ನವದೆಹಲಿ:ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುಮು ಭರ್ಜರಿ ಜಯ ಸಾಧಿಸಿದ್ದಾರೆ. ದೆಹಲಿಯ ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲಿ ಸಂಸದರ ಮತಗಳನ್ನು ಎಣಿಸಲಾಯಿತು. ಇದರಲ್ಲಿ ಮುಮುಗೆ 540 ಮತಗಳು ಸಂದಾಯವಾದವು. ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾಗೆ 208 ಮತಗಳು ದೊರಕಿದವು. 15 ಮತ ಅಮಾನ್ಯಗೊಂಡವು. ಸಂಸದರ ಮತಗಳಲ್ಲಿ ಮುಮುಗೆ ಸಿಕ್ಕ ಮತಮೌಲ್ಯ 5,23,600. (ಶೇ. 72.19). ಯಶವಂತ ಸಿನ್ಹಾಗೆ ದೊರಕಿದ ಮತಮೌಲ್ಯ 1,45,600 (ಶೇ.27.81) ಪ್ರತಿಯೊಬ್ಬ ಸಂಸದರ ಮತಮೌಲ್ಯ 700 (ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಇಲ್ಲ).
ಸೋಲೊಪ್ಪಿದ ಸಿನ್ಹಾ:ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಮುಮು ಶೇ.50ರಷ್ಟು ಮತಗಳಿಸುತ್ತಿದಂತೆಯೇ ಅವರನ್ನು ಯಶವಂತ ಸಿನ್ಹಾ ಅಭಿನಂದಿಸಿದರು. ‘ದೇಶದ ಮೇಲಿನ ಪ್ರೀತಿಯಿಂದ ನನ್ನ ಕರ್ತವ್ಯವನ್ನು ನಿರ್ವಂಚನೆಯಿಂದ ನಿರ್ವಹಿಸಿರುವೆ. ಪ್ರಚಾರ ಸಮಯದಲ್ಲಿ ನಾನು ಪ್ರಸ್ತಾಪಿಸಿದ ವಿಷಯಗಳು ಪ್ರಸ್ತುತವಾಗಿಯೇ ಉಳಿದಿವೆ’ ಎಂದರು.
ಸಂತಾಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುಮು, ಒಡಿಶಾದ ಮಯೂರ್​ಭಂಜ್ ಜಿಲ್ಲೆಯ ಉಪರಬೇಡ ಗ್ರಾಮದ ಕುಸುಮಿ ಪ್ರದೇಶದಲ್ಲಿ 1958ರ ಜೂ.20ರಂದು ಜನಸಿದರು. ಅವರ ತಂದೆ ಮತ್ತು ತಾತ ಗ್ರಾಮ ಪಂಚಾಯಿತಿಯ ಮುಖ್ಯಸ್ಥರಾಗಿದ್ದರು. ಕಲಾ ವಿಷಯದಲ್ಲಿ ಪದವೀಧರೆಯಾದ ಮುಮು, ಕೆಲವು ಕಾಲ ಶಿಕ್ಷಕಿಯಾಗಿದ್ದರು. 1997ರಲ್ಲಿ ರಾಯರಂಗಾಪುರ ನಗರ ಪಂಚಾಯಿತಿಗೆ ಆಯ್ಕೆ ಆಗುವ ಮೂಲಕ ರಾಜಕೀಯ ಪ್ರವೇಶಿಸಿದರು. ನಂತರ ಒಡಿಶಾ ವಿಧಾನಸಭೆಗೆ ಎರಡು ಸಾರಿ ಆಯ್ಕೆ ಆಗಿದ್ದರು. 2000ರಿಂದ 2004ರವರೆಗೆ ಬಿಜೆಡಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿದ್ದರು. 2015ರಿಂದ 2021ರವರೆಗೆ ಜಾರ್ಖಂಡ್​ನ ರಾಜ್ಯಪಾಲೆ ಆಗಿದ್ದರು. ಮುಮು ಕುಟುಂಬದಲ್ಲಿ ದುರಂತಗಳು ಮೇಲಿಂದ ಮೇಲೆ ಎರಗಿತು. ಅವರ ಓರ್ವ ಪುತ್ರ 2009ರಲ್ಲಿ ನಿಗೂಢವಾಗಿ ಸಾವನ್ನಪ್ಪಿದರೆ, ಇನ್ನೊಬ್ಬ ಮಗ 2012ರಲ್ಲಿ ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟ. ದ್ರೌಪದಿ ಪತಿ ಶ್ಯಾಮಚರಣ ಮುಮು ಹೃದಯಾಘಾತದಿಂದ ಅಸುನೀಗಿದರು. ಏಕಮಾತ್ರ ಪುತ್ರಿ ಇದ್ದು, ಅಕೆ ಪತಿಯೊಂದಿಗೆ ಭುವನೇಶ್ವರದಲ್ಲಿ ನೆಲೆಸಿದ್ದಾರೆ. ಒಡಿಶಾದಿಂದ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲಿಗರು ಮುರ್ಮು. ಭಾರತದಲ್ಲಿ 700ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿದ್ದು, 10 ಕೋಟಿಗೂ ಅಧಿಕ ಜನಸಂಖ್ಯೆ ಇದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
