ನವದೆಹಲಿ:ಹಾಲಿವುಡ್​ನ ಪ್ರಸಿದ್ಧ ಕಾಮಿಡಿ ಶೋ “ಫ್ರೆಂಡ್ಸ್​”ನಲ್ಲಿ ತನ್ನ ಚಾಂಡ್ಲರ್ ಬಿಂಗ್ ಪಾತ್ರದಿಂದಲೇ ಮನೆ ಮಾತಾಗಿದ್ದ ನಟ ಮ್ಯಾಥ್ಯೂ ಪೆರ್ರಿ 54ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ಮನರಂಜನಾ ಯುಗಕ್ಕೆ ಇದೊಂದು ತುಂಬಲಾರದ ನಷ್ಟವಾಗಿದೆ.
ಲಾಸ್​ ಏಂಜಲೀಸ್​ನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಸಾವಿಗೀಡಾಗಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ ಮನೆಯ ಬಾತ್​ಟಬ್​ನಲ್ಲಿ ಪೆರ್ರಿ ಶವ ಪತ್ತಯಾಗಿದ್ದು, ಸ್ಥಳದಲ್ಲಿ ಯಾವುದೇ ಡ್ರಗ್ಸ್ ಕಂಡುಬಂದಿಲ್ಲ. ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ನಂಬಲಾಗಿದೆ. ಪೆರ್ರಿಯ ಸಾವಿನಲ್ಲಿ ಅನುಮಾನ ಬರುವಂತಹ ಯಾವುದೇ ಘಟನೆ ನಡೆದಿರುವುದಕ್ಕೆ ಪುರಾವೆಗಳು ಸಿಕ್ಕಿಲ್ಲ. ಆದರೆ, ಕಾರ್ಡಿಯಕ್​ ಅರೆಸ್ಟ್​ನಿಂದ ಸಾವಿಗೀಡಾಗಿರಬಹುದು ಎಂದು ನಂಬಲಾಗಿದೆ.
1969ರ ಆಗಸ್ಟ್ 19ರಂದು ಮ್ಯಾಸಚೂಸೆಟ್ಸ್‌ನ ವಿಲಿಯಮ್‌ಸ್ಟೌನ್‌ನ ರಮಣೀಯ ಪಟ್ಟಣದಲ್ಲಿ ಮ್ಯಾಥ್ಯೂ ಪೆರ್ರಿ ಜನಿಸಿದರು. ಅವರ ಇಡೀದ ಜೀವನ ಪ್ರಯಾಣವು ಯಶಸ್ಸು ಮತ್ತು ಹೋರಾಟಗಳಿಂದ ಗುರುತಿಸಲ್ಪಟ್ಟಿದ್ದು, ಅನೇಕರಿಗೆ ಸ್ಫೂರ್ತಿಯಾಗಿದ್ದರು. ಪೆರ್ರಿ ಅವರು ಹದಿಹರೆಯದವನಾಗಿದ್ದಾಗ, ತನ್ನ ಕನಸುಗಳ ಬೆನ್ನೇರಿ ಲಾಸ್ ಏಂಜಲೀಸ್‌ಗೆ ಬಂದರು. ಬಳಿಕ ದೂರದರ್ಶನದಲ್ಲಿ ಕೆಲವು ಅತಿಥಿ ಪಾತ್ರಗಳನ್ನು ಪಡೆದುಕೊಂಡ ನಂತರ, 1987 ರಿಂದ 1988 ರವರೆಗೆ ‘ಬಾಯ್ಸ್ ವಿಲ್ ಬಿ ಬಾಯ್ಸ್’ ನಲ್ಲಿ ಚಾಝ್ ರಸ್ಸೆಲ್ ಆಗಿ ನಟಿಸಿದರು. ‘ಗ್ರೋಯಿಂಗ್ ಪೇನ್ಸ್’ ಮತ್ತು ‘ಸಿಡ್ನಿ’ ಯಲ್ಲಿನ ತಮ್ಮ ಪಾತ್ರಗಳಿಂದ 1994ರಲ್ಲಿ ಪ್ರಸಾರವಾದ ‘ಫ್ರೆಂಡ್ಸ್’ ಕಾಮಿಡಿ ಶೋನಲ್ಲಿ ಅವಕಾಶ ದೊರೆಯಿತು. ಅಲ್ಲಿಂದಾಚೆಗೆ ಪೆರ್ರಿ ಅದೃಷ್ಟವೇ ಬದಲಾಯಿತು.
ಪೆರ್ರಿ ಅವರ ಗಮನಾರ್ಹ ವೃತ್ತಿಪರ ಸಾಧನೆಗಳ ನಡುವೆ ವೈಯಕ್ತಿಕ ರಾಕ್ಷಸರೊಂದಿಗೆ ಅಂದರೆ, ಕೆಟ್ಟ ವ್ಯಸನದೊಂದಿಗೆ ದೀರ್ಘಕಾಲ ಸೆಣಸಾಡಿದರು. 1997ರಲ್ಲಿ ಮತ್ತು 2001 ರಲ್ಲಿ ಮಾದಕ ವ್ಯಸನಕ್ಕಾಗಿ ಚಿಕಿತ್ಸೆ ಪಡೆದರು. 2016 ರಲ್ಲಿ ಬ್ರಿಟನ್‌ನ BBC ರೇಡಿಯೊ 2 ಗೆ ನೀಡಿದ ಪ್ರಾಮಾಣಿಕ ಸಂದರ್ಶನದಲ್ಲಿ, ಪೆರ್ರಿ ಅವರು ‘ಫ್ರೆಂಡ್ಸ್’ ಶೋನ 3 ರಿಂದ 6 ರ ಚಿತ್ರೀಕರಣದ ಸೀಸನ್‌ಗಳನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಬಹಿರಂಗಪಡಿಸಿದರು. 2013ರ ಪೀಪಲ್ ಕವರ್ ಸ್ಟೋರಿಯಲ್ಲಿ, ನಟನು ಆಲ್ಕೋಹಾಲ್ ಮತ್ತು ವಿಕೋಡಿನ್ ವ್ಯಸನವನ್ನು ಒಪ್ಪಿಕೊಂಡಿದ್ದರು.(ಏಜೆನ್ಸೀಸ್​)
6 ದಶಕಗಳಿಂದ ಮುಂಬೈ ಜನರ ಜೀವನಾಡಿಯಾಗಿದ್ದ ಪ್ರೀಮಿಯರ್​ ಪದ್ಮಿನಿ ಟ್ಯಾಕ್ಸಿಗಳ ಯುಗಾಂತ್ಯ: ಸಂರಕ್ಷಣೆಗೆ ಒತ್ತಾಯ

VIDEO | 2 ಕೋಟಿ ರೂ. ಬೆಲೆ ಫ್ಲಾಟ್​​ ಖರೀದಿಗೆ ರಾತ್ರಿ 8 ತಾಸು ರಸ್ತೇಲಿ ಸರತಿ ಸಾಲಿನಲ್ಲಿ ನಿಂತ ಜನ!

ಸಿದ್ದಾರ್ಥ್​, ಅದಿತಿ ರಾವ್​ ಹೈದರಿ ಜತೆಗಿನ ಲವ್​ ಅಧಿಕೃತ; ಬೇಗ ಮದುವೆ ಅಗಿ ಎಂದ ಫ್ಯಾನ್ಸ್​​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:2 + 9 =
Remember me
