ನವದೆಹಲಿ:ಇಂಧನ ಬೆಲೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಟಿ ಮುಂದುವರಿದಿದೆ. ತೆರಿಗೆ ಇಳಿಕೆ ಪರಿಣಾಮ ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇತರ ರಾಜ್ಯಗಳಿಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಕೆಲ ದಿನಗಳ ಹಿಂದೆ ದೇಶದ ಹಲವೆಡೆ ಲೀಟರ್​ಗೆ 120 ರೂ. ವರೆಗೆ ತಲುಪಿದ್ದ ಪೆಟ್ರೋಲ್ ಈಗ 100 ರೂ. ಆಸುಪಾಸಿಗೆ ಬಂದಿದೆ. ಇದೇ ವೇಳೆ ಬಿಜೆಪಿಯೇತರ ಆಡಳಿತ ಹೊಂದಿರುವ ರಾಜ್ಯಗಳು ತೆರಿಗೆ ಇಳಿಕೆ ಮಾಡದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಟ್ ಇಳಿಕೆ ಮಾಡಲಾಗಿದೆ. ಒಡಿಶಾ (3 ರೂಪಾಯಿ ವ್ಯಾಟ್ ಕಡಿತ) ಹೊರತು ಪಡಿಸಿ ಬಿಜೆಪಿಯೇತರ ಪಕ್ಷಗಳ ಆಳ್ವಿಕೆ ರಾಜ್ಯಗಳಲ್ಲಿ ಇನ್ನೂ ಪೆಟ್ರೋಲ್, ಡೀಸೆಲ್ ಬೆಲೆ ಮೇಲಿನ ವ್ಯಾಟ್ ಇಳಿಕೆ ಮಾಡಿಲ್ಲ. ದೀಪಾವಳಿ ಆರಂಭದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂಪಾಯಿ, ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕ ಇಳಿಕೆ ಮಾಡಿತ್ತು.
ತೆರಿಗೆ ಇಳಿಸಿದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು:ಕರ್ನಾಟಕ, ಉತ್ತರ ಪ್ರದೇಶ, ಉತ್ತರಾಖಂಡ, ಗುಜರಾತ್, ಹರಿಯಾಣ, ಅಸ್ಸಾಂ, ಚಂಡೀಗಢ, ಗೋವಾ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಸಿಕ್ಕಿಂ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಪುದುಚೆರಿ.
ತೆರಿಗೆ ಇಳಿಸದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು:ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಮೇಘಾಲಯ, ಜಾರ್ಖಂಡ್, ಛತ್ತೀಸ್​ಗಢ, ಪಂಜಾಬ್, ರಾಜಸ್ಥಾನ, ಅಂಡಮಾನ್-ನಿಕೋಬಾರ್.
ಗರೀಬ್ ಕಲ್ಯಾಣ್ ಮುಂದುವರಿಸಿ:ಜಗತ್ತಿನ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ (94ರಿಂದ 101ಕ್ಕೆ ಕುಸಿತ)ವನ್ನು ಕೇಂದ್ರ ಸರ್ಕಾರ ಗಮನಿಸಬೇಕು. ಈ ತಿಂಗಳು ಸ್ಥಗಿತಗೊಳಿಸುವುದಕ್ಕೆ ಉದ್ದೇಶಿಸಿರುವ ಗರೀಬ್ ಕಲ್ಯಾಣ್ ಯೋಜನೆಯನ್ನು ಮುಂದಿನ ವರ್ಷ ಮಾರ್ಚ್ 31ರ ತನಕ ವಿಸ್ತರಣೆ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ದೆಹಲಿಯಲ್ಲಿ ಆಕ್ರೋಶ:ದೆಹಲಿಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಎದುರು ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು. ದೆಹಲಿಯಲ್ಲಿ ಶನಿವಾರ ಪೆಟ್ರೋಲ್ ದರ ಲೀಟರಿಗೆ 110.04 ರೂಪಾಯಿ ಇದ್ದದ್ದು 103.97 ರೂ.ಗೆ ಇಳಿಕೆಯಾಗಿದೆ.
ಬಿಜೆಪಿ, ಟಿಡಿಪಿ ಪ್ರತಿಭಟನೆ ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವಂತೆ ಆಗ್ರಹಿಸಿ ಪ್ರತಿಪಕ್ಷ ಟಿಡಿಪಿ, ಬಿಜೆಪಿ ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದವು. ಪೆಟ್ರೋಲ್, ಡೀಸೆಲ್ ಬೆಲೆ ಮೇಲಿನ ವ್ಯಾಟ್ ಇಳಿಸುವ ವಿಚಾರವಾಗಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮೌನವಾಗಿದ್ದಾರೆ. ಕೇಂದ್ರದ ಕರೆಯನ್ನು ರಾಜ್ಯ ಗಂಭೀರವಾಗಿ ಪರಿಗಣಿಸಿಲ್ಲ. ಜನರಿಗೆ ಹೊರೆಯಾಗು ತ್ತಿರುವುದನ್ನೂ ಸರ್ಕಾರ ನಿರ್ಲಕ್ಷಿಸಿದೆ ಎಂದು ಪ್ರತಿಪಕ್ಷ ನಾಯಕರು ಟೀಕಿಸಿದರು.
ಪುನೀತ್ ರಾಜಕುಮಾರ್ ಸಾವಿನ ಕುರಿತು ಮತ್ತೊಂದು ಅನುಮಾನ!?; ತನಿಖೆಗೆ ಆಗ್ರಹಿಸಿ ಪೊಲೀಸ್ ಠಾಣೆಗೂ ದೂರು…
ಭಾನುವಾರ ಸಂಜೆ ರಾಜ್ಯಾದ್ಯಂತ ಏಕಕಾಲಕ್ಕೆ ಪುನೀತ್ ರಾಜಕುಮಾರ್‌ಗೆ ಬೃಹತ್ ಶ್ರದ್ಧಾಂಜಲಿ: ಎಲ್ಲೆಲ್ಲಿ, ಹೇಗೆ? ಇಲ್ಲಿದೆ ಮಾಹಿತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + five =
Remember me
