ಮುಂಬೈ:ಭಾರತದ ಬಲಪಂಥೀಯರನ್ನು ತಾಲಿಬಾನಿಗಳಿಗೆ ಸಮೀಕರಿಸಿದ ಬಾಲಿವುಡ್​ ರಚನಾಕಾರ ಮತ್ತು ಕವಿ ಜಾವೆದ್​ ಅಕ್ತರ್​ ಅವರ ಮೇಲೆ ಮಹಾರಾಷ್ಟ್ರದ ಬಿಜೆಪಿ ಶಾಸಕ ಹಾಗೂ ವಕ್ತಾರ ರಾಮ್​ ಕದಮ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಅಸಂಬದ್ಧ ಹೇಳಿಕೆ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್​​ನಂಥ ಸೇವಾ ಸಂಘಟನೆಗಳ ಕಾರ್ಯಕರ್ತರಲ್ಲಿ ಕೈಮುಗಿದು ಕ್ಷಮೆ ಕೇಳುವವರೆಗೆ ಅಕ್ತರ್​​ರ ಯಾವುದೇ ಸಿನಿಮಾಗೆ ದೇಶದಲ್ಲಿ ಬಿಡುಗಡೆಯಾಗುವ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಎನ್​ಡಿಟಿವಿಯೊಂದಿಗಿನ ಸಂದರ್ಶನದಲ್ಲಿ ಬಲಪಂಥೀಯ ಜನಸಂಘಟನೆಗಳೂ ತಾಲಿಬಾನಿ ಮನಸ್ಥಿತಿ ಹೊಂದಿವೆ ಎಂದಿದ್ದಾರೆ. “ತಾಲಿಬಾನ್​ ಇಸ್ಲಾಮಿಕ್ ರಾಜ್ಯ ಬಯಸುತ್ತಿರುವಂತೆಯೇ, ಹಿಂದೂ ರಾಷ್ಟ್ರವನ್ನು ಬಯಸುವ ಜನರಿದ್ದಾರೆ. ಈ ಜನರು ಅದೇ ಮನಸ್ಥಿತಿಯುಳ್ಳವರು – ಮುಸಲ್ಮಾನರಾಗಲಿ, ಕ್ರಿಶ್ಚಿಯನ್​, ಜ್ಯೂಸ್ ಅಥವಾ ಹಿಂದೂಗಳಾಗಲಿ” ಎಂದಿದ್ದರು.
ಇದನ್ನೂ ಓದಿ:ಕಾಶ್ಮೀರದ ಮುಸ್ಲಿಮರ ಬಗ್ಗೆ ಮಾತನಾಡೋದು ನಮ್ಮ ಹಕ್ಕು: ಕೊನೆಗೂ ನರಿಬುದ್ಧಿ ತೋರಿದ ತಾಲಿಬಾನ್..!​
ಮುಂದುವರೆದು, “ತಾಲಿಬಾನ್​ ಅನಾಗರಿಕವಾಗಿದ್ದು, ಅವರ ಕೃತ್ಯಗಳು ಖಂಡನೀಯವಾಗಿದೆ. ಆದರೆ, ಆರ್​ಎಸ್​ಎಸ್​, ವಿಎಚ್​ಪಿ ಮತ್ತು ಬಜರಂಗ್​ ದಳ್​ಗಳನ್ನು ಬೆಂಬಲಿಸುವ ಜನರೂ ಅದೇ ರೀತಿಯವರು” ಎಂದು ಮಾಜಿ ಸಂಸದರೂ ಆದ ಅಕ್ತರ್​ ಹೇಳಿದ್ದರು ಎಂದು ಎನ್​ಡಿಟಿವಿ ವರದಿ ಮಾಡಿದೆ.
ಜಾವೆದ್​ ಅಕ್ತರ್​ ಅವರ ಈ ಮಾತುಗಳು ನಾಚಿಕೆಗೇಡು. ಅಷ್ಟೇ ಅಲ್ಲ, ಸಂಘ ಪರಿವಾರದ ಪದಾಧಿಕಾರಿಗಳಾಗಿರುವ ಮತ್ತು ಅವುಗಳ ಸಿದ್ಧಾಂತವನ್ನು ಪಾಲಿಸುವ ಕೋಟ್ಯಂತರ ಜನರಿಗೆ ನೋವು ತರುವಂತಹುದೂ, ಅವಮಾನ ಮಾಡುವಂತಹುದೂ ಆಗಿದೆ ಎಂದು ಬಿಜೆಪಿಯ ರಾಮ್​ ಕದಮ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್​ ಮಾಡಿರುವ ವಿಡಿಯೋದಲ್ಲಿ ರಾಮ್​ ಕದಮ್​ ಅವರು,​ “ಹೇಳಿಕೆ ನೀಡುವ ಮುಂಚೆ ಸ್ವಲ್ಪವಾದರೂ ವಿಚಾರ ಮಾಡಬೇಕಿತ್ತು. ಅದೇ ಸಂಘ ಪರಿವಾರಕ್ಕೆ ಸೇರಿರುವ ಜನರು ಇಂದು ಈ ರಾಷ್ಟ್ರದ ಆಡಳಿತವನ್ನು ನಡೆಸುತ್ತಿದ್ದಾರೆ, ರಾಜಧರ್ಮದ ಪಾಲನೆ ಮಾಡುತ್ತಿದ್ದಾರೆ. ತಾಲಿಬಾನಿ ವಿಚಾರಧಾರೆ ಇದ್ದಿದ್ದರೆ, ಅವರು ಈ ರೀತಿ ಹೇಳಿಕೆ ನೀಡಲು ಸಾಧ್ಯವಾಗುತ್ತಿತ್ತೇ? ಈ ಪ್ರಶ್ನೆಯ ಉತ್ತರದಲ್ಲೇ ಅವರ ಹೇಳಿಕೆ ಎಷ್ಟು ಟೊಳ್ಳಾಗಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದಿದ್ದಾರೆ.
#संघतथा#विश्वहिंदूपरिषदके करोडों कार्यकर्ताओ की, जब तक हाथ जोड़कर#जावेदअख्तरमाफी नही मांगते. तब तक उनकी तथा उनके परिवार की कोई भी#फिल्मइस#माभारतीके भूमि पर नहीं चलेगी.pic.twitter.com/ahWgVQWuvH
— Ram Kadam (@ramkadam)September 4, 2021

“ಎಲ್ಲಿಯವರೆಗೆ ಅವರು(ಜಾವೆದ್​ ಅಕ್ತರ್​) ಭಾರತಮಾತೆಯ ಸೇವೆಗೆ ಸಮರ್ಪಿತವಾಗಿರುವ ಸಂಘ ಕಾರ್ಯಕರ್ತರ ಕ್ಷಮೆ ಕೇಳುವುದಿಲ್ಲವೋ ಅಲ್ಲಿಯವರೆಗೆ ಅವರ ಅಥವಾ ಅವರ ಕುಟುಂಬದವರ ಯಾವುದೇ ಫಿಲ್ಮನ್ನು ಭಾರತಮಾತೆಯ ಭೂಮಿಯ ಮೇಲೆ ನಡೆಯಲು ನಾವು ಬಿಡುವುದಿಲ್ಲ” ಎಂದಿದ್ದಾರೆ.(ಏಜೆನ್ಸೀಸ್)
VIDEO| ತಾಲಿಬಾನ್​ ವಾಪಸಾತಿಯನ್ನು ಸಂಭ್ರಮಿಸುವ ಮಂದಿಗೆ ನಟ ನಸೀರುದ್ದಿನ್​ ಶಾಹ್​ ಹೇಳಿದ್ದಿಷ್ಟು!

‘ಈಸ್ಟ್​ ಇಂಡಿಯಾ ಕಂಪೆನಿ ಪ್ರವೃತ್ತಿ ಬಿಡಿ’: ಇನ್​ಸ್ಟಾಗ್ರಾಂ ಮೇಲೆ ಕಂಗನಾ ಗರಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − two =
Remember me
