ನವದೆಹಲಿ:ಕೊವಿಡ್​-19 ಸೋಂಕು ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಎಂದು ಮೇ 12ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದರು.
ಅಷ್ಟೇ ಅಲ್ಲ, ಕೊವಿಡ್​ ಪ್ರಾರಂಭವಾದಾಗ ಭಾರತದಲ್ಲಿ ಒಂದೇ ಒಂದು ಪಿಪಿಇ ಕಿಟ್​ (ವೈಯಕ್ತಿಕ ರಕ್ಷಣಾ ಸಲಕರಣೆ) ಗಳು ತಯಾರಾಗುತ್ತಿರಲಿಲ್ಲ. ಇದೀಗ ದಿನವೊಂದಕ್ಕೆ 2 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್​ಗಳು ಭಾರತದಲ್ಲಿ ಸಿದ್ಧಗೊಳ್ಳುತ್ತಿವೆ. ಇದು ಹೆಮ್ಮೆಯ ವಿಷಯ ಎಂದು ಹೇಳಿದ್ದರು.
ಭಾರತದಲ್ಲಿ ಕೊವಿಡ್​ ವಾರಿಯರ್ಸ್​ಗೆ ಅಗತ್ಯವಾಗಿರುವ ವೈಯಕ್ತಿಕ ರಕ್ಷಣಾ ಸಲಕರಣೆಗಳು ಈಗ ದಿನವೊಂದಕ್ಕೆ 4.5 ಲಕ್ಷದಷ್ಟು ತಯಾರಾಗುತ್ತಿವೆ. ಎರಡೇ ವಾರದಲ್ಲಿ ಪಿಪಿಇ ಕಿಟ್​ಗಳ ತಯಾರಿಕೆ ಸಂಖ್ಯೆ ದ್ವಿಗುಣಗೊಂಡಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಟ್ವಿಟರ್​ನಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ಇದನ್ನೂ ಓದಿ:ಮಲಗಿದ್ದ ಮನೆಯೊಡೆಯನ ಮುಖದ ಮೇಲೆ ಹೊಡೆದ ಬೆಕ್ಕು…; ಆತ ಎಚ್ಚರಗೊಳ್ಳದೆ ಇದ್ದರೆ ಅವನ ಇಡೀ ಕುಟುಂಬ ಸಾಯುತ್ತಿತ್ತು..!
ದೇಶದಲ್ಲಿ ಈಗ 600ಕ್ಕೂ ಹೆಚ್ಚು ಕಂಪನಿಗಳು ಪಿಪಿಇ ಕಿಟ್​ ತಯಾರಿಕೆಗೆ ಪ್ರಮಾಣೀಕರಿಸಲ್ಪಟ್ಟಿವೆ. ದಿನವೊಂದಕ್ಕೆ 4.5ಲಕ್ಷ ವೈಯಕ್ತಿಕ ರಕ್ಷಣಾ ಸಲಕರಣೆಗಳು ಉತ್ಪಾದನೆಯಾಗುತ್ತವೆ. ಕೊವಿಡ್​-19 ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಒಂದೇ ಒಂದು ಕಿಟ್​ ಕೂಡ ತಯಾರಾಗುತ್ತಿರಲಿಲ್ಲ. ಮೇ 5ರ ಹೊತ್ತಿಗೆ ದಿನಕ್ಕೆ 2.06 ಲಕ್ಷ ಪಿಪಿಇ ಕಿಟ್​ಗಳು ಸಿದ್ಧವಾಗುತ್ತಿದ್ದವು ಎಂದು ತಿಳಿಸಿದ್ದಾರೆ.
ಕರೊನಾ ಕಾಲಿಡುವುದಕ್ಕೂ ಮೊದಲು ಪಿಪಿಇ ಕಿಟ್​ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಕೊವಿಡ್​-19 ಶುರುವಾಗಿ ಎರಡೇ ತಿಂಗಳಲ್ಲಿ ದಿನವೊಂದಕ್ಕೆ 4 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್​ಗಳು ಉತ್ಪಾದನೆಯಾಗುತ್ತಿದೆ.ಮಾಸ್ಕ್​, ಕಣ್ಣು ರಕ್ಷಣಾ ಕವಚ, ಶೂ ಕವರ್​, ಗೌನ್​ ಮತ್ತು ಕೈಗವಸುಗಳನ್ನು ಪಿಪಿಇ ಕಿಟ್​ ಒಳಗೊಂಡಿರುತ್ತದೆ. ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆರೋಗ್ಯ ಕಾರ್ಯಕರ್ತರಿಗೆ ಇದು ಬೇಕೇಬೇಕು. ಇಲ್ಲದಿದ್ದರೆ ಸೋಂಕು ತಗುಲುವ ಸಾಧ್ಯತೆ ಅತಿ ಹೆಚ್ಚಾಗಿ ಇರುತ್ತದೆ.
ಎರಡು ವಾರಗಳ ಹಿಂದೆ ಕೇವಲ 52 ಕಂಪನಿಗಳು ಪಿಪಿಇ ಕಿಟ್​ ತಯಾರಿಸುತ್ತಿದ್ದವು. ಅದೀಗ 600ಕ್ಕೆ ಏರಿದೆ. (ಏಜೆನ್ಸೀಸ್​)
ಇದನ್ನೂ ಓದಿ:ಉಡುಪಿ ಐವರಲ್ಲಿ ಕರೊನಾ ಪಾಸಿಟಿವ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − thirteen =
Remember me
