ದೇಶದಲ್ಲಿಬ್ಯಾಂಕುಗಳಿಗೆ ಹಣಕಾಸು ವಂಚನೆ ಎಸಗುವ ಪ್ರಕರಣ ಶೇ. 51 ಇಳಿಕೆ ಕಂಡಿದೆ. ಕಳೆದ ಮಾ. 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ 40,295 ಕೋಟಿ ರೂ. ವಂಚನೆ ದಾಖಲಾಗಿದೆ ಎಂದು ಆರ್​ಬಿಐ ಅಂಕಿ&ಅಂಶ ತಿಳಿಸಿದೆ. ಇದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ ದೇಶದ 12 ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು 81,921 ಕೋಟಿ ರೂ. ವಂಚನೆ ಅನುಭವಿಸಿದ್ದವು.
ಪ್ರಕರಣ ಇಳಿದಿಲ್ಲಹಣಕಾಸು ವಂಚನೆಯ ಮೊತ್ತದಲ್ಲಿ ಇಳಿಕೆ ಆಗಿದ್ದರೂ, ಒಟ್ಟು ಪ್ರಕರಣದಲ್ಲಿ ದೊಡ್ಡ ಪ್ರಮಾಣದ ಇಳಿಕೆ ಕಂಡು ಬಂದಿಲ್ಲ. 2020&21ರಲ್ಲಿ ದೇಶಾದ್ಯಂತ ವಿವಿಧ ಬ್ಯಾಂಕುಗಳಲ್ಲಿ 9933 ವಂಚನೆ ಪ್ರಕರಣ ದಾಖಲಾಗಿತ್ತು. 2022ರ ಸಾಲಿನಲ್ಲಿ ಇದು 7940 ಆಗಿದೆ.
2022 ಸಾಲಿನಲ್ಲಿ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿ 9528.95 ಕೋಟಿ ರೂ. ಮೊತ್ತದ ವಂಚನೆ ನಡೆದಿದ್ದು, ಇದು ಇತರ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಗರಿಷ್ಠ ಮೊತ್ತವಾಗಿದೆ. ಒಟ್ಟು 431 ಪ್ರಕರಣ ದಾಖಲಾಗಿದೆ. ದೇಶದ ಅತಿದೊಡ್ಡ ಬ್ಯಾಂಕ್​ ಎಸ್​ಬಿಐನಲ್ಲಿ 6932.37 ಕೋಟಿ ರೂ. ವಂಚನೆ ನಡೆದಿದ್ದು, 4192 ಪ್ರಕರಣ ಪತ್ತೆಯಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ, ವಂಚನೆಯ ಮೊತ್ತ ಕಡಿಮೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 10 =
Remember me
