ಪಾಲ್ಘರ್:ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಮೇಲೆ ಒಂದು ದಿನ ಅಚಾನಕ್ಕಾಗಿ ಅದೇ ವ್ಯಕ್ತಿಯಿಂದ ವಿಡಿಯೋ ಕಾಲ್​ ಬಂದರೆ ಹೇಗಾಗಬಹುದು?!
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 60 ವರ್ಷದ ಆಟೋ-ರಿಕ್ಷಾ ಚಾಲಕ ಮೃತಪಟ್ಟಿದ್ದು ಆತನ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಅವರು ಜೀವಂತವಾಗಿ ಪಾಲ್ಘರ್​ನಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದರು.
ರಿಕ್ಷಾ ಚಾಲಕ, ಭಾನುವಾರ ಪಾಲ್ಘರ್‌ನ ನಿರ್ಗತಿಕರ ಆಶ್ರಯ ತಾಣದಲ್ಲಿ ತಂಗಿರುವುದು ಕಂಡುಬಂದಿದ್ದು ಆತ ತನ್ನ ಸ್ನೇಹಿತನೊಂದಿಗೆ ಮಾಡಿದ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕುಟುಂಬದವರು ಸಮಾಧಿ ಮಾಡಿರುವ ಶವವನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 29 ರಂದು ಬೋಯ್ಸರ್ ಮತ್ತು ಪಾಲ್ಘರ್ ನಿಲ್ದಾಣಗಳ ನಡುವೆ ಹಳಿ ದಾಟುವಾಗ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದ. ಪಾಲ್ಘರ್‌ನಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ವ್ಯಕ್ತಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ.
ಪಾಲ್ಘರ್‌ನ ವ್ಯಕ್ತಿಯೊಬ್ಬರು ಜಿಆರ್‌ಪಿಯನ್ನು ಸಂಪರ್ಕಿಸಿದ್ದು ಆ ಮೃತ ವ್ಯಕ್ತಿ ತನ್ನ ಸಹೋದರ ರಫೀಕ್ ಶೇಖ್ ಎಂದು ಹೇಳಿಕೊಂಡಿದ್ದರು. ಅವರು ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದು ಇದಕ್ಕಾಗಿ ಕುಟುಂಬವು ಪೊಲೀಸ್ ದೂರು ಕೂಡ ದಾಖಲಿಸಿದೆ ಎಂದು ಜಿಆರ್‌ಪಿ ಇನ್‌ಸ್ಪೆಕ್ಟರ್ ನರೇಶ್ ರಣಧೀರ್ ಹೇಳಿದ್ದಾರೆ.
ಇದಾದ ತಕ್ಷಣ, ಪಾಲ್ಘರ್ GRP ತಂಡ, ಕೇರಳದಲ್ಲಿದ್ದ “ಮೃತ” ವ್ಯಕ್ತಿಯ ಹೆಂಡತಿಯನ್ನು ಸಂಪರ್ಕಿಸಿತು. ಆಕೆ ಕೂಡ ಪಾಲ್ಘರ್‌ಗೆ ಬಂದು ಶವವನ್ನು ಗುರುತಿಸಿದ ನಂತರ ಅದನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿ ಹೇಳಿದರು.
ಕೆಲವು ದಿನಗಳ ಹಿಂದಷ್ಟೇ ಶವವನ್ನು ಕುಟುಂಬಸ್ಥರು ಸಮಾಧಿ ಮಾಡಿದ್ದರು. ಭಾನುವಾರ, ಶೇಖ್‌ನ ಸ್ನೇಹಿತರೊಬ್ಬರು ಆಕಸ್ಮಿಕವಾಗಿ ಶೇಖ್​ ಫೋನ್‌ಗೆ ಕರೆ ಮಾಡಿದಾಗ ಆಕಸ್ಮಿಕವಾಗಿ ಆ ಬದಿಯಿಂದ ಪ್ರತಿಕ್ರಿಯೆ ಬಂದಿದೆ. ಇದಾದ ಬಳಿಕ ಇಬ್ಬರೂ ವಿಡಿಯೋ ಚಾಟ್ ಮಾಡಿದ್ದು, ಶೇಖ್ ಅವರು ತಮ್ಮ ಸ್ನೇಹಿತರಿಗೆ ಅವರು ಚೆನ್ನಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಚಾಟ್ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಚಾಲಕನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಅವರು ಶೇಖ್ ಅವರನ್ನು ಸಂಪರ್ಕಿಸಿದರು ಮತ್ತು ಬೆಳವಣಿಗೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಅಧಿಕಾರಿ ಹೇಳಿದರು.
ಪೊಲೀಸ್ ಅಧಿಕಾರಿಯ ಪ್ರಕಾರ, ಶೇಖ್ ಒಂದೆರಡು ತಿಂಗಳ ಹಿಂದೆ ತನ್ನ ಮನೆಯನ್ನು ತೊರೆದು ಪಾಲ್ಘರ್‌ನ ಸಫಲಾದಲ್ಲಿರುವ ನಿರ್ಗತಿಕರ ಮನೆಗೆ ಬಂದಿದ್ದರು. “ಈಗ, ಸಮಾಧಿ ಮಾಡಲಾದ ಅಪರಿಚಿತ ಮೃತ ವ್ಯಕ್ತಿಯ ಕುಟುಂಬವನ್ನು ಪತ್ತೆಹಚ್ಚುವುದು ನಮ್ಮ ಕಾರ್ಯವಾಗಿದೆ” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 13 =
Remember me
