ವಿಜಯವಾಡ:ಚಳಿಗಾಲದಲ್ಲಿ ಬಿಸಿ ಬಿಸಿ ಈರುಳ್ಳಿ ಪಕೋಡಾ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಕೊಟ್ಟರೆ ಸಾಕು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಇದೇ ರೀತಿ ಆಂಧ್ರ ಪ್ರದೇಶದ ಚಿತ್ತೂರಿನ ವ್ಯಕ್ತಿಯೊಬ್ಬ ತನ್ನ ಮನೆಗೆ ಪಕೋಡಾ ತೆಗೆದುಕೊಂಡು ಹೋಗಿ ಕುಟುಂಬದೊಂದಿಗೆ ಚಪ್ಪರಿಸುವಾಗ ಆಘಾತವೊಂದು ಕಾದಿತ್ತು. ಅದು ಏನೆಂದು ತಿಳಿಯಲು ಮುಂದೆ ಓದಿ…

ಅಂದಹಾಗೆ ಈ ಘಟನೆ ನಡೆದಿದ್ದು, ಜ. 4 ಸೋಮವಾರದಂದು. ಅಂದು ಸಂಜೆ ನಾಲ್ಕು ಗಂಟೆಗೆ ರಾಜೀವ್​ ಎಂಬಾತ ತಮ್ಮ ಕಾಲನಿಯಲ್ಲಿ ಪಕೋಡಾ ಮತ್ತು ಬಜ್ಜಿ ಮಾರಾಟ ಮಾಡುವ ಅಂಗಡಿಗೆ ತೆರಳಿದ್ದಾನೆ. ಬಳಿಕ ಪಕೋಡಾ ಪಾರ್ಸೆಲ್​ ಮಾಡಸಿಕೊಂಡು ಮನೆಗೆ ತಂದಿದ್ದಾನೆ.
ಇದನ್ನೂ ಓದಿರಿ:ಮೂರು ಮಕ್ಕಳ ತಂದೆಯ ಪ್ರೀತಿಗೆ ಬಿದ್ದು ಮದುವೆಯಾಗಲಾರದೇ ತೊಳಲಾಡುತ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ
ಬಳಿಕ ಪಾರ್ಸೆಲ್​ ಬಿಚ್ಚಿ ಕುಟುಂಬದವರ ಜತೆ ಸೇರಿಕೊಂಡು ಒಂದೊಂದೆ ಪಕೋಡಾವನ್ನು ಬಾಯಿಗೆ ಇಡುವಾಗ ವಿಶೇಷವಾಗಿ ಒಂದು ಪಕೋಡಾ ಮಾತ್ರ ತುಂಬಾ ಮೃದು ಎನಿಸಿದೆ. ಅನುಮಾನ ಬಂದು ನೋಡಿದಾಗ ಅದು ಪಕೋಡಾವಲ್ಲ, ಬದಲಾಗಿ ಕಪ್ಪೆ ಎಂಬುದು ತಿಳಿದಿದೆ. ತಕ್ಷಣ ಗಾಬರಿಯಾಗಿದೆ. ಬಳಿಕ ಕೋಪದಿಂದಲೇ ಅಂಗಡಿಯತ್ತ ರಾಜೀವ್​ ಹೆಜ್ಜೆ ಹಾಕಿದ್ದಾನೆ.

ನೇರವಾಗಿ ಅಂಗಡಿಗೆ ಹೋದ ರಾಜೀವ್​ ಜಗಳಕ್ಕೆ ಇಳಿದಿದ್ದಾನೆ. ಇದೇ ರೀತಿಯ ಪಕೋಡಾನಾ ನೀನು ಎಲ್ಲರಿಗೂ ಕೊಡುವುದು? ಇಲ್ಲಿ ನೋಡು ಏನಾಗಿದೆ.. ಹೀಗೆ ಮಾಡಿದರೆ ನಿನ್ನ ಅಂಗಡಿಗೆ ಯಾರು ಬರುತ್ತಾರೆ? ಅಂತ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾನೆ. ಇತ್ತ ರಾಜೀವ್​ನನ್ನು ಪೆಚ್ಚು ಮೊರೆಯಿಂದ ನೋಡುತ್ತಿದ್ದ ಅಂಗಡಿಯವನು ಏನೋ ಗೊತ್ತಿಲ್ಲದೆ ಆಗಿದೆ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆಂದು ಭರವಸೆ ನೀಡಿ ಕಳುಹಿಸಿದ್ದಾನೆ.
ಇದನ್ನೂ ಓದಿರಿ:1.5 ಕೋಟಿ ರೂ.ಗೆ ವಿವಾಹಿತ ಬಾಯ್​ಫ್ರೆಂಡ್​ ಖರೀದಿಸಿದ ಮಹಿಳೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ರಾಜೀವ್​, ನಾನು ತಿನ್ನಲೆಂದು ಪಕೋಡಾ ತೆಗೆದುಕೊಂಡೆ. ಬಳಿಕ ಮನೆಗೆ ತೆರಳಿ ತಿನ್ನುವಾಗ ಪಕೋಡಾದಲ್ಲಿ ಕಪ್ಪೆ ಕಾಣಿಸಿಕೊಂಡಿತು. ಆದರೆ, ನಮ್ಮ ಕುಟುಂಬ ಮತ್ತು ನಾನು ಕೆಲವು ಪಕೋಡಾಗಳನ್ನು ಖಾಲಿ ಮಾಡಿದ್ದೆವು. ಯಾರಿಗೂ ಹಾನಿಯಾಗಿಲ್ಲ. ಆದರೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಪರಿಸ್ಥಿತಿ ಹದಗೆಡುತ್ತದೆ ಎಂದಿದ್ದಾರೆ.(ಏಜೆನ್ಸೀಸ್​)
ನೈಟ್​ ಶಿಫ್ಟ್​ ಎಂದು ಮನೆ ಬಿಡ್ತಿದ್ದ ಗಂಡನನ್ನು ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್: ನೊಂದು ಆತ್ಮಹತ್ಯೆಗೆ ಶರಣು! ​

ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್​ ನೋಡಿ ಪತ್ನಿಗೆ ಶಾಕ್!​

ಬಳಸಿದ ಕಾಂಡೋಮ್​ ಒಳಗೆ ವಿಲವಿಲ ಒದ್ದಾಡಿದ ವಿಷಕಾರಕ ಹಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
