ಭೋಪಾಲ್​ :ಈ ವರ್ಷದ ಕೊನೆಯ ವೇಳೆಗೆ ಎಲ್ಲಾ 18 ವರ್ಷ ಮೇಲ್ಪಟ್ಟ ನಾಗರೀಕರಿಗೆ ಕರೊನಾ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಲಸಿಕೆ ಹಿಂಜರಿಕೆ, ಲಸಿಕೆ ಬಗೆಗಿನ ಮಿಥ್ಯಗಳು ಮತ್ತು ವದಂತಿಗಳು ಜನರನ್ನು ಭಯದ ನೆರಳಿಗೆ ನೂಕಿದೆ. ಹೀಗಿರುವಾಗ, ಲಸಿಕೆ ಪಡೆಯಲು ಜನರನ್ನು ಪ್ರೇರೇಪಿಸಲು ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ವಿಶಿಷ್ಟ ಮಾರ್ಗ ಅನುಸರಿಸುತ್ತಿದ್ದಾರೆ.
ಭೋಪಾಲ್​ನ ಬೇರಸಿಯ ವಿಧಾನಸಭಾ ಕ್ಷೇತ್ರದ ಶಾಸಕ ವಿಷ್ಣು ಖತ್ರಿ ಅವರು ಜೂನ್ 30 ರೊಳಗೆ ಕರೊನಾ ಲಸಿಕೆ ಹಾಕಿಸಿಕೊಂಡ ಜನರಿಗೆಲ್ಲಾ ಮೊಬೈಲ್​ಗೆ ಉಚಿತ ರೀಚಾರ್ಜ್​ ಮಾಡಿಸುವುದಾಗಿ ಹೇಳಿದ್ದಾರೆ. ಅದರೊಂದಿಗೆ ತಮ್ಮ ಕ್ಷೇತ್ರದಲ್ಲಿ ಯಾವ ಪಂಚಾಯತ್ ಮೊದಲು ಶೇ.100 ರಷ್ಟು ಲಸಿಕಾಕರಣದ ಗುರಿ ಸಾಧಿಸುತ್ತದೆಯೋ, ಅದಕ್ಕೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಖತ್ರಿ ಅವರು ಘೋಷಿಸಿದ್ದಾರೆ.​
ಇದನ್ನೂ ಓದಿ:‘ನಾವು ಸರ್ಟಿಫೈಡ್​ ಗೂಂಡಾಗಳು’ ಎಂದ ಶಿವಸೇನಾ ನಾಯಕ ಸಂಜಯ್​ ರಾವತ್​
ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾಕರಣದ ನಿಧಾನಗತಿಯೇ ಅವರ ಈ ಹೆಜ್ಜೆಗೆ ಕಾರಣ, “ನನ್ನ ಕ್ಷೇತ್ರದಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳೇ ಇವೆ. ಇಲ್ಲಿ ಜನಕ್ಕೆ ಲಸಿಕೆ ಪಡೆಯುವ ಬಗ್ಗೆ ತುಂಬಾ ಗೊಂದಲವಿದೆ ಅದಕ್ಕಾಗೇ ಹೆಚ್ಚು ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಲಿ ಎಂದು ನಾನು ಅವರಿಗೆ ಮೊಬೈಲ್ ರೀಚಾರ್ಜ್​ ಮಾಡಿಸುವುದಾಗಿ ಘೋಷಿಸಿದ್ದೇನೆ” ಎಂದು ವಿಷ್ಣ ಖತ್ರಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಖತ್ರಿ ಅವರಿಗೂ ಮುಂಚೆ ಹೋಸಂಗಾಬಾದ್ ಕ್ಷೇತ್ರದ ಶಾಸಕ ಸೀತಾಶರಣ್​ ಶರ್ಮ ಅವರು ಶೇ. 100 ರಷ್ಟು ಲಸಿಕಾಕರಣ ಸಾಧಿಸಿದ ಗ್ರಾಮಕ್ಕೆ ನೀಡುವುದಾಗಿ ಘೋಷಿಸಿದ್ದರು. ಅವರ ಕ್ಷೇತ್ರದಲ್ಲಿ 23 ಗ್ರಾಮ ಪಂಚಾಯತ್​ಗಳಡಿಯಲ್ಲಿ 40 ಹಳ್ಳಿಗಳಿವೆ. ಕಳೆದ ತಿಂಗಳು ಇಲ್ಲಿ ಕೇವಲ ಶೇ.17 ರಷ್ಟು ಜನರಿಗೆ ಲಸಿಕೆಗಳನ್ನು ನೀಡಲಾಗಿತ್ತು. ಶರ್ಮ ಅವರು ಬಹುಮಾನವನ್ನು ಘೋಷಿಸಿದ ನಂತರ ಲಸಿಕಾ ದರವು ಶೇ. 52ಕ್ಕೆ ಏರಿದೆ ಎನ್ನಲಾಗಿದೆ.(ಏಜೆನ್ಸೀಸ್)
ಕರೊನಾ ಕ್ವಾರಂಟೈನ್ ಉಲ್ಲಂಘಿಸಿದ ಭಾರತೀಯನಿಗೆ ಬಹ್ರೈನ್​ನಲ್ಲಿ 3 ವರ್ಷ ಜೈಲು ಶಿಕ್ಷೆ! ಸಹಾಯಕ್ಕೆ ಮೊರೆ

ಒಲಂಪಿಕ್ಸ್​​​ಗೆ ಸಿದ್ಧವಾಯ್ತು ಹಾಕಿ ಮಹಿಳಾ ತಂಡ; ಕ್ಯಾಪ್ಟನ್​ ಆಗಿ ರಾಣಿ ರಾಂಪಾಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 12 =
Remember me
