ಲಖನೌ:ಟ್ರಾಫಿಕ್​ ಪೊಲೀಸರು ದಂಡ ವಿಧಿಸಿದ್ದಕ್ಕೆ ಕುಪಿತಗೊಂಡು ವ್ಯಕ್ತಿಯೋರ್ವ ತನ್ನ ಲಗ್ಗೇಜ್​ ಆಟೋಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಉತ್ತರಪ್ರದೇಶದ ಬುಲಂದರ್​ಶಹರ್​ನಲ್ಲಿ ನಡೆದಿದೆ.
ಸುದ್ದಿ ಮೂಲಗಳ ಪ್ರಕಾರ ಈ ವರ್ಷ ಮಾರ್ಚ್​ನಲ್ಲಿ ವ್ಯಕ್ತಿ ಲಗ್ಗೇಜ್​ ಆಟೋ ಖರೀದಿಸಿದ್ದರಂತೆ. ಆದರೆ, ಸಂಚಾರಿ ಪೊಲೀಸರು ವಿಧಿಸಿದ ದಂಡದಿಂದ ಸಿಟ್ಟಿಗೆದ್ದು ಆಟೋಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.
उत्तर प्रदेश : जिला बुलंदशहर में दुकान के बाहर खड़े टेंपो का पुलिस ने चालान काट दिया। गुस्साए युवक ने अपने टेंपो में आग लगा दी।पुलिस के अनुसार– टेंपो सड़क पर खड़ा होने से ट्रैफिक बाधित हो रहा था।pic.twitter.com/3F5VHkc8cC
ಇದನ್ನೂ ಓದಿ:ವಿನೇಶ್ ಸಲ್ಲಿಸಿದ್ದ​ ಮೇಲ್ಮನವಿ ತಿರಸ್ಕರವಾಗಲು ಕಾರಣವೇನು?; ಪದಕ ಕೈತಪ್ಪಿದರ ಕುರಿತು CAS ನೀಡಿದ ಕಾರಣ ಹೀಗಿದೆ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ರಕ್ಷಾಬಂಧನ ಪ್ರಯುಕ್ತ ನಗರದ ವಿವಿಧೆಡೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಈ ವೇಳೆ ಪಹಸು-ಖುರ್ಜಾ ರಸ್ತೆಯಲ್ಲಿ ಆಟೋ ಒಂದನ್ನು ನೋ ಪಾರ್ಕಿಂಗ್​ನಲ್ಲಿ ಜೋನ್​ನಲ್ಲಿ ನಿಲ್ಲಿಸಿರುವುದನ್ನು ಕಂಡು ಕರೌರಿ ಪೊಲೀಸ್​ ಠಾಣಾಧಿಕಾರಿ ಅದರ ಮಾಲೀಕನಿಗೆ ದಂಡ ವಿಧಿಸಿದ್ದಾರೆ. ದಂಡದ ರಶೀಸಿ ಪಡೆದು ವಾಹನವನ್ನು ಬೇರೆಡೆ ನಿಲ್ಲಿಸಿದ ಮಾಲೀಕ ಕೂಡಲೇ ಅದಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಬೆಂಕಿಯನ್ನು ನಂದಿಸಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಘಟನೆ ನಡೆದಾಗ ಆಟೋ ಚಾಲಕ ಪಾನಮತ್ತನಾಗಿದ್ದ ಎಂದು ಹೇಳಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆತನಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 12 =
Remember me
