ನವದೆಹಲಿ:2022ನೇ ವರ್ಷ ಮುಗಿದು 2023ನೇ ಹೊಸ ವರ್ಷ ಬರುವುದಕ್ಕೆ ಇನ್ನು ಕೆಲವೇ ದಿನಗಳ ಬಾಕಿ ಇವೆ. ಈ ವರ್ಷದ ಅಂತ್ಯ ಸಮೀಪಿಸುತ್ತಿದ್ದಂತೆ ಮುಂದಿನ ವರ್ಷದ ಬಗ್ಗೆ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ನುಡಿದಿರುವ ಭವಿಷ್ಯಗಳು ಇದೀಗ ಬಹು ಚರ್ಚಿತವಾಗಿವೆ. ಇವರು ನುಡಿದಿರುವ ಭವಿಷ್ಯಗಳಲ್ಲಿ ಚೆರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು ಮತ್ತು ಸೋವಿಯತ್​​ ಯೂನಿಯನ್​ ವಿಸರ್ಜನೆ ಸೇರಿದಂತೆ ಶೇ. 85 ರಷ್ಟು ಭವಿಷ್ಯವಾಣಿಗಳು ಈಗಾಗಲೇ ನಿಜವಾಗಿವೆ.
ಯಾರೀ ಬಾಬಾ ವಂಗಾ?ಬಲ್ಗೇರಿಯಾದ ನಿಗೂಢ ಮಹಿಳೆ ಬಾಬಾ ವಂಗಾ, 1996ರಲ್ಲಿಯೇ ಮೃತಪಟ್ಟಿದ್ದರು. ಸ್ತನ ಕ್ಯಾನ್ಸರ್‌ಗೆ ಬಲಿಯಾದ ಅವರಿಗೆ ಬಾಲ್ಯದಿಂದಲೂ ಕಣ್ಣುಗಳೂ ಕಾಣಿಸುತ್ತಿರಲಿಲ್ಲ. ಆದರೆ ಜಗತ್ತಿನಲ್ಲಿ 51ನೇ ಶತಮನಾದವರೆಗೂ ಏನೇನು ಸಂಭವಿಸಲಿದೆ ಎನ್ನುವುದನ್ನು ಕಂಡುಕೊಂಡಿದ್ದರಂತೆ. 5079ನೇ ಇಸವಿಯವರೆಗೆ ಜಗತ್ತಿನಲ್ಲಿ ಏನೇನು ಸಂಭವಿಸಲಿದೆ ಎಂಬುದನ್ನು ಬಾಬಾ ವಂಗಾ ಮೊದಲೇ ತಿಳಿಸಿದ್ದಾರೆ. ಅವರ ನಂಬಿಕೆ ಪ್ರಕಾರ 5079ಕ್ಕೆ ಜಗತ್ತಿನ ಅಂತ್ಯವಾಗಲಿದೆ.
2022ಕ್ಕಿಂತಲೂ 2023 ಭೀಕರಪ್ರಸ್ತುತ ಬಾಬಾ ವಂಗಾರ 2023ರ ಭವಿಷ್ಯ ಬಹಳ ಚರ್ಚೆಯಾಗುತ್ತಿವೆ. ಬಾಬಾ ವಂಗಾರ ಪ್ರಕಾರ 2022ಕ್ಕಿಂತಲೂ 2023ನೇ ವರ್ಷ ಭೀಕರವಾಗಲಿದ್ದು, ಅನೇಕ ಅನಾಹುತಗಳು ಸಂಭವಿಸಲಿದೆಯಂತೆ. ಹಾಗಾದರೆ ಈ ವರ್ಷ ಏನೇನು ನಡೆಯಲಿದೆ ಎಂಬುದನ್ನು ಕೆಳ
* 2023, ಒಂದು ಮಹಾಶಕ್ತಿಯು ಜೈವಿಕ ಅಸ್ತ್ರಗಳ ಮೇಲೆ ಪ್ರಯೋಗವನ್ನು ನಡೆಸುವ ಸನ್ನಿವೇಶವಾಗಿದೆಯಂತೆ. ಆದರೆ, ರಷ್ಯಾ ಮತ್ತು ಯೂಕ್ರೇನ್​ ನಡುವಿನ ಬಿಕ್ಕಟ್ಟಿನಿಂದ ಇದನ್ನು ಮರೆಯುವ ಸಾಧ್ಯತೆ ಇದೆಯಂತೆ.
* ಬಾಬಾ ವಂಗಾರ ಪ್ರಕಾರ ಸೌರ ಚಂಡಮಾರುತ ಅಥವಾ ಸೌರ ಸುನಾಮಿಯಿಂದಾಗಿ ಭೂಮಿಯ ಕಾಂತೀಯ ರಕ್ಷಾ ಕವಚ 2023 ರಲ್ಲಿ ತುಂಬಾ ಹಾನಿಗೊಳಗಾಗಲಿದೆಯಂತೆ.
* ಏಲಿಯನ್​ಗಳ ದಾಳಿಯಿಂದ ಭೂಮಿ ಮೇಲೆ ಲಕ್ಷಾಂತರ ಮಂದಿ ನಾಶವಾಗುವ ಸಾಧ್ಯತೆ ಇದೆಯಂತೆ.
* 2023ರಲ್ಲಿ ಭೂಮಿಯ ಕಕ್ಷೆಯು ಕೆಲವು ರೀತಿಯಲ್ಲಿ ಬದಲಾಗಲಿದೆಯಂತೆ. ಭೂಮಿ ಮತ್ತು ಅದರ ಕಾಸ್ಮಿಕ್ ಪರಿಸರದ ನಡುವಿನ ಸೂಕ್ಷ್ಮ ಸಮತೋಲನದ ಸ್ಥಿತಿಯಿಂದಾಗಿ ಉಂಟಾಗುವ ಪ್ರಕ್ಷುಬ್ಧತೆಯು ಭೂಮಿಯ ತಾಪಮಾನದ ಮೇಲೆ ಪರಿಣಾಮಗಳನ್ನು ಉಂಟುಮಾಡಬಹುದು. ಇಂತಹ ಸಂದರ್ಭದಲ್ಲಿ ಭೂಮಿಯ ಪರಿಸ್ಥಿತಿ ಸಾಕಷ್ಟು ಚಿಂತಾಜನಕವಾಗಿರುತ್ತದೆ. ಗ್ರಹಗಳ ಸಣ್ಣ ಹೊಂದಾಣಿಕೆಯು ಸಹ ಅನಗತ್ಯ ಮತ್ತು ಗಂಭೀರವಾದ ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬಾಬಾ ವಂಗಾ ಹೇಳಿದ್ದಾರೆ.
* 2023ರ ವೇಳೆಗೆ ಲ್ಯಾಬ್‌ಗಳಲ್ಲಿ ಮಾನವರನ್ನು ತಯಾರಿಸಲಾಗುವುದು. ಪಾಲಕರು ತಮಗೆ ಹುಟ್ಟಲಿರುವ ಮಗುವಿನ ನೋಟ ಮತ್ತು ಗುಣಲಕ್ಷಣಗಳನ್ನು ಹುಟ್ಟುವ ಮೊದಲೇ ನಿರ್ಧರಿಸುವ ಆಯ್ಕೆಯನ್ನು ಹೊಂದಲಿದ್ದಾರಂತೆ. ಒಮ್ಮೆ ಇದನ್ನು ಕಂಡುಹಿಡಿದ ನಂತರ ಬಾಡಿಗೆ ತಾಯ್ತನದ ಸಮಸ್ಯೆಯು ಪರಿಹಾರವಾಗಲಿದೆಯಂತೆ ಮತ್ತು ಜನ್ಮ ನೀಡುವ ಪ್ರಕ್ರಿಯೆಯು ಮಾನವ ನಿಯಂತ್ರಣದಲ್ಲಿರಲಿದೆ. ಬಾಬಾ ವಂಗಾರ ಪ್ರಕಾರ ಭವಿಷ್ಯದ ಜನರು ಮನೆಗಳಲ್ಲಿ ಬದಲಾಗಿ ಲ್ಯಾಬ್‌ಗಳಲ್ಲಿ ಜನಿಸುತ್ತಾರಂತೆ.
* ವಿದ್ಯುತ್ ಸ್ಥಾವರವು ಸ್ಫೋಟಗೊಂಡರೆ, ವಿಷಪೂರಿತ ಮೋಡಗಳು ಏಷ್ಯಾದ ಇಡೀ ಖಂಡವನ್ನು ಹೊಗೆಯ ದಟ್ಟವಾದ ಹೊದಿಕೆಯಲ್ಲಿ ಆವರಿಸುವ ಸಾಧ್ಯತೆಯಿದೆ. ಈ ಬದಲಾವಣೆಯ ಪರಿಣಾಮವಾಗಿ ಗಂಭೀರ ಸೋಂಕುಗಳು ಇತರ ರಾಷ್ಟ್ರಗಳಿಗೆ ಹರಡಲಿದೆಯಂತೆ.
ಇದಿಷ್ಟು 2023ರಲ್ಲಿ ನಡೆಯಲಿದೆಯಂತೆ. 2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11ರ ದಾಳಿಯ ಬಗ್ಗೆ ವಂಗಾ ಭವಿಷ್ಯ ಹೇಳಿದ್ದರು. ಅದು ನಿಜವೂ ಆಗಿತ್ತು. ‘ಅಮೆರಿಕದ ಸಹೋದರರು ಲೋಹದ ಹಕ್ಕಿಗಳ ದಾಳಿಗೆ ಒಳಗಾಗಲಿದ್ದಾರೆ. ತೋಳಗಳು ಕೂಗಲಿವೆ, ಮುಗ್ಧರ ರಕ್ತದ ಕೋಡಿ ಹರಿಯಲಿದೆ’ ಎಂದು ಆಕೆ 1989ರಲ್ಲಿ ನುಡಿದಿದ್ದರು. 2021 ಮತ್ತು 2022ರಲ್ಲೂ ಬಾಬಾ ವಾಂಗಾರ ಕೆಲ ಭವಿಷ್ಯಗಳು ನಿಜವಾಗಿವೆ. ಇದೀಗ 2023ರಲ್ಲಿ ಘಟಿಸಲಿರುವ ಅನಾಹುತಗಳ ಬಗ್ಗೆ ಬಾಂಬಾ ವಾಂಗಾ ನುಡಿದಿರುವ ಭವಿಷ್ಯವಾಣಿ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂದು ಕಾದು ನೋಡಬೇಕಿದೆ.(ಏಜೆನ್ಸೀಸ್​)
ಭಾರತಕ್ಕೆ ಕಾದಿದೆಯಾ ಅಪಾಯ? ಹೊಸ ವರ್ಷ ಸಮೀಪಿಸುತ್ತಿದ್ದಂತೆ ಚರ್ಚೆಯಾಗ್ತಿದೆ ಬಾಬಾ ವಂಗಾರ ಈ ಭವಿಷ್ಯವಾಣಿ

2022ರ ಕರಾಳ ಭವಿಷ್ಯವಿದು! ಈ ನಿಗೂಢ ಮಹಿಳೆಯ ಇದುವರೆಗಿನ ಬಹುತೇಕ ಭವಿಷ್ಯ ನಿಜವಾಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
