ಬೆಂಗಳೂರು :ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕೇಂದ್ರ ಸರ್ಕಾರ ಮೇ ತಿಂಗಳಲ್ಲೇ 14 ಬಾರಿ ತೈಲ ದರ ಏರಿಸಿದೆ. ಒಟ್ಟಾರೆ ಪ್ರತಿ ಲೀಟರ್​ ಪೆಟ್ರೋಲ್​ ಮೇಲೆ 3.30 ರೂ ಹಾಗೂ ಡೀಸೆಲ್​ ಮೇಲೆ 4.50 ರೂ. ಹೆಚ್ಚಳವಾಗಿದೆ.
ಚುನಾವಣೆಗೆ ದಿನಾಂಕ ನಿಗದಿಯಾದ ನಂತರ ಏಪ್ರಿಲ್​ನಲ್ಲಿ 2 ಬಾರಿ ದರ ಏರಿಕೆಯಾಗಿತ್ತು. ಆದರೆ, ಇದೀಗ ಕರೊನಾ ಮಧ್ಯೆಯೇ ಮೇ 4 ರಿಂದ ಮೇ 27 ರವರೆಗೆ 14 ಬಾರಿ ದರ ಹೆಚ್ಚಿಸಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಒಂದು ಲೀಟರ್​ ಪೆಟ್ರೋಲ್​ಗೆ 96.80 ರೂ ಹಾಗೂ ಡೀಸೆಲ್​ಗೆ 89.70 ರೂ.ಇದೆ. ಅಬಕಾರಿ ಸುಂಕ ಹಾಗೂ ಮೌಲ್ಯ ವರ್ಧಿತ ತೆರಿಗೆ(ವ್ಯಾಟ್​) ಏರಿಕೆ ಕಾರಣವೊಡ್ಡಿ ಬೆಲೆ ಏರಿಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ರಾಜ್ಯಪಾಲರನ್ನು ಭೇಟಿಯಾಗಿ ಕೋವಿಡ್‌ ಪರಿಸ್ಥಿತಿ ಬಗ್ಗೆ ವಿವರಿಸಿದ ಡಿಸಿಎಂ
ಶತಕ ಸಮೀಪ:ಬರುವ ದಿನಗಳಲ್ಲಿ ರಾಜ್ಯದಲ್ಲಿ ಒಂದು ಲೀಟರ್​ ಪೆಟ್ರೋಲ್​ಗೆ 100 ರೂ. ಸಮೀಪಕ್ಕೆ ಬರಲಿದೆ. ಈಗಾಗಲೇ ದಿನಕ್ಕೆ ಸರಾಸರಿ 25 ರಿಂದ 30 ಪೈಸೆಯಂತೆ ದರ ಏರಿಸಲಾಗುತ್ತಿದೆ. ಇನ್ನೂ ಪೆಟ್ರೋಲ್​ ಮೇಲೆ 30 ಪೈಸೆಯಂತೆ 11 ಬಾರಿ ದರ ಏರಿಸಿದರೆ ಶತಕ ಮುಟ್ಟಲಿದೆ.
ಕರೊನಾದಿಂದ ತತ್ತರಿಸಿರುವ ರಾಜ್ಯದ ಜನರಿಗೆ ನಿರಂತರ ತೈಲ ದರ ಏರಿಕೆಯಿಂದ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಈಗಾಗಲೇ ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನರು ಜರ್ಜರಿತರಾಗಿದ್ದಾರೆ. ಕಳೆದ ಬಾರಿ ಕರೊನಾ ಮೊದಲನೇ ಅಲೆಯಿಂದ ಈವರೆಗೆ ನಿರಂತರವಾಗಿ ತೈಲ ದರದಲ್ಲಿ ಏರಿಕೆಯಾಗುತ್ತಿದೆ.
ಕೊರಿಯಾದಿಂದ ದೆಹಲಿ ತಲುಪಿದ ಕರೊನಾ ಟೆಸ್ಟ್​ ಕಿಟ್​ಗಳು

ಲಸಿಕೆ ತೆಗೆದುಕೊಳ್ಳದಿದ್ದರೆ ಸಂಬಳವಿಲ್ಲ : ಸಿಬ್ಬಂದಿಗೆ ಅಧಿಕಾರಿಯ ಎಚ್ಚರಿಕೆ !

ಒಂದು ಡೋಸ್​ ಕೋವಿಶೀಲ್ಡ್​, ಇನ್ನೊಂದು ಡೋಸ್​ ಕೋವಾಕ್ಸಿನ್ ! ಸರ್ಕಾರ ಹೇಳಿದ್ದೇನು ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 6 =
Remember me
