ನವದೆಹಲಿ:ಕರೊನಾ ಸಾಂಕ್ರಾಮಿಕದ ಸಂಕಷ್ಟದ ಕಾಲದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿ ಬಡವರಿಗೆ ವಿತರಿಸಲಾಗುತ್ತಿದ್ದ ಉಚಿತ ಪಡಿತರ ಸೌಲಭ್ಯವನ್ನು ಇನ್ನಾರು ತಿಂಗಳು ವಿಸ್ತರಿಸಲಾಗಿದೆ.
ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಬಡವರಿಗೆ ಮುಂದಿನ ಸೆಪ್ಟೆಂಬರ್​ವರೆಗೆ ಅನುಕೂಲ ಆಗಲಿದೆ ಎಂದು ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ. ಪಿಎಂಜಿಕೆಎವೈ ಅಡಿಯಲ್ಲಿ ಇದುವರೆಗೆ ಒಂದು ಸಾವಿರಕ್ಕೂ ಹೆಚ್ಚು ಟನ್ ದವಸ, ಧಾನ್ಯ ನೀಡಲಾಗಿದೆ. ಇದರ ಮೌಲ್ಯ 3.40 ಲಕ್ಷ ಕೋಟಿ ರೂಪಾಯಿ ಎಂದು ಗೋಯಲ್ ಹೇಳಿದ್ದಾರೆ.
ಕರೊನಾ ಭಾರತಕ್ಕೆ ಕಾಲಿಟ್ಟ ನಂತರ ಲಾಕ್​ಡೌನ್ ಘೋಷಿಸಲಾಯಿತು. ಇದರಿಂದ ಬಡವರ ಬದುಕು ದುರ್ಬರವಾಗುವುದನ್ನು ತಪ್ಪಿಸಲು ಉಚಿತ ಪಡಿತರ ವಿತರಣೆ ಆರಂಭಿಸಲಾಯಿತು. ಇದರಿಂದ ದೇಶದ 80 ಕೋಟಿಗೂ ಹೆಚ್ಚು ಬಡವರಿಗೆ ಅನುಕೂಲ ಆಗಿದೆ. ಈ ಯೋಜನೆಯಡಿ ಪಡಿತರ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ನೀಡುವ ಆಹಾರ ಧಾನ್ಯದ ಜತೆಗೆ ತಿಂಗಳಿಗೆ ಐದು ಕೇಜಿ ಬೇಳೆಕಾಳನ್ನು ಉಚಿತವಾಗಿ ನೀಡಲಾಗುತ್ತಿದೆ. ಐದು ಸಾರಿ ಯೋಜನೆ ವಿಸ್ತರಣೆಗೊಂಡು ಇದೇ ತಿಂಗಳು ಕೊನೆಗೊಳ್ಳಬೇಕಿತ್ತು. ಈಗ ಇದನ್ನು ಇನ್ನೂ ಆರು ತಿಂಗಳು ವಿಸ್ತರಿಸಲಾಗಿದೆ.
ಗಂಡನನ್ನು ಬಿಟ್ಟು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​; ಅವಳಿಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯತ್ನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
