ನವದೆಹಲಿ:ದೇಶಾದ್ಯಂತ ಕರೊನಾ ಸೋಂಕು ವ್ಯಾಪಿಸುತ್ತಿದ್ದು, ಕೆಲವೆಡೆ ಪರಿಸ್ಥಿತಿ ಕೈಮೀರಿ ಹೋಗುವ ಆತಂಕಗಳೂ ಕಾಡುತ್ತಿವೆ. ಈ ಮಧ್ಯೆ ಸೋಂಕು ತಡೆಗೆ ಲಸಿಕೆ ಹಾಕಿಸಿಕೊಳ್ಳುವುದೇ ಅತ್ಯುತ್ತಮ ಮಾರ್ಗವೆಂದು ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೆಚ್ಚು ಹೆಚ್ಚು ಮಂದಿ ಲಸಿಕೆ ಹಾಕಿಸಿಕೊಳ್ಳುವಂತೆ ನಾನಾ ರೀತಿಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ ಕೆಲವೆಡೆ ಆಫರ್​​ಗಳನ್ನೂ ಕೊಡಲಾಗುತ್ತಿದೆ.
ದೊಡ್ಡ ಪ್ರಮಾಣದ ಜನತೆ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಈಗಾಗಲೇ ಹಲವೆಡೆ ಅಭಿಯಾನ ಆರಂಭಗೊಂಡಿದ್ದು, ಲಸಿಕೆ ಹಾಕಿಸಿಕೊಂಡ ಕೆಲವರಿಗಂತೂ ಭರ್ಜರಿ ಕೊಡುಗೆಗಳು ಸಿಗಲಾರಂಭಿಸಿವೆ. ಗುಜರಾತ್​ನ ರಾಜ್​ಕೋಟ್​ ಜಿಲ್ಲೆಯ ಜಾನ್​ ವಿಷನ್​ ಸಂಸ್ಥೆ ಲಸಿಕೆ ಹಾಕಿಸಿಕೊಂಡವರಿಗೆ ಉಚಿತವಾಗಿ ಆಹಾರ ನೀಡುತ್ತಿದೆ. ಅದರಲ್ಲೂ ರಾಜ್​ಕೋಟ್​ನ ಚಿನ್ನದ ವರ್ತಕರ ಸಮುದಾಯವು ಕಳೆದ ವಾರ ಲಸಿಕೆ ಹಾಕಿಸಿಕೊಂಡ ಮಹಿಳೆಯರಿಗೆ ಚಿನ್ನದ ಮೂಗುತಿಯನ್ನೇ ಕೊಟ್ಟಿದೆ.
ಇದನ್ನೂ ಓದಿ:ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​
ಹರ್ಯಾಣದ ಗುರುಗ್ರಾಮದ ಗೋಲ್ಡ್ ರಸ್ತೆಯಲ್ಲಿನ ಇಂಡಿಯನ್​ ಗ್ರಿಲ್​ ರೂಮ್​ನಲ್ಲಿ ಲಸಿಕೆ ಹಾಕಿಸಿಕೊಂಡಿದ್ದವರಿಗೆ ಉಚಿತವಾಗಿ ಬಿಯರ್ ನೀಡುವ ಆಫರ್ ಕೂಡ ಚಾಲ್ತಿಯಲ್ಲಿದೆ. ಗ್ರಾಹಕರು ಲಸಿಕೆ ಹಾಕಿಸಿಕೊಂಡ ಕುರಿತ ಕಾರ್ಡ್ ತೋರಿಸಿದರೆ ಅವರಿಗೆ ಒಂದು ಬಿಯರ್ ಉಚಿತವಾಗಿ ನೀಡಲಾಗುತ್ತಿದೆ. ಏ. 5ರಿಂದಲೇ ಆರಂಭವಾಗಿರುವ ಈ ಆಫರ್​ ಈ ವಾರವಿಡೀ ಚಾಲ್ತಿಯಲ್ಲಿದೆ. ಇನ್ನು ಈ ಥರದ ಆಫರ್​ ದೇಶದ ವಿವಿಧೆಡೆ ಆರಂಭವಾದರೂ ಅಚ್ಚರಿ ಏನಿಲ್ಲ. (ಏಜೆನ್ಸೀಸ್​)
ಇದನ್ನೂ ಓದಿ:ಇಲ್ಲೆಲ್ಲ ಈ ಲಸಿಕೆ ಕೊಡುವುದು ನಿಲ್ಲಿಸಿದ್ದಾರಂತೆ!; ರಕ್ತಹೆಪ್ಪುಗಟ್ಟುತ್ತದೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ
ರಾಜ್ಯದಲ್ಲಿ ನೈಟ್​ ಕರ್ಫ್ಯೂ ಜಾರಿ- ಎಲ್ಲೆಲ್ಲಿ ನಿಷೇಧ? ಏನಿರುತ್ತೆ? ಏನಿರಲ್ಲ? ರಾತ್ರಿ ಬಂದ್​ ಏಕೆ? ಇಲ್ಲಿವೆ ಡಿಟೇಲ್ಸ್​

ಕರೊನಾ ಜಾಗೃತಿಗಾಗಿ ವಾಹನ ಸಮೇತ ಬೀದಿಗಿಳಿದ ಯಮರಾಜ; ರಸ್ತೆಯಲ್ಲಿ ನಿಂತು ಯಮ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − three =
Remember me
