ನವದೆಹಲಿ:ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜಿಡಿಪಿಯ ಪ್ರತಿಶತ 10ರಷ್ಟನ್ನು ಅಂದರೆ 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್​ನ್ನು ಕೊವಿಡ್​-19ರ ಬಿಕ್ಕಟ್ಟಿನ ನಿರ್ವಹಣೆಗಾಗಿ ಘೋಷಣೆ ಮಾಡಿದ್ದಾರೆ.
ಆತ್ಮ ನಿರ್ಭರ ಭಾರತ ಅಭಿಯಾನಕ್ಕಾಗಿ ಈ ವಿಶೇಷ ಪ್ಯಾಕೇಜ್​ನ್ನು ಕೇಂದ್ರ ಸರ್ಕಾರ ಘೋಷಣೆ ಮಾಡುತ್ತಿದೆ. ಇದರಿಂದಾಗಿ ಖಂಡಿತ ಆರ್ಥಿಕತೆಯ ಶಾಖೆಗಳಾದ ಬೇಡಿಕೆ, ಪೂರೈಕೆ ಮತ್ತು ಉತ್ಪಾದನಾ ಕ್ಷೇತ್ರಗಳು ಉತ್ತೇಜನಗೊಳ್ಳುತ್ತವೆ. ಸ್ವಾವಲಂಬನೆ ಸಾಧಿಸಲು ಜಮೀನು, ಕಾರ್ಮಿಕರು, ದ್ರವ್ಯತೆ, ಕಾನೂನುಗಳನ್ನು ಕೇಂದ್ರೀಕರಿಸಿ ಈ ಪ್ಯಾಕೇಜ್​ ಘೋಷಣೆ ಮಾಡಲಾಗಿದೆ.
ಈ ಆರ್ಥಿಕ ಪ್ಯಾಕೇಜ್​ ನಿಂದ ಖಂಡಿತ ಗೃಹ ಕೈಗಾರಿಕೆಗಳು, ಸಣ್ಣ, ಮಧ್ಯಮ ಉದ್ಯಮಗಳು, ಅದನ್ನು ನಂಬಿಕೊಂಡು ಬದುಕುತ್ತಿರುವ ಕೋಟ್ಯಂತರ ಜನರಿಗೆ ಸಹಾಯವಾಗಲಿದೆ. ಅಷ್ಟೇ ಅಲ್ಲ, ರೈತರು, ಮಧ್ಯಮ ವರ್ಗದವರಿಗೂ ಅನುಕೂಲ ಆಗಲಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದರು.
ಇದನ್ನೂ ಓದಿ:ಸಿದ್ಧವಾಗಿರಿ… ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್​ಡೌನ್​ 4.0: ಪ್ರಧಾನಿ ಮೋದಿ
ಕರೊನಾ ಸಂಕಷ್ಟದ ಸಮಯ ನಮಗೆ ಸ್ಥಳೀಯ ವಸ್ತುಗಳ ಪ್ರಾಮುಖ್ಯತೆಯನ್ನು ತಿಳಿಸಿದೆ. ಇವತ್ತಿನ ಜಾಗತಿಕ ಬ್ರ್ಯಾಂಡ್​ಗಳು ಒಂದು ಕಾಲದಲ್ಲಿ ಸ್ಥಳೀಯವೇ ಆಗಿದ್ದವು. ಆಗ ಜನರು ಅದಕ್ಕೆ ಹೆಚ್ಚು ಬೆಂಬಲ ಕೊಟ್ಟು, ಹೆಚ್ಚೆಚ್ಚು ಬೇಡಿಕೆ ಇಟ್ಟ ಬಳಿಕ ಅವು ಜಾಗತಿಕ ಮಟ್ಟದ ಬ್ರ್ಯಾಂಡ್​ಗಳಾಗಿ ಬದಲಾದವರು. ನಾವು ಭಾರತೀಯರು ಈ ಕ್ಷಣದಿಂದ ಸ್ಥಳೀಯ ಉತ್ಪಾದನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ನಮ್ಮ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಬೇಕು. ಅದನ್ನು ಹೆಮ್ಮೆಯಿಂದ ಬಳಸಬೇಕು ಎಂದು ಹೇಳಿದರು.
ಇದನ್ನೂ ಓದಿ:ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 8 =
Remember me
