ಬೆಂಗಳೂರು:ಯಾವುದಕ್ಕೆ ಬೆಲೆ ಹೆಚ್ಚಾಗಿರುತ್ತದೋ ಇಲ್ಲವೇ ಬೇಡಿಕೆ ತುಂಬಾ ಇರುತ್ತದೋ ಅಂಥದ್ದರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳು ಸಾಮಾನ್ಯವಾಗಿ ಯಾವಾಗಲೂ ಹೆಚ್ಚಾಗಿರುತ್ತದೆ. ಇದೀಗ ಪೆಟ್ರೋಲ್​ಗೂ ಇದು ಅನ್ವಯಿಸುವಂತಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲ್​ ದರ ನಿರಂತರವಾಗಿ ಹೆಚ್ಚಾಗುತ್ತಲೇ ಬಂದಿದೆ. ಈ ಮಧ್ಯೆ ಸ್ವಲ್ಪ ಇಳಿಕೆ ಆಗಿದ್ದರೂ ಪೆಟ್ರೋಲ್​ ದರ ಲೀಟರ್​​ಗೆ ಶತಕದಲ್ಲೇ ಇದೆ. ಇನ್ನು ಇಂಥ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲವರು ತೈಲ ಕಂಪನಿಯ ಡೀಲರ್​​ಶಿಪ್ ಕೊಡುವುದಾಗಿ ಮೋಸ ಮಾಡಲಾರಂಭಿಸಿದ್ದಾರೆ. ಇಂಥ ಹಲವು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ತೈಲ ನಿಗಮ ನಿಯಮಿತ (ಐಒಸಿಎಲ್​) ಸಾರ್ವಜನಿಕರ ಗಮನಕ್ಕೆ ತಂದು ಎಚ್ಚರಿಸಿದೆ.
ಇದನ್ನೂ ಓದಿ:ಯಾವ ರಕ್ತದ ಗುಂಪಿನ ಮೇಲೆ ಕರೊನಾ ಹೆಚ್ಚು ಪರಿಣಾಮ ಬೀರಲಿದೆ? ಹೊಸ ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ
ಡೀಲರ್​​ಶಿಪ್​ ಕೊಡಿಸುವುದಾಗಿ ಹಲವರು ನಕಲಿ ಸರ್ಟಿಫಿಕೇಟ್ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಇಂಥದ್ದೊಂದು ಮೋಸದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಿ. ಯಾರಾದರೂ ಐಒಸಿಎಲ್​ ಡೀಲರ್​ಷಿಪ್​ ಕೊಡಿಸುವುದಾಗಿ ಬಂದರೆ, ಕರೆ ಮಾಡಿದರೆ ಅಥವಾ ಇ-ಮೇಲ್ ಕಳುಹಿಸಿದರೆ ಎಚ್ಚರ ವಹಿಸಿ, ತಕ್ಷಣ ಹತ್ತಿರದ ಅಧಿಕೃತ ಕಚೇರಿಯನ್ನು ಸಂಪರ್ಕಿಸಿ ಎಂದು ಕಿವಿಮಾತು ಹೇಳಿದ್ದಾರೆ.
It has come to our attention that fake dealership certificate is being granted to individuals. The public is advised to beware of this fraud. People are advised to visit the nearest area office of OMCs for authentication.pic.twitter.com/o7B2b1LYy5— Indian Oil Corp Ltd (@IndianOilcl)December 6, 2021
It has come to our attention that fake dealership certificate is being granted to individuals. The public is advised to beware of this fraud. People are advised to visit the nearest area office of OMCs for authentication.pic.twitter.com/o7B2b1LYy5
ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − sixteen =
Remember me
