ಮುಂಬೈ:ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆಗಿನ ಕಂಪನಿಗಳಲ್ಲಿ ಪಾಲುದಾರಿಕೆಯ ಹುಸಿ ಭರವಸೆ ನೀಡಿದ ವ್ಯಕ್ತಿಯೊಬ್ಬ 57 ವರ್ಷದ ಪೊಲೀಸ್ ಪೇದೆಗೆ ಸುಮಾರು 1ಕೋಟಿ ರೂ.ವಂಚಿಸಿದ್ದಾನೆ.
ಇದನ್ನೂ ಓದಿ:ಒಂಬತ್ತು ರಾಜ್ಯಗಳಿಗೆ ರಾಜ್ಯಪಾಲರ ನೇಮಕ..ಆರ್ವರು ಹೊಸಬರು- ಮೂರು ಕಡೆ ಪುನರ್ರಚನೆ
ಪೊಲೀಸ್​ ಕಾನ್​ಸ್ಟೇಬಲ್​ ವಿಜಯ್ ಗಾಯಕ್ವಾಡ್ ರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಆಗಾಗ ಭೇಟಿಯಾಗುತ್ತಿದ್ದ ಗೋರೆಗಾಂವ್‌ನ 48 ವರ್ಷದ ಅಪೂರ್ವ ಜಗದೀಶ್ ಮೆಹ್ತಾ 2021ರಲ್ಲಿ ಶರದ್​ ಪವಾರ್​ ಆದೇಶದ ಮೇರೆಗೆ ಕಂಪನಿಯನ್ನು ಪ್ರಾರಂಭಿಸುತ್ತಿದ್ದು, ಅದರಲ್ಲಿ ಪಾಲುದಾರಿಕೆ ನೀಡುವುದಾಗಿ ತಿಳಿಸಿದ್ದಾನೆ. ಒಂದು ಕಂಪನಿಗೆ ಗಾಯಕ್‌ವಾಡ್ ಪುತ್ರಿ, ಮತ್ತೊಂದು ಕಂಪನಿಗೆ ಅವರ ಪುತ್ರನ ಹೆಸರನ್ನು ಇಡುವುದಾಗಿ ಮೆಹ್ತಾ ಭರವಸೆ ನೀಡಿದ್ದಾನೆ.
ಇದನ್ನು ಗಾಯಕ್ವಾಡ್​ ನಂಬಿದ್ದು, ಉದ್ಯಮವನ್ನು ಪ್ರಾರಂಭಿಸಲು 1 ಕೋಟಿ ಅಗತ್ಯವಿದೆ ಎಂದು ಮೆಹ್ತಾ ಹೇಳಿದ್ದಾನೆ. ಆಗ ಗಾಯಕ್ವಾಡ್ ತಮ್ಮ ಫ್ಲಾಟ್ ಅನ್ನು ಮಾರಿ ಮೆಹ್ತಾಗೆ 93 ಲಕ್ಷ ರೂ. ಹೊಂದಿಸಿ ಕೊಟ್ಟಿದ್ದಾರೆ.
ಆದರೆ ಗಾಯಕ್ವಾಡ್ ವ್ಯವಹಾರದ ವಿಳಂಬವನ್ನು ಪ್ರಶ್ನಿಸಿದಾಗ, ಗಾಯಕ್ವಾಡ್ ಮಗಳ ಜಾತಕದಲ್ಲಿ ‘ರಾಹು ದೋಷ’ವಿದೆ ಎಂದು ಶರದ್​ ಪವಾರ್ ಗುರುತಿಸಿದ್ದಾರೆ ಎಂದು ಮೆಹ್ತಾ ಪ್ರತಿಪಾದಿಸಿದ್ದಾನೆ. ಇದಕ್ಕೆ ದಕ್ಷಿಣೇಶ್ವರ ಕಾಳಿ ದೇವಸ್ಥಾನದಲ್ಲಿ ಪೂಜೆಗೆ ಸಲಹೆಯನ್ನೂ ನೀಡಿದ್ದಾನೆ. ಮೆಹ್ತಾ ಮಾತು ನಂಬಿ ಗಾಯಕ್ವಾಡ್ ತಮ್ಮ ಕುಟುಂಬದೊಂದಿಗೆ ಪೂಜೆ ನೆರವೇರಿಸಿದ್ದಾರೆ.
ನಂತರ ದಿಂಡೋಶಿ ನ್ಯಾಯಾಲಯದಲ್ಲಿ ಕಂಪನಿಯ ಸ್ಥಾಪನೆ ಸಂಬಂಧ ಕಾನೂನಿನಂತೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದ. ಕಡೆಗೆ ವಂಚಿಕ ಮೆಹ್ತಾ ಹಣಪಡೆಯಲು ಶರದ್ ಪವಾರ್ ಅವರ ಹೆಸರನ್ನು ಬಳಸಿದ್ದಾನೆ ಎಂಬುದನ್ನು ಅರಿತುಕೊಂಡ ಗಾಯಕ್‌ವಾಡ್ ಸಹರ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಪೊಲೀಸರು ಮೆಹ್ತಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 406 ಮತ್ತು 420 ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ದೀಪಿಕಾ ಜೊತೆ ಅಂಥ ಸೀನ್​ಗಳಲ್ಲಿ ನಟಿಸುವಾಗ ಭಯವಾಯ್ತು: ಸಿದ್ಧಾಂತ್ ಹೀಗೆನ್ನಲು ಕಾರಣವಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
