ನೋಯ್ಡಾ:ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಜನರಿಗೆ ಸ್ಮಾರ್ಟ್​ಫೋನ್​ ಲಭ್ಯವಾಗಬೇಕೆಂದು, ಕೇವಲ 251 ರೂಪಾಯಿಗೆ ಮೊಬೈಲ್​ ಮಾರಾಟ ಮಾಡಲು ಆರಂಭಿಸಿದ್ದ ಸಂಸ್ಥೆಯ ಸಂಸ್ಥಾಪಕ ಮೋಹಿತ್​ ಗೋಯಲ್​ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಡ್ರೈಫ್ರೂಟ್ಸ್​ ವ್ಯವಹಾರದ ಹೆಸರಿನಲ್ಲಿ ನೂರಾರು ವ್ಯಾಪಾರಿಗಳಿಗೆ 200 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇರೆಗೆ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ನಿಮ್ಮ ಖಾಸಗಿ ವಿಷಯ ನೀವೇ ಇಟ್ಕೊಳಿ, ನಮಗೆ ಬೇಡಪ್ಪ ಎಂದ ವಾಟ್ಸ್​ಆ್ಯಪ್​ ಏನು ಹೇಳಿದೆ ನೋಡಿ…
ಫ್ರೀಡಂ 251 ಸ್ಮಾರ್ಟ್​ಫೋನ್​ ಬಗ್ಗೆ ನಿಮಗೆ ಗೊತ್ತಿರಬಹುದು. ಕೆಲ ವರ್ಷಗಳ ಹಿಂದೆ ಇಂತದ್ದೊಂದು ಸಂಸ್ಥೆಯನ್ನು ಮೋಹಿತ್​ ಪ್ರಾರಂಭಿಸಿದ್ದರು. ಕೇವಲ 251 ರೂಪಾಯಿಗೆ ಸ್ಮಾರ್ಟ್​ಫೋನ್​ ಮಾರಾಟ ಮಾಡುವುದಾಗಿ ತಿಳಿಸಿದ್ದರು. ಆದರೆ ಅವರ ಈ ಫೋನನ್ನು ಜನ ಮೆಚ್ಚದ ಕಾರಣ ಸಂಸ್ಥೆ ಮರೆಯಾಗಿತ್ತು. ಅದೇ ಮೋಹಿತ್​ ತನ್ನ ಕೆಲ ಗೆಳೆಯರೊಂದಿಗೆ ಸೇರಿಕೊಂಡು ದುಬೈ ಡ್ರೈ ಫ್ರೂಟ್ಸ್​ ಅಂಡ್​ ಸ್ಪೈಸಸ್​ ಹಬ್​ ಹೆಸರಿನ ಸಂಸ್ಥೆಯನ್ನು ತೆರೆದಿದ್ದರು.
ತಮ್ಮ ಈ ಡ್ರೈಫ್ರೂಟ್ಸ್​ ಸಂಸ್ಥೆಯ ಮೂಲಕ ವಿವಿಧ ರಾಜ್ಯಗಳ ಡ್ರೈಫ್ರೂಟ್ಸ್​ ವ್ಯವಹಾರಸ್ಥರ ಬಳಿ ಡ್ರೈಫ್ರೂಟ್ಸ್​ ಖರೀದಿಸಲಾಗುತ್ತಿತ್ತು. ಆರಂಭದಲ್ಲಿ ಮಾರುಕಟ್ಟೆಗೆ ಬೆಲೆಗಿಂತ ಹೆಚ್ಚಿನ ಹಣವನ್ನು ಕೊಟ್ಟೇ ಖರೀದಿ ಮಾಡಲಾಗಿದೆ. ಈ ರೀತಿ ನಂಬಿಕೆ ಬೆಳೆಸಿಕೊಂಡ ನಂತರ ಹೆಚ್ಚಿನ ಮೊತ್ತದ ಡ್ರೈಫ್ರೂಟ್ಸ್​ಗೆ ಆರ್ಡರ್​ ನೀಡಲಾಗಿದೆ. ಅದಕ್ಕೆ ಶೇ. 40 ಹಣವನ್ನು ಮುಂಗಡವಾಗಿ ಪಾವತಿ ಮಾಡಲಾಗಿದೆ. ಉಳಿದ ಹಣವನ್ನು ಚೆಕ್​ನಲ್ಲಿ ಬರೆದುಕೊಡಲಾಗಿದೆ. ಆದರೆ ಆ ಚೆಕ್​ ಬೌನ್ಸ್​ ಆಗಿದೆ. ಈ ರೀತಿ ಒಂದಲ್ಲ ಎರಡಲ್ಲ ಬರೋಬ್ಬರಿ 40ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಮೋಸ ಮಾಡಲಾಗಿದ್ದು ಅವರೆಲ್ಲರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಆಕಾಶಕ್ಕೆ ಹಾರಿಸಿದ ಸಮೋಸ ಫ್ರಾನ್ಸ್​ಗೆ ತಲುಪಿತು!; ವಿಚಿತ್ರ ಪ್ರಯತ್ನ ನಡೆಸಿದ ‘ಚಾಯ್​ ವಾಲಾ’
ದೂರನ್ನು ಆಧರಿಸಿ ಮೋಹಿತ್​ ಮತ್ತು ಓಂ ಪ್ರಕಾಶ್​ ಜಾಗಿದ್​ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನುಳಿದಂತೆ ಸುಮಿತ್​ ಯಾದವ್, ರಾಜೀವ್ ಕುಮಾರ್ ಮತ್ತು ಪ್ರವೀಣ್ ಸಿಂಗ್ ನಿರ್ವಾನ್​ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನೋಯ್ಡಾದಲ್ಲಿ ಕಂಪನಿಯ ಕಚೇರಿಯಿಂದ 60 ಕೆಜಿ ಡ್ರೈಫ್ರೂಟ್ಸ್​ ಮತ್ತು ಕೆಲವು ದಾಖಲೆಗಳು ಸೇರಿದಂತೆ ಎರಡು ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶ, ದೆಹಲಿ, ಪಂಜಾಬ್​, ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿ ಅನೇಕ ರಾಜ್ಯಗಳ ವ್ಯಾಪಾರಿಗಳಿಗೆ ಈ ಗ್ಯಾಂಗ್​ ಮೋಸ ಮಾಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)
ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಮಗಳ ಅಕ್ರಮ ಸಂಬಂಧವನ್ನು ಒಪ್ಪದ ತಂದೆಯ ಸಜೀವ ದಹನ! ಹೆಂಡತಿ ಮಕ್ಕಳಿಂದಲೇ ನಡೆಯಿತು ದುಷ್ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 19 =
Remember me
