ಕಳವೂರ್​​:ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದು ರಸ್ತೆಯುದ್ದಕ್ಕೂ ಎಳೆದೊಯ್ದ ಪರಿಣಾಮ 15 ವರ್ಷದ ಬಾಲಕಿಯೊಬ್ಬಳು ಸ್ನೇಹಿತೆಯ ಕಣ್ಣೆದುರೇ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಕಮಲಪುರಂನಲ್ಲಿ ಶನಿವಾರದ ಮಧ್ಯಾಹ್ನ 2.15ಕ್ಕೆ ನಡೆದಿದೆ.
ಮೃತರನ್ನು ಮನ್ನಂಚೇರಿ ಮೂಲದ ಸಫ್ನಾ ಸಿಯಾದ್ ಎಂದು ಗುರುತಿಸಲಾಗಿದೆ. ಕಳವೂರ್​ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಳು. ಖಾಸಗಿ ಬಸ್​ ಇಳಿದು ಸಫ್ನಾ ರಸ್ತೆ ದಾಟುತ್ತಿದ್ದಾಗ ಕೆಎಸ್​​ಆರ್​ಟಿಸಿ ಬಸ್​ ಆಕೆಗೆ ಡಿಕ್ಕಿ ಹೊಡೆದು ಸುಮಾರು 10 ಮೀಟರ್​ ದೂರ ಎಳೆದೊಯ್ಯಿತು. ಪರಿಣಾಮ ಸಫ್ನಾ ಸ್ಥಳದಲ್ಲೇ ಮೃತಪಟ್ಟಳು.
ಪ್ರತ್ಯಕ್ಷದರ್ಶಿಗಳ ಪ್ರಕಾರ ಬಸ್​ನ ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಬಸ್‌ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಸಫ್ನಾ ಆಗಲೇ ರಸ್ತೆ ದಾಟಿದ್ದಳು ಎಂದು ಹೇಳಿದ್ದಾರೆ. ಸಫ್ನಾಳ ಸ್ನೇಹಿತೆ ಅವನಿ ಈ ದುರ್ಘಟನೆಗೆ ಸಾಕ್ಷಿಯಾಗಿದ್ದಾಳೆ. ಬಸ್ ಸಫ್ನಾ ಬಳಿ ಬರುತ್ತಿರುವುದನ್ನು ಕಂಡು ಅವನಿ ಬಸ್ ನಿಲ್ಲಿಸುವಂತೆ ಕಿರುಚಿದಳು. ಆದಾಗ್ಯೂ, ಅವಳ ಎಲ್ಲ ಪ್ರಯತ್ನಗಳು ವ್ಯರ್ಥವಾಯಿತು.
ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ನೌಶಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ ವೈಕೋಮ್​ನಿಂದ ಅಲಪ್ಪುಳಕ್ಕೆ ತೆರಳುತ್ತಿತ್ತು.
ಮೃತ ಸಫ್ನಾ ದಂಪತಿ ಸಿಯಾದ್ ಮತ್ತು ಸಫೀಲಾ ಅವರ ಪುತ್ರಿ. ಭಾನುವಾರ ಮಧ್ಯಾಹ್ನ ಮನ್ನಂಚೇರಿ ಜುಮಾ ಮಸೀದಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.(ಏಜೆನ್ಸೀಸ್​)
ನೇಪಾಳ ವಿಮಾನ ಪತನ: ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಯಂತ್ರಣ ತಪ್ಪಿದ ವಿಡಿಯೋ ವೈರಲ್​

ಸಂಕ್ರಾಂತಿಗೆ ಲಕ್ಷುರಿ ಕಾರುಗಳ ಉಡುಗೊರೆ! ಉದ್ಯೋಗಿಗಳಿಗೆ ಬಂಪರ್​ ಬೋನಸ್​ ಕೊಟ್ಟ ಹೈದರಾಬಾದ್​ ಕಂಪನಿ

ನರೇಶ್​-ಪವಿತ್ರಾ ಲೋಕೇಶ್​ ಮದುವೆ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಟಾಲಿವುಡ್​ನ ಹಿರಿಯ ನಿರ್ಮಾಪಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 11 =
Remember me
