ಬೆಂಗಳೂರು:ಇದೀಗ ಸೈಬರ್​ಕ್ರೈಮ್ ಎಲ್ಲೆಡೆ ಆವರಿಸಿಕೊಂಡಿದ್ದು, ಯಾರನ್ನೂ ಬಿಟ್ಟಿಲ್ಲ ಎಂಬಂತಾಗಿದೆ. ಅದರಲ್ಲೂ ಈಗ ನಿವೃತ್ತ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ವಂಚಿಸುವ ಜಾಲವೊಂದು ಪತ್ತೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವೇ ಎಚ್ಚರಿಕೆಯನ್ನೂ ನೀಡಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರು ತಮ್ಮ ಪಿಂಚಣಿಯನ್ನು ನಿರಂತರವಾಗಿ ಪಡೆಯುತ್ತಿರಲು ಸಂಬಂಧಿತ ಬ್ಯಾಂಕ್​ ಶಾಖೆಗೆ ವರ್ಷಕ್ಕೊಮ್ಮೆ ಜೀವನ ಪ್ರಮಾಣಪತ್ರ (ಲೈಫ್​ ಸರ್ಟಿಫಿಕೆಟ್​) ಸಲ್ಲಿಸಬೇಕಾದ್ದು ಕಡ್ಡಾಯ. ಇದೀಗ ಈ ಸಂದರ್ಭವನ್ನೂ ದುರ್ಬಳಕೆ ಮಾಡಿಕೊಂಡು ಹಿರಿಯನಾಗರಿಕರನ್ನು ವಂಚಿಸಲು ಖದೀಮರು ಮುಂದಾಗಿದ್ದಾರೆ.
ಆನ್​ಲೈನ್​ನಲ್ಲಿ ಜೀವನ ಪ್ರಮಾಣಪತ್ರ ನೀಡಲಾಗುವುದು ಎಂದು ನಕಲಿ ವೆಬ್​ಸೈಟ್​ ( http://jeevanpraman.online) ಮೂಲಕ ವಂಚಕರು ಮೋಸ ಮಾಡುತ್ತಿದ್ದಾರೆ. ಅಂದರೆ ಈ ವೆಬ್​ಸೈಟ್​ನತ್ತ ನಿವೃತ್ತ ಸರ್ಕಾರಿ ನೌಕರರನ್ನು ಸೆಳೆಯುತ್ತಿರುವ ಅವರು ನೋಂದಣಿ ಶುಲ್ಕ ಎಂದು 150 ರೂ. ಕೇಳಿ ವಂಚಿಸುತ್ತಿದ್ದಾರೆ. ಈ ಬಗ್ಗೆ ಪ್ರೆಸ್​ ಇನ್​ಫಾರ್ಮೇಷನ್ ಬ್ಯೂರೋ ಎಚ್ಚರಿಕೆ ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ಅಂಥ ಯಾವುದೇ ವೆಬ್​ಸೈಟ್ ಇಲ್ಲ ಎಂಬುವುದನ್ನು ತಿಳಿಸಿದೆ. ಅಲ್ಲದೆ ಆನ್​​ಲೈನ್​ ಜೀವನ ಪ್ರಮಾಣಪತ್ರಕ್ಕಾಗಿhttps://jeevanpramaan.gov.inಸಂಪರ್ಕಿಸುವಂತೆ ತಿಳಿಸಿದೆ.
ಶ್ರದ್ಧಾ 35 ಪೀಸ್.. ನಾನು ನಿನ್ನನ್ನು 70 ತುಂಡು​ ಮಾಡುವೆ; ಅತ್ಯಾಚಾರ​ ಮಾಡಿ, ಮತಾಂತರಿಸಿ, ಜೊತೆಗಿಟ್ಟುಕೊಂಡವನ ಬೆದರಿಕೆ!

‘ನನ್ನ ಗಂಡ ಯಾವತ್ತೂ ಮಗನನ್ನು ನೋಡಬಾರದು, ಮಗನ ಹತ್ತಿರ ಬರಬಾರದು’ ಅಂತ ಕೇಸ್ ಹಾಕಬಹುದೇ?

ಒಂದೇ ಒಂದು ಬ್ರೇಕ್ ಫೇಲ್​: ಅಪಘಾತಕ್ಕೆ ಒಳಗಾದ್ವು 4 ಲಾರಿ, 3 ಕಾರು, 2 ಬೈಕ್, ಒಂದು ತಳ್ಳುವ ಗಾಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + three =
Remember me
