ಚಿಕಾಗೊ:ವಿವಿಧ ಸಂದರ್ಭದಲ್ಲಿ ಮಹಿಳೆಯರು ಪುರುಷರ ಬಟ್ಟೆ ಧರಿಸುವುದು, ಪುರುಷರು ಮಹಿಳೆಯರ ಬಟ್ಟೆ ಧರಿಸಿ ರ‍್ಯಾಂಪ್ ವಾಕ್ ಮಾಡುವುದನ್ನು ಹಲವು ಬಾರಿ ನೋಡಿದ್ದೇವೆ ಮತ್ತು ಕೇಳಿದ್ದೇವೆ. ಇದೀಗ ಚಿಕಾಗೋ ನಗರದಲ್ಲಿ ಇಬ್ಬರು ಪುರಷರು ಸೀರೆಯುಟ್ಟು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇವರಿಬ್ಬರ ವೇಷಭೂಷಣ ನೋಡಿ, ಮದುವೆಗೆ ಬಂದಿದ್ದ ಜನರು ಆಶ್ಚರ್ಯಕ್ಕೊಳಗಾಗಿದ್ದಾರೆ.
ಮದುವೆ ಗಂಡು-ಹೆಣ್ಣಿನ ಸ್ನೇಹಿತರು ವಿಭಿನ್ನ ಗೆಟಪ್​ನಲ್ಲಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಎಲ್ಲಾ ಸ್ನೇಹಿತರು ಒಂದೇ ಬಣ್ಣದ ಬಟ್ಟೆ ಧರಿಸಿ, ಸ್ನೇಹಿತರ ಮದುವೆಯಲ್ಲಿ ಮಿಂಚುತ್ತಾರೆ. ಈ ಮೂಲಕ ಮದುವೆಗೆ ಆಗಮಿಸಿದವರಿಗೆ, ನಾವೆಲ್ಲಾ ಗಂಡು-ಹೆಣ್ಣಿನ ಸ್ನೇಹಿತರು ಎಂಬುವುದನ್ನು ಸುಲಭವಾಗಿ ಅರ್ಥ ಮಾಡಿಸುತ್ತಾರೆ.
ಇದೀಗ ಚಿಕಾಗೋ ನಗರದಲ್ಲಿ ಭಾರತೀಯ ಮೂಲದ ಜೋಡಿಗಳ ಅದ್ಧೂರಿ ವಿವಾಹ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮಕ್ಕೆ ಮದುವೆ ಗಂಡಿನ ವಿದೇಶಿ ಸ್ನೇಹಿತರಿಬ್ಬರು ವಿಭಿನ್ನವಾಗಿ ಬರುವ ಮೂಲಕ ಸರ್​​ಪ್ರೈಸ್​ ನೀಡಿದ್ದಾರೆ. ಸ್ನೇಹಿತರ ಅವತಾರ ನೋಡಿದ ಮದುವೆ ಹುಡುಗ ಬಿದ್ದೂ ಬಿದ್ದೂ ನಕ್ಕಿದ್ದಾನೆ.
A post shared by Chicago Wedding Videographers (@paraagonfilms)

ಜಿಲ್ಲಾಧಿಕಾರಿ ಮುಂದೆ ಕಾಂತಾರ ಗೆಟಪ್​ನಲ್ಲಿ ತಹಸೀಲ್ದಾರ್ ಪ್ರತ್ಯಕ್ಷ!

ಅಷ್ಟಕ್ಕೂ ಸ್ನೇಹಿತರಿಬ್ಬರು ಮದುವೆಗೆ ಬಂದದ್ದು, ಮಹಿಳೆಯರಂತೆ ಸೀರೆಯುಟ್ಟು. ಝರಿ ಸೀರೆಯುಟ್ಟು ಮಿಚಿಗನ್ ಅವೆನ್ಯೂ ನಗರದಿಂದ, ಚಿಕಾಗೋ ನಗರಕ್ಕೆ ನಡೆದುಕೊಂಡು ಬಂದಿದ್ದಾರೆ. ಸ್ನೇಹಿತರಿಬ್ಬರು ಗೆಳೆಯನ ಮದುವೆಗೆ ಸೀರೆಯುಟ್ಟು ಬರುತ್ತಿರುವ ವಿಡಿಯೋ ಇನ್ಸ್​ಟಾಗ್ರಾಂನಲ್ಲಿ ಅಪ್ಲೋಡ್ ಆಗಿದೆ. ಇದನ್ನು ನೋಡಿದ ಅನೇಕರು ವಿಧವಿಧವಾದ ಕಮೆಂಟ್ ಮಾಡುತ್ತಿದ್ದಾರೆ. ಗೆಳೆಯನ ಮದುವೆಗೆ ಸೀರೆಯುಟ್ಟು ಬಂದಿರುವುದು ನಿಜಕ್ಕೂ ಸರ್​​ಪ್ರೈಸ್​ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ನಿಮ್ಮ ಕ್ರಿಯೇಟಿವಿಟಿಗೆ ಮೆಚ್ಚುಗೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ ಜನರು. ಈಗಾಗಲೇ ಈ ವಿಡಿಯೋವನ್ನು 28 ಸಾವಿರ ಜನರು ವೀಕ್ಷಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 19 =
Remember me
