ಮಂಗಳೂರು:ನಿನ್ನೆ ಆರೋಪಿ ಶಾರಿಕ್​ ಇಸ್ಲಾಮಿಕ್​ ಸ್ಟೇಟ್ಸ್​ ಮಾದರಿಯಲ್ಲೇ ಕುಕ್ಕರ್​ ಬಾಂಬ್​ ಹಿಡಿದು ನಿಂತ ಫೋಟೊ ಒಂದು ವೈರಲ್​ ಆಗಿತ್ತು. ಈಗ ಹೊಸ ಮಾಹಿತಿ ಹೊರಬಿದ್ದಿದ್ದು ಶಾರೀಕ್​ ಕೈಯಲ್ಲಿದ್ದ ಬಾಂಬ್​ಗೆ ಇಡೀ ಬಸ್​ ಸ್ಫೋಟ ಮಾಡುವ ಸಾಮರ್ಥ್ಯ ಇತ್ತಂತೆ. ಈ ಸ್ಪೋಟಕ ಮಾಹಿತಿ ಎಫ್.ಎಸ್.ಎಲ್ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.
ಬಲ್ಲ ಮೂಲಗಳ ಪ್ರಕಾರ ಮಂಗಳೂರಿನಲ್ಲಿ ಬಾಂಬ್​ ಅನ್ನು ಬೇರೆ ಜಾಗದಲ್ಲಿ ಪ್ಲಾಂಟ್​ ಮಾಡಲು ರಿಕ್ಷಾದಲ್ಲಿ ಶಾರಿಕ್​ ಸ್ಫೋಟಕ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಅದು ರಿಕ್ಷಾ ಒಳಗಡೆಯೆ ಸ್ಫೋಟವಾಗಿದೆ. ಈ ಸಂದರ್ಭ ರಿಕ್ಷಾ ಚಾಲಕ ಮತ್ತು ಉಗ್ರ ಇಬ್ಬರೂ ಗಾಯಗೊಂಡಿದ್ದರು.
ಈ ಶಾರಿಕ್ ತಗೊಂಡು ಬಂದಿದ್ದು ಅಂತಿಂಥ ಬಾಂಬ್ ಅಲ್ಲ. ಆ ಕುಕ್ಕರ್ ಬಾಂಬ್ ಗೆ ಇಡೀ ಬಸ್ಸನ್ನೇ ಸ್ಪೋಟಿಸುವ ತಾಕತ್ತು ಇತ್ತು. ಇ ಕುಕ್ಕರ್​ನಲ್ಲಿ 3ಲೀಟರ್​ ನಷ್ಟು ಒಂದು ರೀತಿಯ ಸ್ಫೊಟಕ ಜೆಲ್​ ಇತ್ತು. ಅದರ ಜೊತೆ ಒಂದು ಡಿಟೋನೇಟರ್ ಕೂಡ ಇತ್ತು. ಡಿಟೊನೇಟರ್​ನಲ್ಲಿ ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಮಾಡಲಾಗಿತ್ತು. ಆದರೆ ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದ ಡಿಟೋನೇಟರ್‌ಗೆ ವಿದ್ಯುತ್​ ಹೋಗದೆ ಕೇವಲ ಜೆಲ್ ಉರಿದಿದೆ. ಇದರಿಂದಾಗಿ ದಟ್ಟ ಹೊಗೆ‌ ಉಂಟಾಗಿತ್ತು.
ಡಿಟೊನೇಟರ್ ಮತ್ತು ಜೆಲ್ ಎರಡೂ ಒಟ್ಟಿಗೆ ಉರಿದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಒಂದು ವೇಳೆ ಸರಿಯಾದ ಸ್ಫೋಟವಾಗಿದ್ದರೆ ಆಟೋ ಪುಡಿ ಪುಡಿಯಾಗುತ್ತಿತ್ತು.ಜೊತೆಗೆ ಸುತ್ತಮುತ್ತಲಿನ ವಾಹನಗಳು ಜಖಂ ಆಗಿ ಬಹಳ ಸಾವು ನೋವು ಸಂಭವಿಸುತ್ತಿತ್ತು. ಸದ್ಯ ಒಂದು ದೊಡ್ಡ ಸ್ಫೊಟದಿಂದ ಮಂಗಳೂರು ಪಾರಾಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನುವುದು ಖುಷಿಯ ಸುದ್ದಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − four =
Remember me
