ಚೆನ್ನೈ:ಪೆಟ್ರೋಲ್​, ಡೀಸೆಲ್​ ಮತ್ತು ಅಡುಗೆ ಅನಿಲದ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಸಾಕಷ್ಟು ಜನರು ರಸ್ತೆಗಿಳಿದು ಪ್ರತಿಭಟನೆ ಮಾಡಲಾರಂಭಿಸಿದ್ದಾರೆ. ಇಲ್ಲೊಂದು ಮದುವೆಯಲ್ಲಿಯೂ ಈ ಪೆಟ್ರೋಲ್​ ಡೀಸೆಲ್​ ಸುದ್ದಿಯಾಗಿದೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಮದುವೆಯಲ್ಲಿ ಪೆಟ್ರೋಲ್​ ಮತ್ತು ಗ್ಯಾಸ್​ ಸಿಲಿಂಡರ್​ ಮುಖ್ಯ ಆಕರ್ಷಣೆಯಾಗಿತ್ತು. ಮದುವೆಗೆ ಬಂದಿದ್ದ ಸ್ನೇಹಿತರು, ಬಂಧುಗಳೆಲ್ಲರೂ ತರ ತರದ ಉಡುಗೊರೆಗಳನ್ನು ದಂಪತಿಗೆ ನೀಡಿದ್ದಾರೆ. ಅದರಲ್ಲಿ ಒಂದು ಸ್ನೇಹಿತರ ತಂಡ ಮಾತ್ರ ವಿಶೇಷವಾದ ಉಡುಗೊರೆ ಕೊಟ್ಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಲಾರಂಭಿಸಿದೆ.
ವಧು ವರನ ಸ್ನೇಹಿತರ ತಂಡವೊಂದು ನವ ದಂಪತಿಗೆ ಗ್ಯಾಸ್​ ಸಿಲಿಂಡರ್​ ಹಾಗೂ ಪೆಟ್ರೋಲ್​ ಕ್ಯಾನ್​ ಗಿಫ್ಟ್​ ನೀಡಿದೆ. ಈರುಳ್ಳಿಯಿಂದ ಮಾಡಲಾಗಿದ್ದ ಹಾರವನ್ನೂ ದಂಪತಿಗೆ ಹಾಕಿಸಲಾಗಿದೆ. ದಂಪತಿಗೆ ಈ ವಿಶೇಷ ಗಿಫ್ಟ್ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ. (ಏಜೆನ್ಸೀಸ್​)
ಅದ್ಧೂರಿ ಮದುವೆಯಲ್ಲಿ ಪೆಟ್ರೋಲ್​, ಗ್ಯಾಸ್​ ಸಿಲಿಂಡರ್​ ಗಿಫ್ಟ್​!
ಪೆಟ್ರೋಲ್​, ಡೀಸೆಲ್​ ಮತ್ತು ಗ್ಯಾಸ್​ ಸಿಲಿಂಡರ್​ ದರ ಗಗನಕ್ಕೇರುತ್ತಿರುವ ಬೆನ್ನಲ್ಲೇ ತಮಿಳುನಾಡಿನ ಮದುವೆಯೊಂದರಲ್ಲಿ ವಧು-ವರನ ಸ್ನೇಹಿತರು ಪೆಟ್ರೋಲ್​ ಮತ್ತು ಗ್ಯಾಸ್​ ಸಿಲಿಂಡರ್​ ಗಿಫ್ಟ್​ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ…pic.twitter.com/9z4xH8op2G
— Vijayavani (@VVani4U)February 21, 2021

ಸೆಕ್ಸ್​ಗೆ ಒತ್ತಾಯಿಸಿದ ಗಂಡನನ್ನು ವಿಷವಿಟ್ಟು ಕೊಂದ ಹೆಂಡತಿ!

ಪೆಟ್ರೋಲ್ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ ಮಾಯಾವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
