ನವದೆಹಲಿ:ಶನಿವಾರದಂದು ಸತತ ನಾಲ್ಕನೇ ದಿನ ಭಾರತದಲ್ಲಿ ಇಂಧನ ಬೆಲೆಗಳು ಏರಿಕೆಯಾಗಿವೆ. ದೇಶಾದ್ಯಂತ ಆಯಾ ರಾಜ್ಯಗಳ ತೆರಿಗೆಗಳಿಗೆ ತಕ್ಕಂತೆ ಪೆಟ್ರೋಲ್ ಮತ್ತು ಡೀಸಲ್​ ಮತ್ತಷ್ಟು ದುಬಾರಿಯಾಗಿವೆ.
ನಿನ್ನೆಯ ಏರಿಕೆಯ ನಂತರ ತಮಿಳುನಾಡಿನ ರಾಜಧಾನಿ ಚೆನ್ನೈ, ಡೀಸಲ್​ ಬೆಲೆ ಪ್ರತಿ ಲೀಟರ್​ಗೆ 100 ರೂಪಾಯಿಯ ಮಟ್ಟ ದಾಟಿದ ದೇಶದ ಎರಡನೇ ಮೆಟ್ರೋ ನಗರವಾಗಿದೆ. ಇಂದು ಚೆನ್ನೈನಲ್ಲಿ ಡೀಸಲ್​ ಬೆಲೆ ಲೀಟರ್​ಗೆ 100.24 ರೂ.ಗಳಾಗಿದ್ದರೆ, ಪೆಟ್ರೋಲ್ ಬೆಲೆ 104.22 ರೂಪಾಯಿಯಾಗಿದೆ.
ಇದನ್ನೂ ಓದಿ:ಯಶವಂತಪುರ-ಚಂಡಿಗಢಕ್ಕೆ ರೈಲು ಸಂಚಾರ ಆರಂಭ
ಇಂದು ದೆಹಲಿಯ ಪೆಟ್ರೋಲ್​ ಬೆಲೆ 107.24 ರೂಪಾಯಿ ಮತ್ತು ಡೀಸಲ್ ಬೆಲೆ 95.97 ರೂಪಾಯಿಯಷ್ಟಿದೆ. ಕೋಲ್ಕತಾದಲ್ಲಿ ಪೆಟ್ರೋಲ್​ 107.78 ರೂ., ಡೀಸಲ್​ 99.08 ರೂ. ದರ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ 113.12 ಆಗಿದ್ದು, ಡೀಸಲ್ ಲೀಟರ್​ಗೆ 104 ರೂಪಾಯಿಗಳಷ್ಟಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ ನಿನ್ನೆಯ ದಿನ ಲೀಟರ್​ಗೆ 110.61 ಇದ್ದದ್ದು, 37 ಪೈಸೆ ಏರಿಕೆಯೊಂದಿಗೆ ಇಂದು 110.98 ರೂಪಾಯಿ ಆಗಿದೆ. ಡೀಸಲ್​ ದರ 100 ರೂಪಾಯಿ ಮಟ್ಟ ದಾಟಿದ ಕೆಲವೇ ಮಹಾನಗರಗಳಲ್ಲಿ ಬೆಂಗಳೂರು ಕೂಡ ಒಂದು. ನಗರದ ಇಂದಿನ ಡೀಸಲ್ ಬೆಲೆ ಲೀಟರ್​ಗೆ 101.86 ರೂ. ಆಗಿದೆ.(ಏಜೆನ್ಸೀಸ್)
ಪ್ರಕೃತಿ ವಿಕೋಪಕ್ಕೆ ತತ್ತರಿಸಿದ ಉತ್ತರಾಖಂಡ: ಮಾದರಿ ನಿರ್ಧಾರ ತೆಗೆದುಕೊಂಡ ಸಿಎಂ

ರಾಜ್ಯದಲ್ಲಿ ಈಗಿರೋದು ಡೂಪ್ಲಿಕೇಟ್​ ಕಾಂಗ್ರೆಸ್: ಎಚ್​.ಡಿ.ರೇವಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
