ನವದೆಹಲಿ:ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS​)ದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್​ ಮತ್ತು ಬಚ್​ ವಿಲ್ಮೋರ್ ಶೀಘ್ರದಲ್ಲೇ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿದೆ.
ಈ ಇಬ್ಬರೂ ಗಗನಯಾತ್ರಿಗಳು ಯಾವಾಗ ಭಾರತಕ್ಕೆ ಆಗಮಿಸುತ್ತಾರೆ ಎಂಬ ಬಗ್ಗೆ ನಾಸಾ ಅಪ್ಡೇಟ್ ನೀಡಿದ್ದು, ಇನ್ನೂ ಕೆಲವು ದಿನಗಳ ಕಾಲ ಅನಿಶ್ಚಿತತೆಯಲ್ಲಿಯೇ ಈ ಗಗನ ಯಾತ್ರಿಗಳು ಕಾಲಕಳೆಯಬೇಕಾಗುತ್ತದೆ ಎಂದು ತಿಳಿಸಿದೆ.
ಮುಂದಿನ ವರ್ಷ ಅಂದರೆ, 2025ರ ಫೆಬ್ರವರಿಯಲ್ಲಿ ಬೋಯಿಂಗ್​ ಸ್ಟಾರ್​ಲೈನರ್ (Boeing’s Starliner)​ ಬದಲಾಗಿ ಸ್ಪೇಸ್​ಎಕ್ಸ್​ ಕ್ರ್ಯೂ​ ಡ್ರ್ಯಾಗನ್ (SpaceX’s Crew Dragon) ಸ್ಪೇಸ್​ ಕ್ಯಾಪ್ಸುಲ್​ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ ಎಂದು ನಾಸಾ (NASA)ತಿಳಿಸಿದೆ. ಕಳೆದ ಜೂನ್​ 05ರಂದು ಬೋಯಿಂಗ್​ ಸ್ಟಾರ್​ಲೈನರ್​ ಕ್ಯಾಪ್ಸುಲ್​ ಮೂಲಕ ಇಬ್ಬರು ಗಗನಯಾತ್ರಿಗಳನ್ನು ಐಎಸ್​ಎಸ್​ಗೆ ಕಳುಹಿಸಲಾಯಿತು. ಇದು ಬೋಯಿಂಗ್​ ಸ್ಟಾರ್​ಲೈನರ್​ನ ಮೊದಲ ಸಿಬ್ಬಂದಿ ಕಾರ್ಯಾಚರಣೆಯಾಗಿದೆ.
ಈ ಕುರಿತು ಟ್ವೀಟ್​ ಮಾಡಿರುವ ನಾಸಾ ತಜ್ಞರಿಂದ ಪರಿಶೀಲಿಸಿದ ನಂತರ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಅಥವಾ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನೊಂದಿಗೆ ಸಿಬ್ಬಂದಿ ಹಿಂತಿರುಗುತ್ತಾರೆ. ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್​ ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
After extensive review by experts across the agency, NASA's@BoeingSpaceCrew Flight Test will return with an uncrewed#Starliner. Astronauts Butch Wilmore and Suni Williams are scheduled to return to Earth next spring aboard#Crew9:https://t.co/bfjenUU1Jfpic.twitter.com/c4NzZVJcvw
ಇದನ್ನೂ ಓದಿ:KSRTC ಬಸ್ ಟಿಕೆಟ್ ದರ ಹೆಚ್ಚಳ ಸುಳಿವು ನೀಡಿದ ಸಚಿವ ರಾಮಲಿಂಗಾ ರೆಡ್ಡಿ; ಬಿಜೆಪಿ ನಾಯಕರಿಗೆ ಹೇಳಿದ್ದಿಷ್ಟು
ಆರಂಭದಲ್ಲಿ ಗಗನಯಾತ್ರಿಗಳ ಕಾರ್ಯಾಚರಣೆ ಕೇವಲ 8 ದಿನಗಳವರೆಗೆ ಮಾತ್ರ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸ್ಟಾರ್​ಲೈನರ್​ನಲ್ಲಿರುವ ಪ್ರೊಪಲ್ಶನ್ ಸಿಸ್ಟಮ್​ನಲ್ಲಿನ ತೊಂದರೆಯ ಕಾರಣದಿಂದಾಗಿ ಕಾರ್ಯಾಚರಣೆ ಅವಧಿಯನ್ನು ವಿಸ್ತರಿಸಲಾಯಿತು. ಕ್ಯಾಪ್ಸುಲ್​ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಬಳಿಕ ಮೊದಲೇ ಪ್ಲಾನ್​ ಮಾಡಿದಂತೆ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವ ಬಾಹ್ಯಾಕಾಶ ನೌಕೆಯ ಸಾಮರ್ಥ್ಯದ ಬಗ್ಗೆ ಇದೀಗ ಕಳವಳವನ್ನು ಹೆಚ್ಚಿಸಿವೆ.
ಥಸ್ಟರ್​ ವಿಫಲ ಮತ್ತು ಹೀಲಿಯಂ ಸೋರಿಕೆಯಂತಹ ಸಮಸ್ಯೆಗಳನ್ನು ಒಳಗೊಂಡಂತೆ ಸದ್ಯಕ್ಕೆ ಕ್ಯಾಪ್ಸುಲ್​ನಲ್ಲಿ ಕಾಣಿಸಿಕೊಂಡಿರುವ ತೊಂದರೆಗಳನ್ನು ನಿವಾರಿಸಲು ಬೋಯಿಂಗ್​ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ. ಇತ್ತೀಚಿಗೆ ಬಂದ ಪರೀಕ್ಷೆಯ ಡೇಟಾ ಪ್ರಕಾರ ಕ್ಯಾಪ್ಸುಲ್​ನಲ್ಲಿನ ಥ್ರಸ್ಟರ್‌ಗಳ ಮಿತಿಮೀರಿದ ಶಾಖವು ಟೆಫ್ಲಾನ್ ಸೀಲ್‌ಗಳ ತಿರುಚಿಗೆ ಕಾರಣವಾಗಿದೆ ಮತ್ತು ಪ್ರೊಪೆಲ್ಲಂಟ್ ಹರಿವನ್ನು ನಿರ್ಬಂಧಿಸಿದ್ದು, ಒತ್ತಡವನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಸ್ಟಾರ್‌ಲೈನರ್ ಕ್ಯಾಪ್ಸುಲ್​ ಹಿಂದಿರುಗುವಿಕೆಯಿಂದಾಗುವ ಅಪಾಯಗಳನ್ನು ಒಪ್ಪಿಕೊಳ್ಳಬೇಕೆ ಅಥವಾ ಅದರ ಬದಲು ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್​ನಂತಹ ಸುರಕ್ಷಿತ ಪರ್ಯಾಯವನ್ನು ಆರಿಸಿಕೊಳ್ಳಬೇಕೆ ಎಂಬುದರ ಕುರಿತು ನಾಸಾದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ನಾಸಾ, ಸ್ಟಾರ್‌ಲೈನರ್‌ನ ಕಾರ್ಯಾಚರಣೆಯನ್ನು ಬದಲಾಯಿಸಲು ನಿರ್ಧರಿಸಿದರೆ, ಬೋಯಿಂಗ್ ಕ್ಯಾಪ್ಸುಲ್​ ಅನ್ನು ಸಿಬ್ಬಂದಿಯಿಲ್ಲದೆ ವಾಪಸ್​ ಭೂಮಿ ಕರೆತರಲು ಕಾನ್ಫಿಗರ್ ಮಾಡಲಿದೆ. ಅಲ್ಲದೆ, ಇದು ಬೋಯಿಂಗ್​ಗೆ ಹಿನ್ನಡೆಯಾಗಲಿದೆ. ನಿರ್ವಹಣೆಯ ಸಮಸ್ಯೆಗಳು ಮತ್ತು ಇಂಜಿನಿಯರಿಂಗ್ ಸಮಸ್ಯೆಗಳನ್ನು ಒಳಗೊಂಡಂತೆ ಸ್ಟಾರ್ಲೈನರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ಟಾರ್‌ಲೈನರ್‌ ಕ್ಯಾಪ್ಸುಲ್​ ಅಭಿವೃದ್ಧಿ ಪಡಿಸಲು ಪ್ರಸ್ತುತ ಪರೀಕ್ಷಾ ಕಾರ್ಯಾಚರಣೆಗಾಗಿ 125 ಮಿಲಿಯನ್ ಡಾಲರ್​ ಸೇರಿದಂತೆ ಬೋಯಿಂಗ್‌ಗೆ 2016 ರಿಂದ 1.6 ಶತಕೋಟಿ ಡಾಲರ್​ ವೆಚ್ಚವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
