್ನು ಕಳುಹಿಸಿದ್ದು, ಅದನ್ನು ಸ್ಕ್ಯಾನ್​ ಮಾಡಿ, ಬ್ಯಾಂಕ್​ ಖಾತೆಯ ವಿವರಗಳನ್ನು ದಾಖಲಿಸಿದಾಗ ಹಣ ಸಿಗುತ್ತದೆ ಎಂದು ನಂಬಿಸಿದ್ದ. ಅದರಂತೆ ಕ್ಯುಆರ್​ ಕೋಡ್​ ಅನ್ನು ಸ್ಕ್ಯಾನ್​ ಮಾಡಿದಾಗ, ವಾಣಿಜ್ಯೋದ್ಯಮಿಯ ಖಾತೆಗೆ ಹಣ ಜಮೆಯಾಗುವ ಬದಲು 60 ಸಾವಿರ ರೂಪಾಯಿ ಡಿಡಕ್ಟ್​ ಆಗಿತ್ತು.
ಬಳಿಕ ಮತ್ತೊಮ್ಮೆ ಆತನನ್ನು ಸಂಪರ್ಕಿಸಿದಾಗ, ಭಾರತೀಯ ಸೇನಾಪಡೆಗೆ ವಸ್ತುಗಳನ್ನು ವಿತರಿಸಲು ನೋಂದಣಿ ಪಡೆದುಕೊಳ್ಳಬೇಕಾದರೆ, ಇನ್ನೂ 40 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ನಂಬಿಸಿ ಮತ್ತೆ ಕ್ಯುಆರ್​ ಕೋಡ್​ ಮೂಲಕ 40 ಸಾವಿರ ರೂಪಾಯಿ ಪಡೆದುಕೊಂಡು ಒಟ್ಟು 1 ಲಕ್ಷ ರೂಪಾಯಿಗೆ ವಂಚಿಸಿದ್ದಾನೆ.
ಇದಾದ ನಂತರದಲ್ಲೂ ಹಣ ಸಿಗುವ ಆಸೆಯೊಂದಿಗೆ ವಂಚಕನನ್ನು ನೇರವಾಗಿ ಭೇಟಿಯಾಗಲು ವ್ಯಕ್ತಿ ಪ್ರಯತ್ನಿಸಿದ್ದಾನೆ. ಆದರೆ, ವಂಚಕ ಸಿಗಲು ನಿರಾಕರಿಸಿದಾಗ ವಾಣಿಜ್ಯೋದ್ಯಮಿ ಐಟಿ ಕಾಯ್ದೆಯಡಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಚೀನಾ ವಿರುದ್ಧದ ಪ್ರಧಾನಿ ಮೋದಿ ಅವರ ಗಟ್ಟಿ ನಿಲುವು ಹೆಮ್ಮೆಯ ಸಂಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 3 =
Remember me
