ಉತ್ತರಪ್ರದೇಶ:ನಮ್ಮ ಪೂರ್ವಜರ ಕಾಲದಲ್ಲಿ ಬರಗಾಲ ಆವರಿಸಿದರೆ, ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಇದನ್ನು ಮೀರಿ ಸಹ ಮಳೆ ಕಾಣಿಸದೆ ಹೋದರೆ, ಕಪ್ಪೆಗಳಿಗೆ ಮದುವೆ ಮಾಡಿಸುವ ಮೂಲಕ ಮಳೆಗಾಗಿ ಕಾಯುವರು. ಸದ್ಯ ಈ ಸಂಪ್ರದಾಯ ಇದೀಗ ಮತ್ತೆ ಮರುಕಳಿಸಿದ್ದು, ಉತ್ತರಪ್ರದೇಶದ ವಾರಣಾಸಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಕೊಲೆ ಪ್ರಕರಣ ಸಿಬಿಐ ತನಿಖೆಗೊಪ್ಪಿಸಿ: ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ
ವಾರಣಾಸಿಯ ಸ್ಥಳೀಯರು ಶಾಸ್ತ್ರೋಕ್ತವಾಗಿ ಕಪ್ಪೆಗಳಿಗೆ ಮದುವೆ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಹಿಂದೂ ಅರ್ಚಕರೊಬ್ಬರು ಕಪ್ಪೆಗಳಿಗೆ ವಿವಾಹ ಮಾಡಿಸಿದ್ದು, ಗಂಡು-ಹೆಣ್ಣಿಗೆ ಹೇಗೆ ವಸ್ತ್ರ ತೊಡಿಸಿ, ಅಲಂಕಾರ ಮಾಡುತ್ತಾರೆಯೋ, ಈ ಮದುವೆಯನ್ನು ಕೂಡ ಹಾಗೆಯೇ ಮಾಡಿದ್ದಾರೆ.
A wedding like no other 🐸 Locals in Varanasi, UP arranged a “wedding” between a male and a female frog, in hopes of appeasing the rain gods and getting respite from the heat.
We can’t be sure if it works, but it makes for a whimsical tale for sure 🌧️☀️pic.twitter.com/GKDOipKp8a
— Khabar Lahariya (@KhabarLahariya)June 13, 2024

ಕೆಂಪು ವಸ್ತ್ರದಲ್ಲಿ ಮಿಂಚಿದ ಕಪ್ಪೆಗಳಿಗೆ ಪುಷ್ಪಗಳಿಂದ ಅರ್ಚನೆ ಮಾಡಲಾಯಿತು. ಮದುವೆಗೆ ಸ್ಥಳೀಯರು ವಾದ್ಯ ಮತ್ತು ಭಜನೆ ಕಾರ್ಯಕ್ರಮವನ್ನು ಕೂಡ ಏರ್ಪಡಿಸಿರುವುದು ವಿಶೇಷ. ಘಟನೆಯ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ,(ಏಜೆನ್ಸೀಸ್).
ಯಾರ ಪ್ರಭಾವಕ್ಕೂ ಮಣಿಯದೇ ‘ರೀಲ್​ ಹೀರೋ’​ಗೆ ಬಿಸಿ ಮುಟ್ಟಿಸಿದ್ದೇ ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ನೋಡಿ ‘ರಿಯಲ್’ ಹೀರೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 17 =
Remember me
