ನವದೆಹಲಿ:ಕೋವಿಡ್-19 ಮಹಾಮಾರಿಗೆ ಸಂಬಂಧಿಸಿದ ಸರ್ಕಾರಿ ಸಂದೇಶದ ಸೋಗಿನಲ್ಲಿ ದುಷ್ಕರ್ವಿುಗಳು ವೈಯಕ್ತಿಕ ದತ್ತಾಂಶ ಹಾಗೂ ಹಣಕಾಸಿನ ವಿವರಗಳನ್ನು ಕದಿಯುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. nಟಡ2019ಜಟಡ.ಜ್ಞಿ ಹೆಸರಿನಲ್ಲಿ ದುರುದ್ದೇಶಪೂರಿತ ಇ ಮೇಲ್ ಬರುವ ಸಾಧ್ಯತೆಯಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (ಸಿಇಆರ್​ಟಿ-ಇನ್) ಟ್ವೀಟ್ ಮಾಡಿದೆ.
ವಂಚಕರು ಸರ್ಕಾರಿ ಪ್ರಾಯೋಜಿತ ಕೋವಿಡ್-19 ಸ್ಥಳೀಯ ನಿರ್ವಹಣಾ ಅಧಿಕಾರಿಗಳ ಹೆಸರಿನಲ್ಲಿ ದುರುದ್ದೇಶಪೂರಿತ ಇ ಮೇಲ್​ಗಳನ್ನು ಕಳಿಸುವ ಸಾಧ್ಯತೆಯಿದೆ. ಇ ಮೇಲ್ ಪಡೆದವರು ಹುಸಿ ವೆಬ್​ಸೈಟ್​ಗಳಿಗೆ ಭೇಟಿ ನೀಡುವ ರೀತಿಯಲ್ಲಿ ಅದನ್ನು ರೂಪಿಸಲಾಗಿರುತ್ತದೆ. ಜಾಲತಾಣಗಳಿಗೆ ಭೇಟಿ ಕೊಟ್ಟವರು ಫೈಲ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವಂತೆ ಅಥವಾ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಗಳನ್ನು ನಮೂದಿಸುವಂತೆ ಅವುಗಳ ವಿನ್ಯಾಸವಿರುತ್ತದೆ ಎಂದು ಸಿಇಆರ್​ಟಿ-ಇನ್ ಹೇಳಿದೆ.
ಇದನ್ನೂ ಓದಿ:ಮಕ್ಕಳಿಗೆ ಸ್ಮಾರ್ಟ್​ ಫೋನ್​ ಕೊಡಿಸಿದ್ದರೆ ಅವರ ಮೇಲೊಂದು ಕಣ್ಣಿಟ್ಟಿರಿ; ಏಕೆಂದರೆ, ಇಲ್ಲಿ ನಡೆದದ್ದು ಮಕ್ಕಳಾಟವಲ್ಲ…!
ವಿಶ್ವಾಸಾರ್ಹ ಸಂಸ್ಥೆಗಳ ಸೋಗಿನಲ್ಲಿ ಸೈಬರ್ ದಾಳಿಗಳು ನಡೆಯುತ್ತವೆ. ಇ ಮೇಲ್ ಅಥವಾ ಟೆಕ್ಸ್ಟ್ ಸಂದೇಶಗಳನ್ನು ತೆರೆಯುವಂತೆ ಜನರನ್ನು ವಂಚಿಸುತ್ತವೆ. ಅದನ್ನು ತೆರೆದಾಗ ಮಾಲ್​ವೇರ್, ಸಿಸ್ಟಂ ಫ್ರೀಜ್ ಇನ್ಸಾ್ಟಲ್ ಮಾಡುವ ಅಥವಾ ಸೂಕ್ಷ್ಮ ಮಾಹಿತಿ ಹೊರಗೆಡಹುವಂಥ ಲಿಂಕ್​ಗಳಿಗೆ ಒಯ್ಯುತ್ತದೆ ಎಂದು ವಿವರಿಸಿದೆ. ಸಿಇಆರ್​ಟಿ-ಇನ್ ಸೈಬರ್ ದಾಳಿ ಅಪಾಯಗಳಿಂದ ರಕ್ಷಿಸುವ ಸಂಸ್ಥೆಯಾಗಿದ್ದು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತದೆ.
20 ಲಕ್ಷ ವಿಳಾಸ!:ಫಿಶಿಂಗ್ ವಂಚಕರ ಬಳಿ 20 ಲಕ್ಷಕ್ಕೂ ಹೆಚ್ಚು ವೈಯಕ್ತಿಕ/ನಾಗರಿಕ ಇ ಮೇಲ್ ಐಡಿಗಳಿವೆ ಎಂದು ಹೇಳಲಾಗಿದೆ. ಉಚಿತವಾಗಿ ಕೋವಿಡ್-19 ಪರೀಕ್ಷೆ ನಡೆಸಲಾಗುವುದೆಂದು ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್​ನ ನಿವಾಸಿಗಳಿಗೆ ಇ ಮೇಲ್ ಕಳಿಸಲು ಅವರು ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ. ಮೇಲ್ ಸ್ವೀಕರಿಸಿದ ಜನರು ಮಾಹಿತಿ ಒದಗಿಸುವ ಪ್ರೇರಣೆಗೆ ಒಳಗಾಗುವಂತೆ ಸಂದೇಶವಿರುತ್ತದೆ ಎಂದು ಸಿಇಆರ್​ಟಿ-ಇನ್ ವಿವರಿಸಿದೆ. ಅಸಹಜ ಚಟುವಟಿಕೆ ಅಥವಾ ಸೈಬರ್ ದಾಳಿಯ ಯಾವುದೇ ವಿಚಾರವನ್ನು ತಕ್ಷಣವೇ ಇನ್ಸಿಡೆಂಟ್​ಸಿಇಆರ್​ಟಿ-ಇನ್​ಗೆ ವರದಿ ಮಾಡುವಂತೆ ಕೋರಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 7 =
Remember me
