ನವದೆಹಲಿ:ಒಂದು ದೇಶ ಒಂದು ತೆರಿಗೆಯ ಜಿಎಸ್​ಟಿ ವ್ಯವಸ್ಥೆಯ ಚೌಕಟ್ಟಿನೊಳಗೆ ಪೆಟ್ರೋಲ್, ಡೀಸೆಲ್ ಮತ್ತು ಇತರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್​ಟಿ ಸಮಿತಿ ಶುಕ್ರವಾರದ ಸಭೆಯಲ್ಲಿ ಈ ಬಗ್ಗೆ ರ್ಚಚಿಸಲಿದೆ. ಸಮಿತಿಯ ಸದಸ್ಯ ಬಲದಲ್ಲಿ ನಾಲ್ಕನೇ ಮೂರಂಶ ಮತ ಪ್ರಸ್ತಾವನೆ ಪರ ಬಿದ್ದರೆ ಇದು ಜಾರಿಯಾಗಲಿದೆ. ಸಮಿತಿಯಲ್ಲಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಪ್ರತಿನಿಧಿಗಳಿದ್ದಾರೆ. ಈ ಪ್ರಸ್ತಾವನೆ ಅಂಗೀಕಾರವಾದರೆ ಗ್ಯಾಸೋಲಿನ್, ಡೀಸೆಲ್ ದರಗಳು ಇಳಿಕೆಯಾಗಲಿವೆ. ಎಲ್ಲ ರಾಜ್ಯಗಳಲ್ಲೂ ಇಂಧನದ ಮೇಲಿನ ತೆರಿಗೆಯಲ್ಲೂ ಏಕರೂಪ ಬರಲಿದೆ. ಔಷಧಗಳ ತೆರಿಗೆ ವಿನಾಯಿತಿ: ಕೋವಿಡ್ ರೋಗಿಗಳ ಚಿಕಿತ್ಸೆಗೆ ಉಪಯೋಗಿ ಸುವ ಪ್ರಮುಖ ಔಷಧೋಪಕರಣಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಡಿಸೆಂಬರ್ ತನಕ ವಿಸ್ತರಿಸುವ ಪ್ರಸ್ತಾವನೆಯೂ ಸಮಿತಿಯ ಮುಂದಿದೆ. ಈ ಬಗ್ಗೆಯೂ ತೀರ್ಮಾನ ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕಕ್ಕೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿಗದಿ ಪಡಿಸಿದ್ದ ಬಂಡವಾಳ ವೆಚ್ಚ (ಕ್ಯಾಪೆಕ್ಸ್)ದ ಟಾರ್ಗೆಟ್ ಅನ್ನು 11 ರಾಜ್ಯಗಳು ಸಾಧಿಸಿವೆ. ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್​ಗಢ, ಹರಿಯಾಣ, ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಉತ್ತರಾಖಂಡ ರಾಜ್ಯಗಳು ಈ ಸಾಧನೆ ಮಾಡಿವೆ. ಹೀಗಾಗಿ ಈ ರಾಜ್ಯಗಳು ಹೆಚ್ಚುವರಿಯಾಗಿ 15,721 ಕೋಟಿ ರೂಪಾಯಿ ಸಾಲ ಪಡೆಯುವುದಕ್ಕೆ ವೆಚ್ಚ ಇಲಾಖೆ ಅನುಮತಿ ನೀಡಿದೆ. ಇದಕ್ಕೆ ಹೊರತಾಗಿ ಮುಕ್ತ ಮಾರುಕಟ್ಟೆಯಿಂದಲೂ ರಾಜ್ಯದ ಜಿಡಿಪಿಯ ಶೇಕಡ 0.25 ರಷ್ಟು ಪ್ರಮಾಣದ ಸಾಲವನ್ನು ಪಡೆದು ಬಂಡವಾಳ ವೆಚ್ಚದ ಸಂಪನ್ಮೂಲವಾಗಿ ಬಳಸಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ದೇಶದ ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ)ದ ಹಣದುಬ್ಬರ ಪ್ರಮಾಣ ಆಗಸ್ಟ್​ನಲ್ಲಿ ಶೇಕಡ 11.39ಕ್ಕೆ ಏರಿಕೆಯಾಗಿದೆ. ಜೂನ್​ನಲ್ಲಿ ಇದು ಶೇಕಡ 12.07 ಇದ್ದದ್ದು, ಜುಲೈನಲ್ಲಿ ಶೇಕಡ 11.16ಕ್ಕೆ ಇಳಿದಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ತಿಳಿಸಿದೆ. ಡಬ್ಲ್ಯುಪಿಐ ಸೂಚ್ಯಂಕ 2020ರ ಆಗಸ್ಟ್​ನಲ್ಲಿ ಶೇಕಡ 0.41 ಮಾತ್ರ ಇತ್ತು. ಕೋವಿಡ್ ಲಾಕ್​ಡೌನ್ ಕಾರಣ ವ್ಯಾಪಾರ ವಹಿವಾಟುಗಳು ಬಹುತೇಕ ಸ್ಥಗಿತಗೊಂಡಿದ್ದೇ ಇದಕ್ಕೆ ಕಾರಣ. ಕಳೆದ ತಿಂಗಳು ಡಬ್ಲ್ಯುಪಿಐ ಹೆಚ್ಚಾಗಲು ಆಹಾರೇತರ ಸಾಮಗ್ರಿಗಳ, ಮಿನರಲ್ ಆಯಿಲ್; ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಮೂಲ ಲೋಹ, ಆಹಾರ ಉತ್ಪನ್ನ, ಜವಳಿ, ಕೆಮಿಕಲ್ಸ್, ಕೆಮಿಕಲ್ ಪ್ರಾಡಕ್ಟ್ ್ಸ ಮುಂತಾದವುಗಳ ಬೆಲೆ ಏರಿದ್ದೇ ಕಾರಣ ಎಂದು ಸಚಿವಾಲಯ ಹೇಳಿದೆ. ಚಿಲ್ಲರೆ ಹಣದುಬ್ಬರ ಆಗಸ್ಟ್​ನಲ್ಲಿ ಶೇಕಡ. 5.3 ಎಂಬುದನ್ನು ಸರ್ಕಾರ ಸೋಮವಾರ ದೃಢೀಕರಿಸಿತ್ತು.
ಫುಡ್ ಡೆಲಿವರಿ ಕ್ಷೇತ್ರದ ಮುಂಚೂಣಿ ಸಂಸ್ಥೆ ಜೊಮ್ಯಾಟೊಗೆ ಅದರ ಸಹಸಂಸ್ಥಾಪಕ ಗೌರವ್ ಗುಪ್ತಾ ಮಂಗಳವಾರ ವಿದಾಯ ಹೇಳಿದ್ದಾರೆ. ಜೊಮ್ಯಾಟೊ ಷೇರುಪೇಟೆಗೆ ಐತಿಹಾಸಿಕ ರೀತಿಯಲ್ಲಿ ಪ್ರವೇಶ ಪಡೆದುಕೊಂಡ ಕೆಲವೇ ದಿನಗಳಲ್ಲಿ ಗುಪ್ತಾ ರಾಜೀನಾಮೆ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ. ಕಂಪನಿಯ ಟೀಮ್ ಮೆಂಬರ್ಸ್ ಮತ್ತು ಸಹೋದ್ಯೋಗಿಗಳಿಗೆ ಭಾವುಕ ಇಮೇಲ್ ಕಳುಹಿಸಿದ್ದು, ಎಲ್ಲರ ಜತೆಗೆ ಕೆಲಸ ಮಾಡಿದ ಅನುಭವಗಳು ಸ್ಮರಣೀಯ ಎಂದು ಹೇಳಿಕೊಂಡಿದ್ದಾರೆ. ಗೌರವ್ 2015ರಲ್ಲಿ ಜೊಮ್ಯಾಟೊಗೆ ಟೇಬಲ್ ರಿಸರ್ವೆಶನ್ಸ್ ವಿಭಾಗದ ಬಿಜಿನೆಸ್ ಹೆಡ್ ಆಗಿ ಸೇರಿ ಕೊಂಡಿದ್ದರು. 2019ರಲ್ಲಿ ಕಂಪನಿಯ ಸಹ ಸಂಸ್ಥಾಪಕರಾಗಿ ಬಡ್ತಿ ಪಡೆದಿದ್ದರು. 3 ವರ್ಷ ಚೀಫ್ ಆಪರೇಟಿಂಗ್ ಆಫೀಸರ್ ಆಗಿದ್ದರು.
ಉಪೇಂದ್ರ ನಿರ್ದೇಶನದ ಸಿನಿಮಾ ಯಾವಾಗ?; ಕೊನೆಗೂ ಯಾವಾಗ ಅಂತ ಹೇಳಿ ತಲೆಗೆ ಹುಳ ಬಿಟ್ಟ ರಿಯಲ್​ ಸ್ಟಾರ್​!

ದಸರೆಗೂ ಮೊದಲೇ ‘ದಸರಾ’ ಮುಗಿಸಿದ ನೀನಾಸಂ ಸತೀಶ್​-ಶರ್ಮಿಳಾ ಮಾಂಡ್ರೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
