ಪ್ಯಾರಿಸ್:ಇತ್ತೀಚೆಗಷ್ಟೇ ವ್ಯಕ್ತಿಯೋರ್ವ ನಾನು ಬಿಯರ್​ ಕಂಪನಿಯೊಂದರ ಉದ್ಯೋಗಿ. ಪ್ರತಿದಿನ ಅದರಲ್ಲಿ ನನ್ನ ಮೂತ್ರ ಸೇರಿಸುತ್ತಿದ್ದೆ ಎಂದು ಹೇಳಿದ್ದ. ಆಮೇಲೆ ಅದು ಸುಳ್ಳು ಎಂಬುದು ಗೊತ್ತಾಗಿತ್ತು.
ಆದರೆ ಇಲ್ಲೊಬ್ಬಳು ಬೇಕರಿ ನಡೆಸುವವಳು ಒಂದು ಭಯಾನಕ ಸತ್ಯ ಬಿಚ್ಚಿಟ್ಟಿದ್ದಾಳೆ. ತಾನು ಬ್ರೆಡ್​ ತಯಾರಿಸಲು ಮಹಿಳೆಯರ ಮೂತ್ರ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.
ಇದು ಕೇಳಲು ಅಸಹ್ಯ ಎನ್ನಿಸಿದರೂ ಸತ್ಯ. ಲೂಯಿಸ್ ರಾಗೆಟ್​ ಎಂಬುವಳು ಈ ಶಾಕಿಂಗ್​ ವಿಚಾರ ಹೇಳಿದ್ದಾರೆ. ಈಕೆ ಇಂಜಿನಿಯರ್​ ಮತ್ತು ಪರಿಸರ ಸ್ತ್ರೀವಾದಿ. ಈಕೆ ಗೋಲ್ಡಿಲಾಕ್ಸ್​ ಬ್ರೆಡ್​ನ್ನು ಬೇಯಿಸಿ, ಸಿದ್ಧಪಡಿಸಿಕೊಳ್ಳಲು ಮಹಿಳೆಯರ ಸಾರ್ವಜನಿಕ ಶೌಚಗೃಹದಿಂದ ಮೂತ್ರವನ್ನು ಸಂಗ್ರಹಿಸುತ್ತಾರಂತೆ. ಅದನ್ನು ಬ್ರೆಡ್​ಗೆ ಬಳಸುವ ಮೊದಲು ಸುಮಾರು 20 ಬಾರಿ ಸಂಸ್ಕರಿಸಿ, ನಿಸ್ಸಾರಗೊಳಿಸುತ್ತಾರಂತೆ.
ಮೂತ್ರವನ್ನು ಅತ್ಯಂತ ಪ್ರಬಲ ರಸಗೊಬ್ಬರ ಎಂದು ಕರೆದಿರುವ ಲೂಯಿಸ್​, ಮಾನವರ ತ್ಯಾಜ್ಯದ ಬಗೆ ಇರುವ ನಿಷೇಧವನ್ನು, ಅಸಹ್ಯದ ಮನೋಭಾವನೆಯನ್ನು ಹೋಗಲಾಡಿಸುವುದು ಮತ್ತು ಒಂದು ಸುಸ್ಥಿರ ಆಹಾರ ಚಕ್ರವನ್ನು ಉತ್ತೇಜಿಸುವುದು ನನ್ನ ಉದ್ದೇಶ. ಅದಕ್ಕಾಗಿ ನಾನೇ ಸ್ವತಃ ಈ ಪ್ರಯೋಗಕ್ಕೆ ಮುಂದಾಗಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ:ಇವರೆಲ್ಲಾ ಯಾಕೆ ನನ್ನ ಹಿಂದೆ ಬಿದ್ದಿದ್ದಾರೆ? ಮೀರಾ ಮಿಥುನ್​ ಪ್ರಶ್ನೆ
ಮೂತ್ರವೊಂದು ತ್ಯಾಜ್ಯ ಎಂದು ನಿರ್ಲಕ್ಷಿಸಲ್ಪಡುತ್ತದೆ. ಆದರೆ ಇದೂ ಕೂಡ ಚಿನ್ನದಷ್ಟೇ ಬೆಲೆ ಹೊಂದಿದೆ. ಯುರಿನ್​​ನಲ್ಲಿ ನ್ಯೂಟ್ರಿಜೆನ್​, ಪೊಟ್ಯಾಷಿಯಂ ಸೇರಿ ಹಲವು ರೀತಿಯ ಪೌಷ್ಟಿಕಾಂಶಗಳು ಇರುತ್ತವೆ ಎಂದಿದ್ದಾರೆ. ಆದರೆ ಈ ಮಹಿಳೆ ಬೇಕರಿ ನಡೆಸುತ್ತಿದ್ದಾರೋ..ಅಥವಾ ತಾವು ತಿನ್ನುವ ಬ್ರೆಡ್​​ನ್ನು ಮೂತ್ರ ಹಾಕಿ ಬೇಯಿಸಿಕೊಳ್ಳುತ್ತಿದ್ದಾರೋ ಎಂದು ಸ್ಪಷ್ಟವಾಗಿಲ್ಲ.(ಏಜೆನ್ಸೀಸ್​)
ಅಗಸದಲ್ಲಿ ಸಂಭವಿಸಿದೆ ವಿಸ್ಮಯ- ದೈತ್ಯ ನಕ್ಷತ್ರದ ಹಿಂದೆ ವಿಜ್ಞಾನಿಗಳ ದಂಡು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 5 =
Remember me
