ನವದೆಹಲಿ :ಜನರಿಗೆ ಕರೆ ಮಾಡಿ ಲಾಟರಿ ಸ್ಕೀಮಿನಲ್ಲಿ ಮೊಬೈಲ್​ ಫೋನುಗಳನ್ನು ಅಗ್ಗದ ಬೆಲೆಯಲ್ಲಿ ನೀಡುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಖದೀಮರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನವದೆಹಲಿಯ ರೋಹಿಣಿ ಸೆಕ್ಟರ್​-7 ಪ್ರದೇಶದಲ್ಲಿ ಈ ಉದ್ದೇಶಕ್ಕೆ ಬಳಸುತ್ತಿದ್ದ ನಕಲಿ ಕಾಲ್​ ಸೆಂಟರನ್ನು ಪತ್ತೆ ಹಚ್ಚಲಾಗಿದ್ದು, 15 ಮಹಿಳೆಯರು ಸೇರಿದಂತೆ 24 ಜನರನ್ನು ಬಂಧಿಸಲಾಗಿದೆ.
ಮುಖ್ಯ ಆರೋಪಿಗಳಾದ ದೆಹಲಿಯ ಸುಲ್ತಾನಪುರಿಯ ನಿವಾಸಿಗಳಾದ ರಾಮ್‌ಕುಮಾರ್ (34), ಶ್ಯಾಮ್ ಕುಮಾರ್ (35) ಮತ್ತು ಗೋವಿಂದ್ (22) ಒಟ್ಟಾಗಿ ಈ ಕಾಲ್ ಸೆಂಟರನ್ನು ನಡೆಸುತ್ತಿದ್ದರು. ಸುಳಿವಿನ ಮೇರೆಗೆ ಶುಕ್ರವಾರ ನಡೆಸಿದ ದಾಳಿಯಲ್ಲಿ ವಂಚನೆಯ ದಂಧೆ ಹೊರಬಂದಿದ್ದು, ಆರೋಪಿಗಳು ಹೆಚ್ಚಾಗಿ ಈಶಾನ್ಯ ರಾಜ್ಯಗಳಿಗೆ ಸೇರಿದ ಜನರನ್ನು ವಂಚಿಸುತ್ತಿದ್ದರು ಎಂದು ಡಿಸಿಪಿ ಪ್ರಣವ್​ ತಯಾಲ್ ಹೇಳಿದ್ದಾರೆ.
ಇದನ್ನೂ ಓದಿ:ಇಂದು ಬೇಬಿ ಶಾಮಿಲಿ ಬರ್ತ್​ ಡೇ: ಕನ್ನಡಿಗರ ಮನ ಗೆದ್ದಿದ್ದ ಪುಟಾಣಿಗೆ ಈಗೆಷ್ಟು ವಯಸ್ಸು?
ಇಂಟರ್​ನೆಟ್​ನಿಂದ ಬೇರೆ ರಾಜ್ಯಗಳ ನಿವಾಸಿಗಳ ಫೋನ್​ ನಂಬರ್​ಗಳನ್ನು ಸಂಗ್ರಹಿಸಿ, ಕರೆ ಮಾಡುತ್ತಿದ್ದರು. ಅವರ ದೂರವಾಣಿ ಸಂಖ್ಯೆ ಲಾಟರಿಯಲ್ಲಿ ಆಯ್ಕೆಯಾಗಿದ್ದು, 17,000 ರೂ. ಮೌಲ್ಯದ ಮೊಬೈಲ್​ ಫೋನ್​ 4,500 ರೂ.ಗಳಿಗೆ ಸಿಗುತ್ತದೆ ಎಂದು ನಂಬಿಸಿ ಹಣ ಪೀಕುತ್ತಿದ್ದರು ಎನ್ನಲಾಗಿದೆ.
ತಮ್ಮ ‘ಅದೃಷ್ಟವಂತ’ ಗ್ರಾಹಕರನ್ನು ನಂಬಿಸಲು ಪೋಸ್ಟ್​ ಆಫೀಸಿನ ಮೂಲಕ ಮೊಬೈಲ್ ಕಳುಹಿಸುವುದಾಗಿ ಹೇಳುತ್ತಿದ್ದರು. ನಂತರ ಮೊಬೈಲ್​ನ ಬದಲಿಗೆ, ಅಗ್ಗದ ಪರ್ಸ್​ಗಳು, ಬೆಲ್ಟು, ಸೋಪು ಮುಂತಾದವನ್ನು ಪಾರ್ಸಲ್ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 3 ಕಂಪ್ಯೂಟರ್, 52 ಮೊಬೈಲ್​ ಮತ್ತು 384 ವಿವಿಧ ವಸ್ತುಗಳ ಪ್ಯಾಕೆಟುಗಳನ್ನು ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ.(ಏಜೆನ್ಸೀಸ್)
13 ವರ್ಷದ ಬಾಲಕಿಗೆ ಅಸಂಬದ್ಧ ಪ್ರಶ್ನೆ ಕೇಳಿದ್ದ ಬಸ್​ ಕಂಡಕ್ಟರ್​ಗೆ 1 ವರ್ಷ ಜೈಲು
ಭಾರತಕ್ಕೆ ಅಮೆರಿಕದ ಹೊಸ ಅಂಬಾಸಿಡರ್​ ಆಗಲು ಲಾಸ್​ಏಂಜಲೀಸ್​ ಮೇಯರ್​ ಎರಿಕ್ ಎಂ.ಗಾರ್ಸೆಟ್ಟಿ ಹೆಸರು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
