ಪುಣೆ:ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಗುಂಪೊಂದು ಮಚ್ಚಿನಿಂದ ಹಲ್ಲೆ ನಡೆಸಿ ವಿಕೃತಿ ಮೆರೆಯುತ್ತಿರುವ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಇನ್ನು ಇದೇ ರೀರಿಯ ಘಟನೆಯೊಂದು ಪುಣೆಯ ಪಿಂಪ್ರಿ-ಚಿಂಚವಾಡದಲ್ಲಿ ಘಟನೆ ನಡೆದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ 5-6 ಜನರ ಗುಂಪೊಂದು ಮೆಡಿಕಲ್​ ಸ್ಟೋರ್​ಗೆ ನುಗ್ಗಿ ಅಲ್ಲಿದ್ದ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ಮಾಡಲು ಆರಂಭಿಸುತ್ತಾರೆ.
महाराष्ट्र के पुणे और पिंपरी-चिंचवाड़ शहर में कोयता गैंग का आतंकताज़ा घटना पिंपरी-चिंचवाड़ के एक मेडिकल स्टोर का है जहां हाथों में कोयता लिए बदमाश स्टोर में घुसते है और स्टोर स्टाफ पर कोयता से जानलेवा हमला करते है..घटना 29 अप्रैल देर रात 2 बजे की है@indiatvnewspic.twitter.com/b3Tsk198tA
ಇದನ್ನೂ ಓದಿ:ಇವರ ಮನೆ ಹಾಳಾಗಿ ಹೋಗ; ಬಿಜೆಪಿಯನ್ನು ಶಪಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಇದೇ ವೇಳೆ ಮೆಡಿಕಲ್​ ಸ್ಟೋರ್​ನ ಮತ್ತೊಬ್ಬ ಸಿಬ್ಬಂದಿ ಮಧ್ಯ ಪ್ರವೇಶಿಸಲು ಯತ್ನಿಸುತ್ತಾರೆ. ಆದರೆ, ಅವರಿಗೆ ಬೆದರಿಕೆ ಹಾಕುವ ದುಷ್ಕರ್ಮಿಗಳು ನಂತರ ಅಂಗಡಿಯಲ್ಲಿರುವ ಸಾಮಾನುಗಳನ್ನು ಹೊಡೆದು ಹಾಕುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ದುಷ್ಕರ್ಮಿಗಳು ಮೆಡಿಕಲ್​ ಸ್ಟೋರ್​ನಲ್ಲಿ ದಾಂಧಲೆ ನಡೆಸುವ ಮೊದಲು ಕಾಮ್​ಘರ್​ ನಗರ ಪ್ರದೇಶದಲ್ಲಿ ಗಾಡಿಗಳನ್ನು ಧ್ವಂಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಈ ರೀತಿಯ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಈ ರೀತಿ ಮಾಡುವವರನ್ನು ಕೊಯ್ತಾ ಗ್ಯಾಂಗ್​ ಎಂದು ಕರೆಯಲಾಗುತ್ತದೆ. ಇವರು ಮಚ್ಚಿನಿಂದ ದಾಂಧಲೆ ಮಾಡಿ ಹಲ್ಲೆ ನಡೆಸುತ್ತಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + six =
Remember me
