ಇಂಫಾಲ್​:ಮಣಿಪುರದಿಂದ 110 ಕಿಮೀ ದೂರದಲ್ಲಿರುವ ಗಡಿ ನಗರ ಮೊರೆಹ್‌ನಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು ಈ ಘಟನೆಯಲ್ಲಿ ಪೊಲೀಸ್ ಕಮಾಂಡೋ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಅತಿ ಭಯಂಕರ ವೈರಸ್ ಮೇಲೆ ಚೀನಾ ಪ್ರಯೋಗ: ಇದು ಕೋವಿಡ್​-19ಗಿಂತ ಸ್ಟ್ರಾಂಗ್​, ಸಾವಿನ ಪ್ರಮಾಣ ಶೇ.100..!
ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಪ್ರಮುಖ ವ್ಯಾಪಾರ ನಗರವಾದ ಮೊರೆಹ್​ ನಲ್ಲಿ ಬುಧವಾರ ಬೆಳಗ್ಗೆಯಿಂದಲೇ ಗುಂಡಿನ ಚಕಮಕಿ ಶುರುವಾಗಿದೆ. ದಾಳಿಕೋರರು ಮೋರೆ ಬಳಿಯ ಭದ್ರತಾ ಪೋಸ್ಟ್‌ಗೆ ಬಾಂಬ್‌ಗಳನ್ನು ಎಸೆದಿರುವುದು ಮತ್ತು ಗುಂಡು ಹಾರಿಸಿದರು ವರದಿಯಾಗಿದೆ.
ದಾಳಿಕೋರರು ತಾತ್ಕಾಲಿಕ ಕಮಾಂಡೋ ಪೋಸ್ಟ್‌ಗೆ ಆರ್‌ಪಿಜಿ ಶೆಲ್‌ಗಳನ್ನು ಎಸೆದಿದ್ದು ಸುತ್ತಮುತ್ತ ನಿಂತಿದ್ದ ಹಲವಾರು ವಾಹನಗಳಿಗೆ ಹಾನಿಗೊಳಗಾಗಿರುವುದಾಗಿ ತಿಳಿಸಿದೆ. ಮೊರೆಹ್​ ನಲ್ಲಿ ಸಾವನ್ನಪ್ಪಿರುವ ಕಮಾಂಡೋವನ್ನು ಐಆರ್‌ಬಿ ಸಿಬ್ಬಂದಿ ವಾಂಗ್‌ ಖೇಮ್ ಸೊಮೊರ್ಜಿತ್ ಎಂದು ಗುರುತಿಸಲಾಗಿದೆ. ಸೊಮೊರ್ಜಿತ್ ಇಂಫಾಲ್ ಪಶ್ಚಿಮ ಜಿಲ್ಲೆಯ ಮಾಲೋಮ್‌ ನವರು ಎಂದು ವರದಿಯಾಗಿದೆ.
ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದಿರುವ ಘಟನೆಯಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಇಬ್ಬರು ಬುಡಕಟ್ಟು ಜನಾಂಗದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ ನಂತರ ಕುಕಿ ಗುಂಪುಗಳ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು ಇದೀಗ ಹಿಂಸಾಚಾರಕ್ಕೆ ತಿರುಗಿರಬಹುದು ಎನ್ನಲಾಗಿದೆ.
ಶಸ್ತ್ರಸಜ್ಜಿತ ದಾಳಿಕೋರರು ಭದ್ರತಾ ಪಡೆಯ ಟ್ರಕ್​ ವಾಪಸ್​ ಕಳುಹಿಸಲು ಪ್ರಯತ್ನಿಸುತ್ತಿರುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಮಣಿಪುರ ಸರ್ಕಾರವು ಜನವರಿ 16 ರಂದು ಬೆಳಗ್ಗೆ 12 ರಿಂದ ಕರ್ಫ್ಯೂ ಜಾರಿಗೆ ವಿಧಿಸಿತ್ತು.
ಅಸ್ಸಾಂ ಪೊಲೀಸರು ಕುಕಿ ನಾಗರಿಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು ಮಣಿಪುರ ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.ಕಳೆದ ವರ್ಷ ಮಣಿಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಲಹ ಪೀಡಿತ ರಾಜ್ಯದಲ್ಲಿ ಭದ್ರತೆಯನ್ನು ಕಾಪಾಡಿಕೊಳ್ಳಲು ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ಹೇಳಿದ್ದರು. ಮಣಿಪುರದಲ್ಲಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಮೊರೆಯಲ್ಲಿ ಪೊಲೀಸ್ ಅಧಿಕಾರಿಯನ್ನು ಕೊಂದ ಇಬ್ಬರು ಶಂಕಿತರನ್ನು ಬಂಧಿಸಿದ ಎರಡು ದಿನಗಳ ನಂತರ ಹಿಂಸಾಚಾರ ನಡೆದಿದೆ.
ವಿಶ್ವ ಚೆಸ್​ ಚಾಂಪಿಯನ್ ಡಿಂಗ್ ಲಿರೇನ್ ಮಣಿಸಿ ನಂ.1 ಸ್ಥಾನಕ್ಕೇರಿದ ‘ಪ್ರಜ್ಞಾನಂದ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
