ಹೈದರಾಬಾದ್:ಅನಾರೋಗ್ಯಕ್ಕೊಳಗಾದ ಮಹಿಳೆಯೋರ್ವಳಿಗೆ ದುಷ್ಟಶಕ್ತಿ ಬೆನ್ನಟ್ಟಿದೆ ಎಂದು ಸಂಶಯಿಸಿ ಅದರಿಂದ ಮುಕ್ತಿಗೊಳಿಸಲು ನೀಡಿದ ‘ಚಿಕಿತ್ಸೆ’ ಆಕೆಯ ಬದುಕನ್ನೇ ಶಾಶ್ವತವಾಗಿ ಮುಗಿಸಿಬಿಟ್ಟಿದೆ…ಮಂತ್ರವಾದಿಯೊಬ್ಬ ದುಷ್ಟಶಕ್ತಿಯಿಂದ ಮುಕ್ತಗೊಳಿಸಲು ಮಹಿಳೆಗೆ ಕ್ರೂರವಾಗಿ ಹಿಂಸಿಸಿದ್ದು, ಮಹಿಳೆ ಸೋಮವಾರ ಸಾವಿಗೀಡಾಗಿದ್ದಾಳೆ.ಜೈಪುರ ಮಂಡಲದ ನಿವಾಸಿಯಾಗಿದ್ದ ರಜಿತಾ ಸಾವಿಗೀಡಾದ ನತದೃಷ್ಟೆ. ಒಂದೂವರೆ ವರ್ಷಗಳ ಹಿಂದೆ ರಜಿತಾ- ಮಲ್ಲೇಶ್ ವಿವಾಹವಾಗಿದ್ದರು. ರಜಿತಾಳ ಪೋಷಕರು ತೀರಿಕೊಂಡಿದ್ದು ಆಕೆಯ ಪತಿ ಜೈಪುರದಲ್ಲಿ ರಜಿತಾ ಮತ್ತು ಆಕೆಯ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದ. ನಾಲ್ಕು ತಿಂಗಳ ಹಿಂದೆ ಅವರಿಗೆ ಮಗು ಜನಿಸಿದೆ. ನಂತರ ಅನಾರೋಗ್ಯಕ್ಕೊಳಗಾಗಿದ್ದ ಆಕೆಗೆ ದುಷ್ಠ ಶಕ್ತಿ ಕಾಡುತ್ತಿದೆ ಎಂದು ಆಕೆಯ ಕುಟುಂಬದವರು ಸಂಶಯಿಸಿದ್ದರು. ಅವಳನ್ನು ಗುಣಮುಖಗೊಳಿಸಲು ಮಂತ್ರವಾದಿ ಶ್ಯಾಮ್‌ನನ್ನು ಆಕೆಯ ಕುಟುಂಬದವರು ಕರೆಸಿದ್ದರು.
ಇದನ್ನೂ ಓದಿ:ಮಿಸ್​ ಇಂಡಿಯಾ ಫೈನಲಿಸ್ಟ್​ ಈಗ ಯುಪಿಎಸ್ಸಿ ಸಾಧಕಿ: ಮಾಡೆಲಿಂಗ್​ ಚೆಲುವೆಯ ಯಶಸ್ಸಿನ ಕತೆ ಇದು!
ಆರೋಪಿ ದುಷ್ಟಶಕ್ತಿಯಿಂದ ಆಕೆಯನ್ನು ಮುಕ್ತಗೊಳಿಸಲು ಇನ್ನಿಲ್ಲದಂತೆ ಹಿಂಸೆ ನೀಡಿದ್ದ. ತೀವ್ರವಾಗಿ ಹೊಡೆಯಲಾರಂಭಿಸಿದ್ದ. ಕೂದಲಿನಿಂದ ಎಳೆದಾಡಿದ ಮತ್ತು ಹಾಸಿಗೆಯ ಮೇಲೆ ತಳ್ಳಾಡಿದ್ದ.. ಇದೆಲ್ಲದಕ್ಕೂ ಆಕೆಯ ಕುಟುಂಬದವರು ಮೂಕ ಪ್ರೇಕ್ಷಕರಾಗಿದ್ದರು. ರಜಿತಾಳ ಆರೋಗ್ಯ ತೀವ್ರ ಹದಗೆಡಲಾರಂಭಿಸಿದಾಗ, ಆಕೆಯನ್ನು ಕರೀಂನಗರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸಾವಿಗೀಡಾಗಿದ್ದಾಳೆ.ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ಬಹಿರಂಗಗೊಳ್ಳುತ್ತದೆ. ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ನಾವು ಈಗಾಗಲೇ ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವರು ಈಗ ರಾಮನಾಮ ಪಠಿಸುತ್ತಿದ್ದಾರೆ…: ಪ್ರಿಯಾಂಕಾ ಗಾಂಧಿಗೆ ಯೋಗಿ ತಿರುಗೇಟು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × four =
Remember me
