ನವದೆಹಲಿ:ಭಾರತದಲ್ಲಿ ಹಿರಿಯ ಸಹೋದರ ಸಮಾನವಾದ ವ್ಯಕ್ತಿಯನ್ನು ಭಯ್ಯಾ ಅಂತಲೂ ಕರೆಯುತ್ತಾರೆ. ಇದೀಗ ನಾವು ಹೇಳಲು ಹೊರಟಿರುವುದು ಓರ್ವ ಮಹಿಳೆಯ ಕತೆ. 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗಿ ಮಗುವನ್ನು ಪಡೆದಿರುವ ಮಹಿಳೆಯ ಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಮಹಿಳೆಯ ಹೆಸರು ವಿನಿ. ತನ್ನ ಕತೆಯನ್ನು ತಾನೇ ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ಜಾಲತಾಣದಲ್ಲಿ 5 ಮಿಲಿಯನ್​ಗು ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದ
ಇದನ್ನೂ ಓದಿ:ಕಾಡಾನೆ ದಾಳಿಯಿಂದ ಬೈಕ್​ ಸವಾರರು ಜಸ್ಟ್​ ಮಿಸ್​: ಲಾರಿ ಚಾಲಕನ ಸಮಯ ಪ್ರಜ್ಞೆಗೆ ಸಲಾಂ
A post shared by Vini & Jai (@viniandjai)

ಭಯ್ಯಾ ಎಂದು ಕರೆಯುತ್ತಿದ್ದೆವಿಡಿಯೋದಲ್ಲಿ ವಿನಿ ಮತ್ತು ಆಕೆಯ ಪತಿ ಜೈ ಅವರ ಬಾಲ್ಯದ ಫೋಟೋಗಳು ಒಳಗೊಂಡಂತೆ ಅನೇಕ ಫೋಟೋಗಳಿವೆ. 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದೆ, ಇದೀಗ ಅವರನ್ನೇ ಮದುವೆಯಾಗಿ ಒಂದು ಮಗುವಿಗೆ ತಾಯಿಯಾಗಿದ್ದೇನೆ ಎಂದು ವಿಡಿಯೋ ಕುರಿತು ಬರೆಯಲಾಗಿದೆ.
ವಯಸ್ಸಿನ ವ್ಯತ್ಯಾಸ ಕಾರಣಅಂದಹಾಗೆ ವಿನಿ ಮತ್ತು ಜೈ ಇಬ್ಬರು ಸಂಬಂಧಿಗಳು. ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ ಕಾರಣ ಸುಮಾರು 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದರಂತೆ. ಸಂಬಂಧಿಕರು ಇಬ್ಬರ ಮದುವೆ ಮಾಡಿಸಿದ ಬಳಿಕ ಇದೀಗ ಗಂಡ-ಹಂಡತಿಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ:ನಿಜವಾದ ಸ್ನೇಹ ಅಂದ್ರೆ ಇದು! ಭೇಟಿಯೇ ಆಗದ ಫೇಸ್​ಬುಕ್​ ಫ್ರೆಂಡ್​ ಕಷ್ಟಕ್ಕೆ ಮಿಡಿದ ಶಿಕ್ಷಕ, 16 ಲಕ್ಷ ರೂ. ಸಂಗ್ರಹ
A post shared by Vini & Jai (@viniandjai)

ಎರಡೂ ರೀತಿಯಲ್ಲೂ ಕಾಮೆಂಟ್​ವಿಡಿಯೋದಲ್ಲಿ ದಂಪತಿಯ ಮಗುವಿನ ಚಿತ್ರಗಳು ಸಹ ಇವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ವಿಶೇಷವಾಗಿ ವಿಡಿಯೋದ ಶೀರ್ಷಿಕೆಗಾಗಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ಕಾಮೆಂಟ್​ಗಳು ಬಂದಿವೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)
ಬಿಜೆಪಿಯಿಂದ ಟಿಕೆಟ್​ ಮಿಸ್​: ಎಚ್​.ಡಿ. ದೇವೇಗೌಡರನ್ನು ಭೇಟಿ ಮಾಡಿದ ಬಿಎಸ್​ವೈ ಆಪ್ತ ಸಂತೋಷ್​

ಗುಂಡು ಹೊಡೆದು ಬಿಜೆಪಿಯ ಕಿಸಾನ್ ಮೋರ್ಚಾ ನಾಯಕನ ಹತ್ಯೆ!

ತಡರಾತ್ರಿ ಕಾರು ಅಪಘಾತ: ಕಾಂಗ್ರೆಸ್​ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್​ ಚಿಂಚನಸೂರ್​ಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 2 =
Remember me
