ಹಿಂದಿನ ವಾರದಲ್ಲಿ “ಅಂಫಾನ್​” ಸೈಕ್ಲೋನ್ ಆರ್ಭಟ ಜೋರಾಗಿತ್ತು. ಈ ವಾರ “ನಿಸರ್ಗ” ಸೈಕ್ಲೋನ್​ನ ಆರ್ಭಟ. ನಾಳೆ ಮಹಾರಾಷ್ಟ್ರ ಮತ್ತು ಗುಜರಾತ್​ನ ಕರಾವಳಿಗೆ ಅಪ್ಪಳಿಸಲಿದೆ ಈ ನಿಸರ್ಗ. ನಿನ್ನೆ ಕೇರಳಕ್ಕೆ ಮಳೆ ಪ್ರವೇಶಿಸುತ್ತಿದ್ದಾಗಲೇ ನಿಸರ್ಗ ಚಂಡಮಾರುತ ತಲ್ಲಣ ಉಂಟುಮಾಡುವ ಮುನ್ನೆಚ್ಚರಿಕೆಯೂ ಪ್ರಕಟವಾಗಿತ್ತು. ಚಂಡಮಾರುತದ ಪರಿಣಾಮ ಕೇರಳದ ಹಲವೆಡೆ ಭಾರಿ ಮಳೆಯಾಗಿದ್ದು, ಒಂಭತ್ತು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿತ್ತು. ಈ ವಿದ್ಯಮಾನದ ನಡುವೆ ಗಮನಸೆಳೆಯುವಂಥದ್ದು ಸೈಕ್ಲೋನ್​ನ ಹೆಸರು. ಸೈಕ್ಲೋನ್​ಗಳಿಗೆ ಹೆಸರನ್ನು ಇಡುವುದು ಯಾರು? ಹೇಗೆ ಇಡ್ತಾರೆ? ಅದಕ್ಕೇನಾದರೂ ಪ್ರಕ್ರಿಯೆ ಇದೆಯೇ? ಎಂಬ ಸಹಜ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಜಗತ್ತಿನಾದ್ಯಂತ ಇದೆಯೇ ಇಂಥ ಪದ್ಧತಿ?
ಜಗತ್ತಿನಾದ್ಯಂತ ಚಂಡಮಾರುತಗಳಿಗೆ ಹೆಸರಿಡುವ ಪದ್ಧತಿ ಚಾಲ್ತಿಯಲ್ಲಿದೆ. ಆಯಾ ರೀಜಿನಲ್​ ಸ್ಪೆಷಲೈಸ್ಡ್​ ಮೀಟಿಯೋರೋಲಾಜಿಕಲ್​ ಸೆಂಟರ್​​ಗಳು ಮತ್ತು ಟ್ರಾಪಿಕಲ್ ಸೈಕ್ಲೋನ್ ವಾರ್ನಿಂಗ್ ಸೆಂಟರ್​ಗಳು ಚಂಡಮಾರುತಗಳಿಗೆ ಹೆಸರಿಡುವ ಕೆಲಸ ಮಾಡುತ್ತವೆ. ಜಗತ್ತಿನಾದ್ಯಂತ ಒಟ್ಟು ಆರು ರೀಜಿನಲ್​ ಸ್ಪೆಷಲೈಸ್ಡ್​ ಮೀಟಿಯೋರೋಲಾಜಿಕಲ್​ ಸೆಂಟರ್​​ಗಳು, ಭಾರತದ ಐಎಂಡಿಯೂ ಸೇರಿ ಐದು ಟ್ರಾಪಿಕಲ್ ಸೈಕ್ಲೋನ್ ವಾರ್ನಿಂಗ್ ಸೆಂಟರ್​ಗಳಿವೆ. ಬಂಗಾಳ ಕೊಲ್ಲಿ, ಅರಬ್ಬಿ ಸಮುದ್ರ ಸೇರಿ ಉತ್ತರ ಹಿಂದು ಮಹಾಸಾಗರದಲ್ಲಿನ ಚಂಡಮಾರುತಗಳಿಗೆ ಹೆಸರಿಡುವ ಹೊಣೆಗಾರಿಕೆ ಐಎಂಡಿಯದ್ದು.
ಸದ್ಯದ ಮಾಹಿತಿ ಪ್ರಕಾರ ಅರಬ್ಬಿ ಸಮುದ್ರದಲ್ಲಿ ಭಾರಿ ವಾಯುಭಾರ ಕುಸಿತ ಉಂಟಾಗಿದ್ದು, ನಿಸರ್ಗ ಮಹಾರಾಷ್ಟ್ರ, ಗುಜರಾತ್​ ಕರಾವಳಿ ಕಡೆಗೆ ಸಂಚರಿಸುತ್ತಿದೆ. ಈ ವಾಯುಭಾರ ಕುಸಿತ ಮುಂದಿನ 12 ಗಂಟೆ ತನಕ ಮುಂದುವರಿಯಲ್ಲಿದ್ದು ಚಂಡಮಾರುತ ಮತ್ತೂ 12 ಗಂಟೆ ಬಲವಾಗಿರಲಿದೆ. ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತಿನ ಕರಾವಳಿಯನ್ನು ದಾಟಿ ಮುಂದೆ ಹೋಗಲಿದೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹರಿಹರೇಶ್ವರ ಪಟ್ಟಣ ಮತ್ತು ದಮನ್​​ಗಳಲ್ಲಿ ನಾಳೆ ಅಪರಾಹ್ನ ಚಂಡಮಾರುತದ ತೀವ್ರ ಪರಿಣಾಮ ಕಾಣಲಿದೆ. ಅರಬ್ಬೀ ಸಮುದ್ರದಲ್ಲಿ ನಿಸರ್ಗ ಚಂಡಮಾರುತ ಈಗ ಅಬ್ಬರಿಸುತ್ತಿದೆ. ಈಗಿನ ಚಂಡಮಾರುತಕ್ಕೆ ನಿಸರ್ಗ ಎಂಬ ಹೆಸರನ್ನು ಬಾಂಗ್ಲಾದೇಶ ಶಿಫಾರಸು ಮಾಡಿದ್ದು. 2019ರ ಮೇ 3ರಂದು ಒಡಿಶಾದಲ್ಲಿ ಭೂಕುಸಿತಕ್ಕೂ ಕಾರಣವಾಗಿದ್ದ ಚಂಡಮಾರುತಕ್ಕೆ ಫಣಿ ಎಂದು ಹೆಸರಿಡುವ ಪ್ರಸ್ತಾವನೆಯನ್ನು ಮುಂದಿಟ್ಟದ್ದೂ ಬಾಂಗ್ಲಾದೇಶವೇ ಆಗಿತ್ತು. ಇದು ಭಾರಿ ಹಾನಿಯನ್ನೇ ಮಾಡಿತ್ತು.
ಇದನ್ನೂ ಓದಿ:ಆಯುಷ್ಮಾನ್​ ಭಾರತ್​ ಯೋಜನೆಯಡಿ ಉದ್ಯೋಗ: ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ ಎಚ್ಚರ…!
ನಾಮಕರಣ ಶುರುವಾಗಿದ್ದೇಕೆ?
ಸೈಂಟಿಸ್ಟ್​ ಸಮುದಾಯ ಮತ್ತು ವಿಪತ್ತು ನಿರ್ವಾಹಕರಿಗೆ ಅನುಕೂಲವಾಗಲಿ ಎಂದು ಉಷ್ಣ ವಲಯದ ಚಂಡಮಾರುತಗಳಿಗೆ ಹೆಸರಿಡುವ ಪ್ರಯತ್ನ ನಡೆಯಿತು. ಆ ಮೂಲಕ ಚಂಡಮಾರುತಗಳನ್ನು ಗುರುತಿಸಿ, ಜನರಲ್ಲಿ ಜಾಗೃತಿ ಮೂಡಿಸಲು ಇದು ಅನುಕೂಲಕರ. ಹೆಚ್ಚಿನ ಹಾನಿಯನ್ನೂ ತಪ್ಪಿಸಬಹುದು ಎಂಬ ಲೆಕ್ಕಾಚಾರ ಅಲ್ಲಿತ್ತು. ದ ವರ್ಲ್ಡ್​ ಮೀಟಿಯೋರೋಲಾಜಿಕಲ್​ ಆರ್ಗನೈಸೇಷನ್, ಯುಎನ್​ ಎಕಾನಮಿಕ್​ ಆ್ಯಂಡ್ ಸೋಷಿಯಲ್​ ಕಮಿಷನ್ ಫಾರ್ ಏಷ್ಯಾ ಆ್ಯಂಡ್ ದ ಪೆಸಿಫಿಕ್ 2000ನೇ ಇಸವಿಯಲ್ಲಿ​ ತನ್ನ 27ನೇ ಸಭೆಯನ್ನು ನಡೆಸಿತ್ತು. ಅಲ್ಲಿ ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿನ ಟ್ರಾಪಿಕಲ್ ಸೈಕ್ಲೋನ್​ಗಳಿಗೆ ಹೆಸರಿಡುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತು. ಹಾಗೆ, 2000ನೇ ಇಸವಿಯಲ್ಲಿ ಹಿಂದು ಮಹಾಸಾಗರದಲ್ಲಿನ ಚಂಡಮಾರುತಗಳಿಗೆ ಹೆಸರಿಡುವ ಪದ್ಧತಿ ಆರಂಭವಾಯಿತು. ಇದಕ್ಕೆ 2004ರಲ್ಲಿ ಒಂದು ಸೂತ್ರವೂ ಸಿದ್ಧವಾಯಿತು. ಇದರ ನಂತರದ ಚಂಡಮಾರುತಗಳ ಹೆಸರನ್ನೊಮ್ಮೆ ಗಮನಿಸಿ- ಗತಿ (ಭಾರತ ಸೂಚಿಸಿದ್ದು), ನಿವಾರ್​ (ಇರಾನ್​ ಸೂಚಿಸಿದ್ದು), ಬುರೇವಿ (ಮಾಲ್ಡೀವ್ಸ್​ ಸೂಚಿಸಿದ್ದು), ತೌಕ್ತೆ (ಮ್ಯಾನ್ಮಾರ್​ ಸೂಚಿಸಿದ್ದು), ಯಾಸ್​ (ಒಮಾನ್ ಸೂಚಿಸಿದ್ದು).
ಇದನ್ನೂ ಓದಿ:ಕರೊನಾಘಾತದ ನಡುವೆಯೇ 100ಕಿ.ಮೀ ವೇಗದಲ್ಲಿ ನುಗ್ಗುತಿದೆ ‘ನಿಸರ್ಗ’: ಮುಂಬೈನಲ್ಲಿ ನಡುಕ
ನಾಮಕರಣಕ್ಕೂ ಒಂದು ಸಮಿತಿಚಂಡಮಾರುತಗಳಿಗೆ ನಾಮಕರಣ ಮಾಡುವುದಕ್ಕೆ ಒಂದು ಸಮಿತಿ ಇದ್ದು, ಆರಂಭದಲ್ಲಿ ಅದರಲ್ಲಿ ಇದ್ದ ಸದಸ್ಯ ರಾಷ್ಟ್ರಗಳ ಸಂಖ್ಯೆ 8. ಅವುಗಳೆಂದರೆ-ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್​, ಮ್ಯಾನ್ಮಾರ್​, ಒಮಾನ್​, ಪಾಕಿಸ್ತಾನ. ನಂತರ 2018ರಲ್ಲಿ ಇರಾನ್​ ಮತ್ತು ಕತಾರ್​, ಸೌದಿ ಅರೇಬಿಯಾ, ಯುಎಇ, ಯುಮೆನ್​ಗಳ ಸೇರ್ಪಡೆಯಾಗಿದೆ. ಹಾಗೆ ಸಮಿತಿಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 13ಕ್ಕೆ ಏರಿಕೆಯಾಯಿತು.  ಈ ಹದಿಮೂರು ರಾಷ್ಟ್ರಗಳು ಸೈಕ್ಲೋನ್​ಗೆ ಹೆಸರುಗಳನ್ನು ಸೂಚಿಸಿದ ಪ್ರಸ್ತಾವನೆಯನ್ನು ದ ಇಂಡಿಯಾ ಮೀಟಿಯೋರೋಲಾಜಿಕಲ್​ ​ ಡಿಪಾರ್ಟ್​ಮೆಂಟ್​(ಐಎಂಡಿ)ಗೆ ಸಲ್ಲಿಸುತ್ತವೆ. ಇದರಂತೆ, 2020ರ ಏಪ್ರಿಲ್​ನಲ್ಲಿ ಬಿಡುಗಡೆ ಮಾಡಿದ ಸೈಕ್ಲೋನ್​ಗಳ ಹೆಸರಿನಲ್ಲಿ ಅರ್ನಬ್​, ನಿಸರ್ಗ, ಅಗಾ, ವ್ಯೋಮ್​, ಅಝರ್​, ಪ್ರಭಂಜನ್​, ತೇಜ್​, ಗತಿ, ಲುಲು ಸೇರಿ 160 ಹೆಸರುಗಳಿವೆ. ಅಂಫನ್ ಹೆಸರು ಹಿಂದಿನ ಪಟ್ಟಿಯಲ್ಲಿ ಬಳಕೆಯಾಗದೇ ಉಳಿದಿತ್ತು. ಅದನ್ನು ಈ ಪಟ್ಟಿಗೆ ಸೇರಿಸಲಾಗಿತ್ತು.
ಲಡಾಖ್​ ಬಿಕ್ಕಟ್ಟಿನ ಕುರಿತು ಜೂ.6ಕ್ಕೆ ಮಿಲಿಟರಿ ಅಧಿಕಾರಿಗಳ ಮಾತುಕತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
