ಮುಂಬೈ:ಭಾರತದ ಅತಿದೊಡ್ಡ ಎಎಫ್​​ಎಂಸಿಜಿ ಬ್ರ್ಯಾಂಡ್​ ಹಿಂದುಸ್ತಾನ್​ ಯೂನಿಲಿವರ್​ (ಎಚ್​ಯುಎಲ್​) ತನ್ನ ಎಲ್ಲ ಉತ್ಪನ್ನಗಳ ಬೆಲೆಯನ್ನು ಶೇಕಡ 15ರಷ್ಟು ಏರಿಕೆ ಮಾಡಿದೆ. ಪಿಯರ್ಸ್​ ಸಾಬೂನು (125 ಗ್ರಾಂ) ದರ ಶೇಕಡ 2.4 ಮತ್ತು ಮಲ್ಟಿ ಪ್ಯಾಕ್​ ದರ ಶೇಕಡ 3.7 ಏರಿದೆ. ಲಕ್ಸ್​ ಸಾಬೂನು ದರ ಕೆಲವು ಮಲ್ಟಿ ಪ್ಯಾಕ್​ ಮಾದರಿಯ ದರ ಶೇಕಡ 9 ಏರಿದೆ. ಎಚ್​ಯುಎಲ್​ ತನ್ನ ಚರ್ಮ ರಕ್ಷಣೆ ಮತ್ತು ಇತರೆ ಉತ್ಪನ್ನಗಳ ದರವನ್ನು ಶೇಕಡ 3 ರಿಂದ 20ರ ತನಕ ಏರಿಕೆ ಮಾಡಿದೆ.
ಸನ್​ಸಿಲ್ಕ್​ ಶ್ಯಾಂಪೂ ವಿವಿಧ ಮಾದರಿಯವಕ್ಕೆ 8 ರೂಪಾಯಿಂದ 10 ರೂಪಾಯಿ ತನಕ ಬೆಲೆ ಏರಿಸಲಾಗಿದೆ. ಕ್ಲಿನಿಕ್​ ಪ್ಲಸ್​ ಶ್ಯಾಂಪೂ 100 ಎಂಲ್​ ದರ ಶೇಕಡ 15, ಗ್ಲೋ ಆ್ಯಂಡ್​ ಲವ್ಲೀ ದರ ಶೇಕಡ 6&8, ಪಾಂಡ್ಸ್​ ಟಾಲ್ಕಂ ಪೌಡರ್​ ದರ ಶೇಕಡ 5&7ದರ ಏರಿಕೆ ಆಗಿದೆ. ಎಚ್​ಯುಎಲ್​ ಏಪ್ರಿಲ್​ನಲ್ಲಿ ತನ್ನೆಲ್ಲ ಉತ್ಪನ್ನಗಳ ಬೆಲೆಯನ್ನು ಏರಿಸಿತ್ತು. ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಇಂತಹ ಸನ್ನಿವೇಶ ಇದೇ ಮೊದಲು. ಇಷ್ಟಾದರೂ ಎ್​ಎಂಸಿಜಿಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿಯೇ ಉಳಿಯಲಿದೆ. ಹಣದುಬ್ಬರ ಪ್ರಮಾಣ ಕಡಿಮೆ ಮಾಡಲು ಆರ್​ಬಿಐ ಮೇ 4ರಂದು ತುರ್ತು ಕ್ರಮಗಳನ್ನು ಘೋಷಿಸಿದ್ದು, ರೆಪೋ ದರವನ್ನು 40 ಮೂಲಾಂಶ ಏರಿಸಿದೆ. ಸಿಆರ್​ಆರ್​ ದರವನ್ನು 50 ಮೂಲಾಂಶ ಏರಿಸಿದೆ. ಇದು ಅರ್ಥ ವ್ಯವಸ್ಥೆಗೆ ಬಲವನ್ನು ತುಂಬಲಿದೆ ಎಂದು ಎಚ್​ಯುಎಲ್​ ಸಿಇಒ ಮತ್ತು ಎಂಡಿ ಸಂಜೀವ್​ ಮೆಹ್ತಾ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + seventeen =
Remember me
